ETV Bharat / city

ಸಿದ್ದರಾಮಯ್ಯ,ದೇವೇಗೌಡರ ಮನವಿಗೂ ಉಪವಾಸ ಸತ್ಯಾಗ್ರಹ ಕೈಬಿಡದ ಪ್ರಸನ್ನ ಹೆಗ್ಗೋಡು..

ಸತತ ನಾಲ್ಕು ದಿನದಿಂದ ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹದಲ್ಲಿರುವ ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡು ಅವರನ್ನ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿಯಾಗಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು.

ಉಪವಾಸ ಸತ್ಯಾಗ್ರಹ ಕೈಬಿಡಿ..ಪ್ರಸನ್ನ ಅವರಿಗೆ ಸಿದ್ದರಾಮಯ್ಯ,ದೇವೇಗೌಡರ ಮನವಿ
author img

By

Published : Oct 10, 2019, 7:31 AM IST

ಬೆಂಗಳೂರು: ಸತತ ನಾಲ್ಕು ದಿನದಿಂದ ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹದಲ್ಲಿರುವ ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡು ಅವರನ್ನ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿಯಾಗಿ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.

ಉಪವಾಸ ಸತ್ಯಾಗ್ರಹ ಕೈಬಿಡಿ.. ಪ್ರಸನ್ನ ಅವರಿಗೆ ಸಿದ್ದರಾಮಯ್ಯ,ದೇವೇಗೌಡರ ಮನವಿ..

ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು, ಉಪವಾಸ ತಕ್ಷಣ ಕೈಬಿಡದಿದ್ದರೆ,ಆರೋಗ್ಯ ಹದಗೆಡಲಿದೆ. ಕೋಮಾ ಪರಿಸ್ಥಿತಿಗೂ ಹೋಗಬಹುದು. ಸರ್ಕಾರ ತಕ್ಷಣ ಈ ಬಗ್ಗೆ ಕ್ರಮವಹಿಸಬೇಕು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಮತನಾಡಿ, ಜಿಎಸ್​ಟಿ ಶೂನ್ಯ ತೆರಿಗೆ ಮಾಡಲು ಕೇಂದ್ರಕ್ಕೆ ಸಾಧ್ಯವಿದೆ. ಗುಡಿ ಕೈಗಾರಿಕೆಗೆ ತೆರಿಗೆ ಶೂನ್ಯ ಮಾಡುವುದು ಅಸಾಧ್ಯವೇನಲ್ಲ. ಪ್ರಸನ್ನ ಅವರ ಆರೋಗ್ಯದ ಬಗ್ಗೆ ನನಗೆ ಚಿಂತೆಯಿದೆ. ಹೀಗಾಗಿ ಡಾ.ಮಂಜುನಾಥ್ ಅವರ ಜೊತೆ ಮಾತನಾಡಿದ್ದೇನೆ.ನಾನು ಕೂಡ ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಿದ್ದೇನೆ ಎಂದರು.

ಇನ್ನು, ನಿಮಗೆ ಲೋ ಶುಗರ್​ ಇದೆ. ಹೀಗಾಗಿ ಉಪವಾಸ ಮುಂದುವರೆಸಬೇಡಿ. ನಿಮ್ಮ ಹೋರಾಟದ ಉದ್ದೇಶ ಒಳ್ಳೆಯದಿದೆ. ಜೀವ ಇದ್ದರೆ ಅಲ್ವಾ ಹೋರಾಟ ಮಾಡೋಕಾಗೋದು. ನಿಮ್ಮ ಪ್ರತಿಭಟನೆಯನ್ನು ಮುಂದುವರೆಸಿ.ಆದರೆ, ಉಪವಾಸ ಸತ್ಯಾಗ್ರಹ ಬೇಡ. ನಿಮಗೆ ವಯಸ್ಸಾಗಿದೆ ಉಪವಾಸ ಸತ್ಯಾಗ್ರಹ ಮಾಡಬೇಡಿ ಅಂತಾ ಮನವಿ ಮಾಡಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ರಾಜ್ಯಸಭಾ ಸದಸ್ಯ ಎಲ್​.ಹನುಮಂತಯ್ಯ,ಸಂಸತ್ ಆರಂಭವಾದ ತಕ್ಷಣ ಆರ್ಥಿಕ ಹಿಂಜರಿತದ ಬಗ್ಗೆ ಪ್ರಸ್ತಾಪ ಮಾಡ್ತೀವಿ. ನೀವು ಸತ್ತರೆ ವಿಷಯ ಸತ್ತು ಹೋಗುತ್ತೆ. ದಯವಿಟ್ಟು ಸತ್ಯಾಗ್ರಹ ಕೈಬಿಡಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಎಂದು ಮನವಿ ಮಾಡಿದ್ರು.

ಆದರೆ, ಇವರ ಮಾತಿಗೆ ಬಗ್ಗದ ಪ್ರಸನ್ನ ಅವರು,ನಾನು ಯಾವುದೇ ಕಾರಣಕ್ಕೂ ಸತ್ಯಾಗ್ರಹ ಕೈಬಿಡಲ್ಲ ಎಂದು ಗಾಂಧಿ ಭವನದ ಬಳಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.

Intro:ಪ್ರಸನ್ನ ಅವರ ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಸಿದ್ದರಾಮಯ್ಯ,ದೇವೇಗೌಡರ ಆಗ್ರಹ
ಬೆಂಗಳೂರು- ಸತತ ನಾಲ್ಕು ದಿನದಿಂದ ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹದಲ್ಲಿರುವ ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡು ಅವರನ್ನು ಮಾಜಿ ಸಿಎಂ ಸಿದ್ಧರಾಮಯ್ಯ, ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿಯಾಗಿ ಮಾತನಾಡಿದರು. ಇದೇ ವೇಳೆ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಆಗ್ರಹಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಮಾತನಾಡಿ, ಉಪವಾಸ ತಕ್ಷಣ ಕೈಬಿಡದಿದ್ದರೆ ಆರೋಗ್ಯ ಹದಗೆಡಲಿದೆ. ಕೋಮಾ ಪರಿಸ್ಥಿತಿಗೂ ಹೋಗಬಹುದು. ಸರ್ಕಾರ ತಕ್ಷಣ ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಜಿಎಸ್ ಟಿ ಶೂನ್ಯ ತೆರಿಗೆ ಮಾಡಲು ಕೇಂದ್ರಕ್ಕೆ ಸಾಧ್ಯವಿದೆ.ಗುಡಿ ಕೈಗಾರಿಕೆಗೆ ತೆರಿಗೆ ಶೂನ್ಯ ಮಾಡುವುದು ಅಸಾಧ್ಯವೇನಲ್ಲ. ಪ್ರಸನ್ನ ಅವರ ಆರೋಗ್ಯದ ಬಗ್ಗೆ ನನಗೆ ಚಿಂತೆ ಇದೆ. ಹೀಗಾಗಿ ಡಾ.ಮಂಜುನಾಥ್ ಅವರ ಜೊತೆ ಮಾತನಾಡಿದ್ದೇನೆ.
ನಾನು ಕೂಡ ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಿದ್ದೇನೆ ಎಂದರು.
ಇನ್ನು ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು. ಲೋ ಶುಗರ್ ಆಗಿದೆ ಉಪವಾಸ ಮುಂದುವರೆಸಬೇಡಿ.ನಿಮ್ಮ ಹೋರಾಟದ ಉದ್ದೇಶ ಒಳ್ಳೆಯದಿದೆ.ಜೀವ ಇದ್ದರೆ ಅಲ್ವಾ ಹೋರಾಟ ಮಾಡೋಕಾಗೋದು. ನಿಮ್ಮ ಪ್ರತಿಭಟನೆಯನ್ನು ಮುಂದುವರೆಸಿ ಆದರೆ ಉಪವಾಸ ಸತ್ಯಾಗ್ರಹ ಬೇಡ. ನಿಮಗೆ ವಯಸ್ಸಾಗಿದೆ ಉಪವಾಸ ಸತ್ಯಾಗ್ರಹ ಮಾಡಬೇಡಿ ಅಂತ್ಯ ಮಾಡಿ ಎಂದು ಮನವಿ ಮಾಡಿದರು.
ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಸತ್ಯಾಗ್ರಹ ಸ್ಥಳಕ್ಕೆ ಆಗಮಸಿದರು. ಸಂಸತ್ ಆರಂಭವಾದ ತಕ್ಷಣ ಆರ್ಥಿಕ ಹಿಂಜರಿತದ ಬಗ್ಗೆ ಪ್ರಸ್ತಾಪ ಮಾಡ್ತಿವಿ. ನೀವು ಸತ್ರೆ ವಿಷಯ ಸತ್ತು ಹೋಗುತ್ತೆ. ದಯವಿಟ್ಟು ಸತ್ಯಾಗ್ರಹ ಕೈಬಿಡಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಎಂದು
ಎಲ್ ಹನುಮಂತಯ್ಯ ಮವಿ ಮಾಡಿದರು.
ನಾನು ಯಾವುದೇ ಕಾರಣಕ್ಕೂ ಸತ್ಯಾಗ್ರಹ ಕೈಬಿಡಲ್ಲ ಎಂದು ಪ್ರಸನ್ನ ಅವರು ಗಾಂಧೀ ಭವನದ ಬಳಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.

ಸೌಮ್ಯಶ್ರೀ
Kn_bng_03_Siddu_HDD_visit_7202707Body:
..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.