ನೆಲಮಂಗಲ: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಜರುಗಿದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ನೆಲಮಂಗಲದ ಐವರನ್ನು ಐಸೋಲೇಷನ್ನಲ್ಲಿಟ್ಟು ನಿಗಾ ಇಡಲಾಗಿದೆ.
ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಇಡಲಾಗಿದ್ದ ಈ ಐವರು, ಮುಖಕ್ಕೆ ಮಾಸ್ಕ್ ಧರಿಸಿದೇ, ಸಾಮಾಜಿಕ ಅಂತರ ಕಾಪಾಡದೇ ಸೆಲ್ಫಿ ವಿಡಿಯೋ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಪತ್ರೆಯ ಆವ್ಯವಸ್ಥೆ ಮತ್ತು ಶಂಕಿತರ ದರ್ಬಾರ್ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
![suspected-corona-figures](https://etvbharatimages.akamaized.net/etvbharat/prod-images/20_0104newsroom_1585764227_817.jpg)
ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಕೊರೊನಾ ಸೊಂಕು ತಗುಲಿದ ಹಿನ್ನೆಲೆಯಲ್ಲಿ ನೆಲಮಂಗಲದ ಲಕ್ಕೂರಿನ ಐವರು ಭಾಗವಹಿಸಿ ಊರಿಗೆ ಹಿಂದುರುಗಿದ್ದರು.
ಬಂದವರನ್ನು ಐಸೋಲೇಷನ್ ವಾರ್ಡ್ನಲ್ಲಿಟ್ಟು ತಪಾಸಣೆ ಮಾಡಲಾಗುತ್ತಿತ್ತು. ಶಂಕಿತರು ಮಾಡಿರುವ ಸೆಲ್ಪಿ ವಿಡಿಯೋ ಆಸ್ಪತ್ರೆಯ ಅವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದೆ. ಜನರಲ್ ವಾರ್ಡ್ನಲ್ಲಿರುವ ರೋಗಿಗಳಂತೆ ಶಂಕಿತರು ಬೇಕಾಬಿಟ್ಟಿ ಓಡುತ್ತಿದ್ದಾರೆ.