ಬೆಂಗಳೂರು: ಪ್ರತಿ ನಗರದಲ್ಲೂ, ಪ್ರತಿ ಪ್ರಮುಖ ರಸ್ತೆಗಳಲ್ಲಿ ಚಾಟ್ ಸೆಂಟರನ್ನು ನಾವು ನೋಡಬಹುದು. ಆದರೆ ಶುಚಿ ರುಚಿಯಾದ ಚಾಟ್ ಸಿಗುವುದು ಕೆಲವೇ ಕೆಲವು ಶಾಪ್ಗಳಲ್ಲಿ. ಇದೀಗ ಅಂತದ್ದೊಂದು ಚಾಟ್ ಸೆಂಟರ್ ಹೊಸದಾಗಿ ಆರಂಭಗೊಂಡಿದೆ. ಆನೇಕಲ್ನಲ್ಲಿ ಹೊಸದಾಗಿ ಆರಂಭಗೊಂಡಿರುವ ಈ ಸಮೋಸ, ಮೊಮೋಸ್, ಚಾಯ್ (ಸಮೊಚಾ) ಮಳಿಗೆಯನ್ನು ನಟಿ ಶ್ವೇತಾ ಶ್ರೀ ವಾತ್ಸವ್ ಉದ್ಘಾಟಿಸಿದ್ದಾರೆ.
ಚಾಟ್ಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಡಯಟ್ ಮಾಡುತ್ತೇನೆ ಎನ್ನುವವರು ಕೂಡಾ ಒಮ್ಮೆ ಬಾಯಲ್ಲಿ ನೀರೂರಿಸುವ ಚಾಟ್ಗಳನ್ನು ಸವಿಯದೆ ಬಿಡುವುದಿಲ್ಲ. ಟೇಸ್ಟಿಂಗ್ ಪೌಡರ್, ಕೃತಕ ಬಣ್ಣಗಳನ್ನು ತುಂಬಿ ಆರೋಗ್ಯ ಹಾಳು ಮಾಡುವ ಪದಾರ್ಥಗಳನ್ನು ಪಕ್ಕಕ್ಕಿಟ್ಟು ಕಣ್ಣೆದುರೇ ಶುಚಿಯಾದ ಆಹಾರ ಸಾಮಗ್ರಿಗಳನ್ನು ಬಳಸಿ ಪಾರದರ್ಶಕ ಸೂರ್ಯಕಾಂತಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಈ 'ಸಮೊಚಾ' ಚಾಟ್ ಸೆಂಟರ್ನಲ್ಲಿ ನೀಡಲಾಗುವುದು. ಅದರಲ್ಲೂ ಕೈಗೆಟುಕುವ ದರದಲ್ಲಿ ವಿವಿಧ ರೀತಿಯ ಮೊಮೋಸ್, ಆರ್ಗ್ಯಾನಿಕ್ ಟೀ, ಮತ್ತು ಸಮೋಸಾಗಳು ಇಲ್ಲಿ ದೊರೆಯುತ್ತವೆ. ಚಂದಾಪುರ-ಆನೇಕಲ್ ರಸ್ತೆಯಲ್ಲಿಈ ಚಾಟ್ ಸೆಂಟರ್ ತಲೆಯೆತ್ತಿದೆ. ಅನೀಶ್ ಭನ್ವಾಡಿಯಾ ಅವರ ಕನಸಿನ ಕೂಸಾದ 'ಸಮೊಚಾ' ಈಗಾಗಲೇ ದೇಶದ ವಿವಿಧ ರಾಜಧಾನಿಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ಫ್ರಾಂಚೈಸ್ ಮಾಲೀಕರಾದ ಪವಿತ್ರಾ ನಟರಾಜ್ ಹಾಗೂ ನಟಿ ಶ್ವೇತಾ ಶ್ರೀವಾತ್ಸವ್ ಕಾರ್ಯಕ್ರಮ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.