ನೆಲಮಂಗಲ: ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ (Shivagange hill) ಮುಂಜಾನೆಯ ಮಂಜಿನಿಂದ ಆವೃತವಾಗಿದೆ. ಬೆಟ್ಟದ ತುದಿಯಿಂದ ಕಾಣುವ ಮನಮೋಹಕ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟ (Shivagange hill) ಧಾರ್ಮಿಕ ಕ್ಷೇತ್ರ ಮತ್ತು ಚಾರಣಿಗರ ನೆಚ್ಚಿನ ತಾಣ. ಚಳಿಗಾಲದಲ್ಲಿ ಬೆಟ್ಟವನ್ನ ಅವರಿಸಿರುವ ದಟ್ಟವಾದ ಮಂಜು(snow) ಬೆಟ್ಟದ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸುತ್ತಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆ ದಟ್ಟವಾದ ಮಂಜಿಗೆ ಕಾರಣವಾಗಿದ್ದು, ಶಿವಗಂಗೆ ಬೆಟ್ಟವೇ ಕಾಣದ ರೀತಿ ಮಂಜು ಆವರಿಸಿದೆ. 4,547 ಆಡಿ ಎತ್ತರದ ಬೆಟ್ಟವನ್ನು ಏರುವುದು ಚಾರಣಿಗರಿಗೆ ಹೊಸ ಅನುಭವ ನೀಡುತ್ತದೆ. ಚಳಿಗಾಲದ ಸಮಯದಲ್ಲಿ ಅವರಿಸುವ ದಟ್ಟವಾದ ಮಂಜು(snow) ಬೆಟ್ಟ ಹತ್ತುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.
ಇಬ್ಬನಿಯ ನೀರಿನಿಂದ ಮೆಟ್ಟಿಲುಗಳು ಜಾರುವುದರಿಂದ ಪ್ರವಾಸಿಗರು ಬಹಳ ಎಚ್ಚರಿಕೆಯಿಂದ ಬೆಟ್ಟವನ್ನ ಹತ್ತ ಬೇಕು. ಮುಂಜಾನೆ 5 ಗಂಟೆಯಿಂದ 7 ಗಂಟೆಯೊಳಗೆ ಬೆಟ್ಟದ ತುದಿಯನ್ನ ತಲುಪಿದರೆ ಮಂಜಿನ ಸೊಬಗನ್ನ ಸವಿಯಬಹುದಾಗಿದೆ.
ಇದನ್ನೂ ಓದಿ: ನಕಲಿ ಬಂಗಾರ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ