ETV Bharat / city

ಟೆಡ್ಡಿಬೇರ್​ನಲ್ಲೂ ಮಾದಕ ವಸ್ತು ಸಾಗಿಸುತ್ತಿದ್ದ ಖದೀಮ: ಅಂತಾರಾಜ್ಯ ಡ್ರಗ್ಸ್​ ಪೆಡ್ಲರ್ ಅಂದರ್​ - ಅಂತರರಾಜ್ಯ ಡ್ರಗ್ ಪೆಡ್ಲರ್ ಬಂಧನ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್ಸ್​ ಪೆಡ್ಲರ್ ಬಂಧಿಸುವಲ್ಲಿ ಪೂರ್ವ ವಿಭಾಗದ ಹಲಸೂರು ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 28 ಲಕ್ಷ ರೂ. ಮೌಲ್ಯದ ಮಾದಕ ಟ್ಯಾಬ್ಲೆಟ್ಸ್ ಹಾಗೂ 71 ಗ್ರಾಂ ವಶಕ್ಕೆ ಪಡೆದಿದ್ದಾರೆ.

Selling drug in teddybear doll
ಟೆಡ್ಡಿಬೇರ್ ಗೊಂಬೆಯಲ್ಲಿ ಮಾದಕ ವಸ್ತು ಮಾರಾಟ: ಅಂತರರಾಜ್ಯ ಪೆಡ್ಲರ್ ಬಂಧನ
author img

By

Published : Dec 7, 2020, 2:14 PM IST

ಬೆಂಗಳೂರು: ಕುಡಿತದ ಚಟಕ್ಕೊಳಗಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್ಸ್​ ಪೆಡ್ಲರ್ ಅನ್ನು ಪೂರ್ವ ವಿಭಾಗದ ಹಲಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೆಡ್ಡಿಬೇರ್ ಗೊಂಬೆಯಲ್ಲಿ ಮಾದಕ ವಸ್ತು ಮಾರಾಟ: ಅಂತಾರಾಜ್ಯ ಪೆಡ್ಲರ್ ಅಂದರ್​

ಅಸ್ಸೋಂ ಮೂಲದ ಸಕೀರ್ ಹುಸೇನ್ (34) ಬಂಧಿತ ಆರೋಪಿ. ಕುಡಿತದ ಚಟಕ್ಕೊಳಗಾಗಿದ್ದ ಈತ ಹಣಕ್ಕಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಸಕೀರ್ ಹುಸೇನ್ ಟೆಡ್ಡಿಬೇರ್​ನಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಮಾದಕವಸ್ತು ಇಟ್ಟುಕೊಂಡು ಟ್ರೈನ್ ಅಥವಾ ಕಾರಿನಲ್ಲಿ ಅಸ್ಸೋಂನಿಂದ ಬೆಂಗಳೂರಿಗೆ ಬರುತ್ತಿದ್ದ ಎನ್ನಲಾಗ್ತಿದೆ.

ಬೆಂಗಳೂರಿನ ಕೊತ್ತನೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದ ಈತ, ಒಂದು ಮಾದಕ ಟ್ಯಾಬ್ಲೆಟ್​​ನ್ನು ಮೂರರಿಂದ ನಾಲ್ಕು ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 28 ಲಕ್ಷ ಮೌಲ್ಯದ ನಶೆಯ ಟ್ಯಾಬ್ಲೆಟ್ಸ್ ಹಾಗೂ 71 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.