ETV Bharat / city

12 ವರ್ಷ ಜೈಲೂಟ ತಿಂದ್ರೂ ಬುದ್ಧಿ ಬಂದಿಲ್ಲ... ಹಳೇ ಚಾಳಿ ಮುಂದುವರಿಸಿದ ಖದೀಮ!

ಕೊಲೆ ಪ್ರಕರಣದಲ್ಲಿ 12 ಶಿಕ್ಷೆ ಜೈಲು ಶಿಕ್ಷೆ ಅನುಭವಿಸಿ ಬಂದ್ಮೇಲೂ ಖದೀಮ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ. ಹಲವು ದರೋಡೆ ಪ್ರಕರಣಗಳಲ್ಲಿ ಜೈಲಿಗೆ ಹೋಗಿ, ಬಳಿಕ ಜಾಮೀನಿನ ಮೇಲೆ ಹೊರಬಂದು ಮತ್ತೆ ಕಳ್ಳತನ ಮಾಡಿದ್ದಾನೆ.

robber
ರೆಹಮಾನ್ ಮನ್ಸೂರ್ ಬಂಧನ
author img

By

Published : Nov 6, 2020, 1:45 AM IST

ಬೆಂಗಳೂರು: ನಗರದ ಆನಂದ್ ರಾವ್ ಸರ್ಕಲ್ ರಾಜಮಹಲ್ ಹೋಟೆಲ್ ರೂಂನಲ್ಲಿದ್ದ ವ್ಯಕ್ತಿಯನ್ನು ಪರಿಚಯಿಸಿಕೊಂಡು ಬಳಿಕ ಆತನ ಹಲ್ಲೆ ನಡೆಸಿ ಹಣ ಹಾಗೂ ಚಿನ್ನದ ಸರ ದೋಚಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ರೆಹಮಾನ್ ಮನ್ಸೂರ್ ಬಂಧಿತ. ಆರೋಪಿಯಿಂದ ಒಂದು ಕಾರು, ಮೊಬೈಲ್ ಫೋನ್ ಹಾಗೂ ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿ ಮನ್ಸೂರ್ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗಿದ್ದು, 2008ರಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಶಿಕ್ಷೆಗೆ ಗುರಿಯಾಗಿದ್ದ. 12 ವರ್ಷ ಜೈಲು ಶಿಕ್ಷೆ ಸಜೆ ಬಳಿಕ ಹೈಕೋರ್ಟ್​ನಲ್ಲಿ ಕೇಸ್ ಖುಲಾಸೆಗೊಂಡಿತ್ತು.

2017 ರ ಮೇನಲ್ಲಿ ಪೇರೋಲ್ ಮೇಲೆ ಹೊರಬಂದು ವಂಚನೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ರೆಹಮಾನ್ ಮನ್ಸೂರ್, ಬಳಿಕ ಮತ್ತೆ 2017 ಅಕ್ಟೋಬರ್ 8 ಕ್ಕೆ ಪುಲಿಕೇಶಿನಗರದಲ್ಲಿ ಕಳ್ಳತನ ಮಾಡಿದ್ದ. ನಾಲ್ಕು ದಿನದ ಬಳಿಕ ಜಾಮೀನಿನ ಮೇಲೆ ಹೊರಬಂದು ದರೋಡೆ ಎಸಗಿದ್ದ.

2017 ಅಕ್ಟೋಬರ್ 19 ರಂದು ದರೋಡೆ ಕೇಸ್​​ನಲ್ಲಿ ಭಾಗಿಯಾಗಿದ್ದ ಮನ್ಸೂರ್, ಬಳಿಕ ಅದೇ ನವೇಂಬರ್ 1 ರಂದು ಅವನ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.