ETV Bharat / city

ಬೆಂಗಳೂರು ಪೊಲೀಸರಿಗೆ ಜೀವರಕ್ಷಕವಾದ ವ್ಯಾಕ್ಸಿನ್: ಎರಡನೇ ಅಲೆಯಲ್ಲಿ ಸೋಂಕು ಇಳಿಕೆ

author img

By

Published : May 20, 2021, 8:48 PM IST

ಕಳೆದ ವರ್ಷ ನಗರ ಪೊಲೀಸರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಹಬ್ಬಿತ್ತು. ಲಸಿಕೆ ಇಲ್ಲದೆ 35 ಪೊಲೀಸರು ಸಾವನ್ನಪ್ಪಿದ್ದರು. ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಹರಡಿದರೂ ಪೊಲೀಸ್ ಸಿಬ್ಬಂದಿಯಲ್ಲಿ ಸೋಕಿನ ಪ್ರಮಾಣ ಇಳಿಕೆ ಕಂಡಿದೆ‌. ಈ ಮೂಲಕ ಪೊಲೀಸ್ ಇಲಾಖೆ ಮಾದರಿಯಾಗಿದೆ. ಅದಕ್ಕೆ ಸಹಕಾರಿಯಾಗಿದ್ದು, ವ್ಯಾಕ್ಸಿನ್ ಮತ್ತು ಹೆಚ್ಚು ಮುಂಜಾಗ್ರತೆ ಕ್ರಮ ಕೈಗೊಂಡಿದ್ದು ಉಪಕಾರಿಯಾಗಿದೆ.

ಪೊಲೀಸ್ ಇಲಾಖೆ
ಪೊಲೀಸ್ ಇಲಾಖೆ

ಬೆಂಗಳೂರು: ನಗರದಲ್ಲಿ ದಿನೇ ದಿನೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಪೊಲೀಸ್ ಇಲಾಖೆಗೂ ಸಹ ಸೋಂಕು ಬೆಂಬಿಡದೆ ಕಾಡುತ್ತಿದೆ. ಆದರೆ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಪೊಲೀಸರಲ್ಲಿ ಸೋಂಕು ಹೆಚ್ಚಿನ ಪ್ರಮಾಣ ತಟ್ಟಿಲ್ಲ.

ಹೌದು, ಕಳೆದ ವರ್ಷ ನಗರ ಪೊಲೀಸರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಹಬ್ಬಿತ್ತು. ಲಸಿಕೆ ಇಲ್ಲದೆ 35 ಪೊಲೀಸರು ಸಾವನ್ನಪ್ಪಿದ್ದರು. ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಹರಡಿದರೂ ಪೊಲೀಸ್ ಸಿಬ್ಬಂದಿಯಲ್ಲಿ ಸೋಕಿನ ಪ್ರಮಾಣ ಇಳಿಕೆ ಕಂಡಿದೆ‌. ಈ ಮೂಲಕ ಪೊಲೀಸ್ ಇಲಾಖೆ ಮಾದರಿಯಾಗಿದೆ. ಅದಕ್ಕೆ ಸಹಕಾರಿಯಾಗಿದ್ದು ವ್ಯಾಕ್ಸಿನ್ ಮತ್ತು ಹೆಚ್ಚು ಮುಂಜಾಗ್ರತೆ ಕ್ರಮ ಕೈಗೊಂಡಿದ್ದು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ಮೊದಲ ಅಲೆಯಲ್ಲಿ ಒಟ್ಟು 4083 ಮಂದಿ ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಆವರಿಸಿಕೊಂಡಿತ್ತು. ಜೊತೆಗೆ ಬರೋಬ್ಬರಿ 35 ಮಂದಿ ಸಾವನ್ನಪ್ಪಿದ್ದರೆ 4048 ಮಂದಿ ಗುಣಮುಖರಾಗಿದ್ದರು. ಸದ್ಯ ಎರಡನೇ ಅಲೆಗೆ ಬೆಂಗಳೂರು ಪೊಲೀಸ್ ಸಿಲುಕಿಕೊಂಡಿರುವುದು ಕೇವಲ 1483 ಮಂದಿ ಅಷ್ಟೇ. ಆದರೂ 13 ಮಂದಿ ಸಾವನ್ನಪ್ಪಿದ್ದಾರೆ. 794 ಮಂದಿ ಗುಣಮುಖರಾಗಿದ್ದಾರೆ. ಸದ್ಯ 68 ಮಾತ್ರ ಆ್ಯಕ್ಟೀವ್ ಕೇಸ್​ಗಳಿವೆ. ಮೊದಲ ಹಂತದ ಲಸಿಕೆ ಪಡೆದ ಬಳಿಕ 435 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಎರಡನೇ ವ್ಯಾಕ್ಸಿನೇಷನ್‌ ಪಡೆದ ಬಳಿಕ 824 ಮಂದಿಗೆ ಸೋಂಕು ತಗುಲಿದೆ. ಉಳಿದ 234 ಮಂದಿಗೆ ಪಾಸಿಟಿವ್ ಬಂದಿದ್ದು, ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ವ್ಯಾಕ್ಸಿನ್ ಪಡೆದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಎರಡನೇ ಅಲೆಯಲ್ಲಿ ಹೆಚ್ಚು ಸೊಂಕು ಹರಡುತ್ತಿದೆ. ಹೀಗಿರುವಾಗ ಪೊಲೀಸರು ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಾರಿ ಹೆಚ್ಚು ಮುಂಜಾಗ್ರತೆ ವಹಿಸಲು ಸಿಬ್ಬಂದಿಗೆ ಸೂಚಿಸಿದ್ದಾರೆ. ಜೊತೆಗೆ ಅಧಿಕಾರಿಗಳು ಖುದ್ದು ಪರಿಶೀಲನೆಗೆ ಇಳಿದಿದ್ದು, ಸಹಕಾರಿಯಾಗಿದೆ. ಈ ಮೂಲಕ ಇದುವರೆಗಿನ ಅಂಕಿ ಅಂಶ ನೋಡಿದ್ರೆ ಇತರರಿಗೆ ಮಾದರಿಯಾಗಿದೆ.

  • ಮೊದಲ ಅಲೆಯಲ್ಲಿದ್ದ ಸೋಂಕಿತರ ಸಂಖ್ಯೆ - 4083
    ಗುಣಮುಖ ಸಿಬ್ಬಂದಿ ಸಂಖ್ಯೆ - 4048
    ಮೃತ ಸಿಬ್ಬಂದಿ ಸಂಖ್ಯೆ - 35
  • ಎರಡನೇ ಅಲೆಯಲ್ಲಿದ್ದ ಸೊಂಕಿತರ ಸಂಖ್ಯೆ -1483(ಇದುವರೆಗೆ)
    ಮೃತ ಸಿಬ್ಬಂದಿ ಸಂಖ್ಯೆ - 13
    ಗುಣಮುಖ ಸಿಬ್ಬಂದಿ ಸಂಖ್ಯೆ -794
    ಸದ್ಯ ಆ್ಯಕ್ಟೀವ್ ಕೇಸ್ - 668

ETV Bharat Logo

Copyright © 2024 Ushodaya Enterprises Pvt. Ltd., All Rights Reserved.