ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ನಿನ್ನೆ ಹರ್ಷ ಗುಪ್ತಾ ಸೇರಿ ಆರು ಮಂದಿ ಐಎಎಸ್ ಮತ್ತು ಒಬ್ಬರು ಐಎಫ್ಎಸ್ ಅಧಿಕಾರಿಯನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಐಎಂಎ ಪ್ರಕರಣದ ವಿಶೇಷ ಅಧಿಕಾರಿಯಾಗಿದ್ದ ಹರ್ಷ ಗುಪ್ತಾರನ್ನ ನಿನ್ನೆ ಸಮೀಕ್ಷೆ ಮತ್ತು ಭೂ ದಾಖಲೆ ಇಲಾಖೆ ಆಯುಕ್ತರನ್ನಾಗಿ ನಿಯೋಜಿಸಲಾಗಿತ್ತು.
ಆದರೆ ಇಂದು ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಮುಂದಿನ ಆದೇಶದವರೆಗೆ ಹರ್ಷ ಗುಪ್ತಾ ಐಎಂಎ ಪ್ರಕರಣದ ವಿಶೇಷ ಅಧಿಕಾರಿಯಾಗಿ ಮುಂದುವರೆಯುವಂತೆ ಸೂಚಿಸಿದೆ.