ETV Bharat / city

ರಾಜ್ಯ ರಾಜಕಾರಣಕ್ಕೆ ಮರಳಲ್ಲ, ರಾಜ್ಯಾಧ್ಯಕ್ಷೆ, ಮುಖ್ಯಮಂತ್ರಿ ಸ್ಥಾನವೆಲ್ಲ ಊಹಾಪೋಹ:  ಕರಂದ್ಲಾಜೆ..!

author img

By

Published : Jun 3, 2022, 3:12 PM IST

Updated : Jun 3, 2022, 4:07 PM IST

ನಾನು ಮೊನ್ನೆ ಮೊನ್ನೆ ಸಚಿವೆ ಆಗಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರೋದೆಲ್ಲಾ ಕೇವಲ ಊಹಾಪೋಹ ಮಾತ್ರ. ದೇಶದಲ್ಲಿ ರೈತರಿಗೆ ಸಹಾಯವಾಗುವ ಕೆಲಸ ಮಾಡಲು ಬಯಸುತ್ತಿದ್ದೇನೆ. ಸದ್ಯ ಆ ರೀತಿಯ ಯಾವುದೇ ಚಿಂತನೆ ಇಲ್ಲ ಎಂದು ರಾಜ್ಯ ರಾಜಕಾರಣ ಪ್ರವೇಶ ವಿಷಯವನ್ನು ತಳ್ಳಿ ಹಾಕಿದ್ದಾರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

Central Minister Shobha Karandlaje talked in Pressmeet
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ ಎನ್ನುವುದು ಕೇವಲ ಊಹಾಪೋಹವಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷೆ ಅಥವಾ ಸಿಎಂ‌ ಆಗಿ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಖಂಡಿತಾ ಇಲ್ಲ ಎಂದಿದ್ದಾರೆ.

ನಾನು ಮೊನ್ನೆ ಮೊನ್ನೆ ಸಚಿವೆ ಆಗಿದ್ದೇನೆ. ಬೇರೆ ಬೇರೆ ಕಡೆ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರೋದೆಲ್ಲ ಕೇವಲ ಊಹಾಪೋಹ ಮಾತ್ರ. ದೇಶದಲ್ಲಿ ರೈತರಿಗೆ ಸಹಾಯವಾಗುವ ಕೆಲಸ ಮಾಡಲು ಬಯಸುತ್ತಿದ್ದೇನೆ. ಸದ್ಯ ಆ ರೀತಿಯ ಯಾವುದೇ ಚಿಂತನೆ ಇಲ್ಲ ಎಂದು ರಾಜ್ಯ ರಾಜಕಾರಣ ಪ್ರವೇಶ ವಿಷಯವನ್ನು ತಳ್ಳಿ ಹಾಕಿದರು.

ಪಠ್ಯ ಪುಸ್ತಕ ವಿಚಾರದಲ್ಲಿ ಕುವೆಂಪು, ಬಸವಣ್ಣ ಅವರನ್ನು ಅವಹೇಳನ ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಸವಣ್ಣ, ಕುವೆಂಪು ಇಬ್ಬರಿಗೂ ಅವಮಾನ ಮಾಡುವ ವಿಚಾರವೇ ಇಲ್ಲ. ಸರ್ಕಾರ ಕುವೆಂಪು ಅವರಿಗೆ ಗೌರವ ಕೊಡುತ್ತಿದೆ. ಬಸವಣ್ಣ ಅಂದರೆ ವಿಶೇಷ ಗೌರವ ಇದೆ. ಪ್ರತೀ ಕಾರ್ಯಕ್ರಮದಲ್ಲಿ ಅವರನ್ನು ಪೂಜಿಸಲಾಗುತ್ತಿದೆ. ಪ್ರತಿ ಭಾರಿಯೂ ಅವರನ್ನು ಬಸವಣ್ಣ ಎಂದು ಕರೆಯುವ ಕೆಲಸ ಮಾಡೋಣ ಎಂದರು.

ಹಿಜಾಬ್ ಕೋಮು ಗಲಭೆ ಅಲ್ಲ. ಕೆಲ ಸಂಘಟನೆಗಳಾದ ಪಿಎಫ್ಐ, ಎಸ್ಎಇಪಿಐ ಸಂಘಟನೆಗಳ ಷಡ್ಯಂತ್ರ. ಈಗಾಗಲೇ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸರ್ಕಾರಿ ಶಾಲೆಗೆ ಹೋಗುವಾಗ ಎಲ್ಲ ಮಕ್ಕಳು ಒಂದೇ. ಶಾಲೆಗೆ ಹೋಗುವಾಗ ಯೂನಿಫಾರ್ಮ್​ ಧರಿಸಬೇಕು ಅಂತ ಹೇಳಿದೆ. ಅದನ್ನು ಎಲ್ಲರೂ ಪಾಲಿಸಬೇಕು ಎಂದರು.

ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಪ್ರಧಾನಿ ಮೋದಿ ಬಂದ ಬಳಿಕ ಯಾವುದೇ ದೊಡ್ಡ ಕೋಮು ಗಲಭೆ ಆಗಿಲ್ಲ. ಸಣ್ಣಪುಟ್ಟ ಸಂಘರ್ಷ ಆಗಿದ್ದರೆ, ಅದಕ್ಕೆ ಮೋದಿ ಸರ್ಕಾರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ದೇಶಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ, ಅದನ್ನ ನೋಡಿ ಸುಮ್ಮನೆ ಕೂರಲ್ಲ ಎಂದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಬೇರೆ ದೇಶಗಳಿಂದ ಬರುವ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಅದರ ಭಾರವನ್ನು ಸರ್ಕಾರ ಹೊತ್ತುಕೊಂಡಿದೆ. ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿಗಳಾಗಿಲ್ಲ. ಇಂಡೋನೇಷ್ಯಾದಿಂದ ಪಾಮ್ ಆಯಿಲ್ ತರಿಸಿ, ಬೇರೆ ಬೇರೆ ಎಣ್ಣೆ ಜೊತೆ ಮಿಕ್ಸ್ ಮಾಡಲಾಗುತ್ತಿದೆ. 80 ಪರ್ಸೆಂಟ್ ಸ್ವಾವಲಂಬನೆ ಇಲ್ಲ. ಗೊಬ್ಬರ ವಿಚಾರದಲ್ಲೂ ಕೂಡ ಸ್ವಾವಲಂಬನೆ ಇಲ್ಲ. ಪೊಟಾಷಿಯಂ, ನೈಟ್ರೇಟ್ ಎಲ್ಲವೂ ಆಮದು ಮಾಡಿಸಿಕೊಳ್ಳಲಾಗುತ್ತಿದೆ. ಸ್ವಾವಲಂಬನೆ ಆಗಲು ಪ್ರಧಾನಿ ಮೋದಿ ಚಿಂತನೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಬೀಜ, ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಿ: ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

Last Updated : Jun 3, 2022, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.