ETV Bharat / city

ಇಮ್ರಾನ್ ಪಾಷಾ ಬಂಧನ ಬೆನ್ನಲೇ ಜೆಜೆನಗರ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ..

ಇವತ್ತಿನ ಮೆರವಣಿಗೆ ಕಾನೂನು ವಿರುದ್ಧವಾಗಿದೆ. ಮೊದಲನೆಯದಾಗಿ ಪೊಲೀಸರಿಂದ ಅನುಮತಿ ಪಡೆದಿಲ್ಲ. ಕೋವಿಡ್-19 ಹಿನ್ನೆಲೆ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸುವಂತಿಲ್ಲ.

Section 144 at  JJ Nagar ...
ಭಾಸ್ಕರ್ ರಾವ್
author img

By

Published : Jun 7, 2020, 5:28 PM IST

ಬೆಂಗಳೂರು : ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಬಂಧನ ಬೆನ್ನಲೇ ಜಗಜೀವನ್‌ರಾಮ್‌ನಗರ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶಿಸಿದ್ದಾರೆ.

ಇವತ್ತಿನ ಮೆರವಣಿಗೆ ಕಾನೂನು ವಿರುದ್ಧವಾಗಿದೆ. ಮೊದಲನೆಯದಾಗಿ ಪೊಲೀಸರಿಂದ ಅನುಮತಿ ಪಡೆದಿಲ್ಲ. ಕೋವಿಡ್-19 ಹಿನ್ನೆಲೆ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸುವಂತಿಲ್ಲ. ಹೀಗಿರುವಾಗ ಸಾವಿರಾರು ಜನರ ಜೊತೆ ಮೆರವಣಿಗೆ ಮಾಡಿರುವುದು ಸಹಿಸುವಂತದ್ದಲ್ಲ. ಹೀಗಾಗಿ ಈ ಘಟನೆ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಲು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್‌ಗೆ ಕಮೀಷನರ್ ಸೂಚನೆ ನೀಡಿದ್ದಾರೆ.

ನಂತರ ಮಾತನಾಡಿದ ಭಾಸ್ಕರ್​ ರಾವ್​​, ಕೊರೊನಾ ಸೋಂಕಿನ ಹಿನ್ನೆಲೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಕಾರ್ಪೊರೇಟರ್ ಇಂದು ಬಿಡುಗಡೆಯಾಗುತ್ತಿದ್ದಂತೆ ಮೆರವಣಿಗೆ ಮಾಡಿರುವುದು ತಪ್ಪು‌. ಇದು ಸಂಪೂರ್ಣ ಬೇಜವಾಬ್ದಾರಿ ನಡೆಯಾಗಿದೆ. ದಸ್ತಗಿರಿಗೆ ಖುದ್ದು ನಾನೇ ಆಗಮಿಸಿದ್ದೇನೆ. ಇದರಲ್ಲಿ ಪೊಲೀಸರ ಲೋಪವಿದ್ದರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತೆ. ಈ ಕ್ಷಣದಿಂದಲೇ ಜೆಜೆನಗರ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ವಿಧಿಸಲಾಗಿದೆ ಎಂದರು.

ಜೆಜೆನಗರ ಠಾಣೆ ಬಳಿ ಬೆಂಬಲಿಗರು ಸೇರುವ ಸಾಧ್ಯತೆ‌ ಹಿನ್ನೆಲೆ, ಪಾದರಾಯನಪುರದಾದ್ಯಂತ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ. 144 ಸೆಕ್ಷನ್ ಜಾರಿ ಹಿನ್ನೆಲೆ ಅಂಗಡಿ- ಮುಂಗಟ್ಟುಗಳನ್ನು ಗರುಡಾ ಟೀಂ ಬಂದ್ ಮಾಡಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.