ETV Bharat / city

ಅರ್ಜುನ್ ಗೌಡ ಸಿನಿಮಾ ಬಿಡುಗಡೆಗೆ ಸಜ್ಜಾದ ಮಾಲಾಶ್ರೀ.. ಶಿವಣ್ಣ​, ಕಿಚ್ಚ ಸುದೀಪ್ ಬೆಂಬಲ - ಮಾಲಾಶ್ರೀ ಪತಿ ರಾಮು ನಿರ್ಮಾಣದ ಅರ್ಜುನ್​ಗೌಡ ಸಿನಿಮಾ

ಬಹಳ ದಿನಗಳ ಬಳಿಕ ನೋವಿನ ಮಧ್ಯೆ ಮಾಲಾಶ್ರೀ ಅವರು ಪತಿ ರಾಮು ನಿರ್ಮಾಣದ ಕೊನೆಯ ಸಿನಿಮಾ ಅರ್ಜುನ್ ಗೌಡ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಅರ್ಜುನ್ ಗೌಡ ಸಿನಿಮಾ ಬಿಡುಗಡೆಗೆ ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಹಾಗೂ ಶ್ರೀಮುರಳಿ ಮಾಲಾಶ್ರೀ ಜೊತೆಗೆ ಬೆಂಬಲಕ್ಕೆ ನಿಂತಿದ್ದಾರೆ.

arjun gowda
ಅರ್ಜುನ್ ಗೌಡ ಸಿನಿಮಾ
author img

By

Published : Dec 28, 2021, 8:46 PM IST

ಇನ್ಸ್​ಪೆಕ್ಟರ್ ವಿಕ್ರಂ ಸಿನಿಮಾ ಬಳಿಕ ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಅರ್ಜುನ್ ಗೌಡ. ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಅಂತಾ ಕರೆಯಿಸಿಕೊಂಡಿರುವ ರಾಮು ನಿರ್ಮಾಣದ ಹೈ ಬಜೆಟ್ ಸಿನಿಮಾ ಇದಾಗಿದೆ.

ಅರ್ಜುನ್ ಗೌಡ ಸಿನಿಮಾವನ್ನ ನಿರ್ಮಾಪಕ ರಾಮು ಬಿಡುಗಡೆ ಮಾಡಲು ಸಜ್ಜಾಗಿದ್ದರು. ಆದರೆ ವಿಧಿಯಾಟದ ಮುಂದೆ ನಿರ್ಮಾಪಕ ರಾಮು ಅವರು ಏಪ್ರಿಲ್ 26 ರಂದು ಕೊರೊನಾಗೆ ಬಲಿಯಾದರು. ರಾಮು ನಿಧನ ಸುದ್ದಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿತ್ತು. ರಾಮು ಪತ್ನಿ ಮಾಲಾಶ್ರೀಗೆ, ಗಂಡನ ಅಗಲಿಕೆ ನೋವಿನಿಂದ ಹೊರಗಡೆ ಬರೋದಿಕ್ಕೆ ಬಹಳ ಸಮಯ ಬೇಕಾಯಿತು.

ಬಹಳ ದಿನಗಳ ಬಳಿಕ ನೋವಿನ ಮಧ್ಯೆ ಮಾಲಾಶ್ರೀ, ಪತಿ ರಾಮು ನಿರ್ಮಾಣದ ಕೊನೆಯ ಸಿನಿಮಾ ಅರ್ಜುನ್ ಗೌಡ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಅರ್ಜುನ್ ಗೌಡ ಸಿನಿಮಾ ಬಿಡುಗಡೆಗೆ ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಹಾಗೂ ಶ್ರೀಮುರಳಿ ಅವರು ಮಾಲಾಶ್ರೀ ಜೊತೆಗೆ ಬೆಂಬಲಕ್ಕೆ ನಿಂತಿದ್ದಾರೆ.

ಅರ್ಜುನ್ ಗೌಡ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದು, ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಯನ್ನು ನಿರ್ಮಾಪಕ ರಾಮು ಅವರು ಕಟ್ಟಿದ್ದರು. ಆದರೆ, ಅವರು ನಮ್ಮ ಜೊತೆ ಈಗ ಇಲ್ಲ. ಈ ಸಿನಿಮಾ ಬಿಡುಗಡೆ ಹೊಣೆಯನ್ನ ಮಾಲಾಶ್ರೀ ಮೇಡಂ ತೆಗೆದುಕೊಂಡಿರೋದು ದೊಡ್ಡ ವಿಷಯ. ಈ ಚಿತ್ರದ ಟ್ರೈಲರ್ ನೋಡಿದ್ದೀನಿ. ಬಹಳ ಅದ್ಧೂರಿಯಾಗಿ ಮೂಡಿ ಬಂದಿದೆ.

ಈ ಚಿತ್ರವನ್ನ ರೀಮೇಕ್ ಅಂದುಕೊಂಡಿದ್ದೇ, ಇದು ರಿಮೇಕ್ ಅಲ್ಲಾ ಸ್ವಮೇಕ್ ಸಿನಿಮಾ. ಈ ಇದರಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದು, ನಿರ್ದೇಶಕ ಲಕ್ಕಿ ಶಂಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾಗೆ ಒಳ್ಳೆಯದಾಗಲಿ ಎಂದು ಸುದೀಪ್ ವಿಶ್​ ಮಾಡಿದ್ದಾರೆ.

ಇದರ ಜೊತೆ ಅರ್ಜುನ್ ಗೌಡ ಸಿನಿಮಾದ ಪರವಾಗಿ ನಟ ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಕೂಡ ಸಪೋರ್ಟ್ ಮಾಡಿದ್ದಾರೆ. ಇದೇ 31ರಂದು ಚಿತ್ರ ಬಿಡುಗಡೆ ಆಗುತ್ತಿದೆ.

ಅರ್ಜುನ್ ಗೌಡ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕ ತಿಮ್ಮೇಶ್ ಅಲ್ಲದೇ, ಬಾಲಿವುಡ್​ನ ರಾಹುಲ್ ದೇವ್, ಸ್ಪರ್ಶ ರೇಖ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭತ್, ಜೀವನ್, ಹನುಮಂತೇಗೌಡ, ಮೋಹನ್ ಜುನೇಜ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಶಂಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ‌ ಮಾಡಿದ್ದಾರೆ. ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿ‌ರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.

ಇದನ್ನೂ ಓದಿ: ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಜ್ವರ; ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್‌

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.