ETV Bharat / city

ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಅಸಮಾಧಾನ ಇದ್ದರೆ, ಆಗಸ್ಟ್​ನಲ್ಲಿ ಪರೀಕ್ಷೆ ಬರೆಯಬಹುದು.. - Second PUC exam

ಈಗ ಹೊರಡಿಸಿರುವ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದರೆ, ವಿದ್ಯಾರ್ಥಿಗಳು ಆಗಸ್ಟ್​ನಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ. ಖಾಸಗಿ ವಿದ್ಯಾರ್ಥಿಗಳಿಗೂ ಕೂಡ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತೆ.‌ ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ..

ದ್ವಿತೀಯ ಪಿಯುಸಿ ಪರೀಕ್ಷೆ
ದ್ವಿತೀಯ ಪಿಯುಸಿ ಪರೀಕ್ಷೆ
author img

By

Published : Jul 20, 2021, 7:56 PM IST

ಬೆಂಗಳೂರು : ಸಾಂಕ್ರಾಮಿಕ ಕೊರೊನಾ ಸೋಂಕು ಹಿನ್ನೆಲೆ ಪ್ರಸುತ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನ ರದ್ದು ಮಾಡಿ, ಫಲಿತಾಂಶ ಪ್ರಕಟಿಸಲಾಗಿದೆ. ಈಗ ಹೊರಡಿಸಿರುವ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದರೆ, ವಿದ್ಯಾರ್ಥಿಗಳು ಆಗಸ್ಟ್​ನಲ್ಲಿ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶವಿದೆ.

ಖಾಸಗಿ ವಿದ್ಯಾರ್ಥಿಗಳಿಗೂ ಕೂಡ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತೆ.‌ ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪಿಯು ಪರೀಕ್ಷೆಗಳು ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿವೆ.

ವೇಳಾಪಟ್ಟಿ ಹೀಗಿದೆ :

  • 19-08-2021- ಬೇಸಿಕ್ ಮ್ಯಾಥ್ಸ್, ಐಶ್ಚಿಕ ಕನ್ನಡ, ಮ್ಯಾಥಮೆಟಿಕ್ಸ್
  • 21-08-2021- ಕನ್ನಡ, ತಮಿಳು ತೆಲುಗು, ಮಲಯಾಳಂ ಮರಾಠಿ, ಅರೇಬಿಕ್, ಫ್ರೆಂಚ್
  • 23-8-2021-ಭೌಗೋಳಿಕತೆ, ಮನೋವಿಜ್ಞಾನ ಭೌತಶಾಸ್ತ್ರ
  • 24-8-2021- ಇಂಗ್ಲಿಷ್
  • 25-8-2021- ವ್ಯವಹಾರ ಅಧ್ಯಯನ, ಗೃಹ ವಿಜ್ಞಾನ, ಶಿಕ್ಷಣ, ಭೂವಿಜ್ಞಾನ
  • 26-8-2021- ರಾಜ್ಯಶಾಸ್ತ್ರ
  • 27-8-2021- ಇತಿಹಾಸ, ಸ್ಟಾಟಿಸ್ಟಿಕ್ಸ್
  • 30-08-2021- ಅರ್ಥಶಾಸ್ತ್ರ
  • 31-8-2021- ಉರ್ದು, ಸಂಸ್ಕೃತ
  • 01-9-2021- ಕರ್ನಾಟಕ ಮ್ಯೂಸಿಕ್, ಹಿಂದುಸ್ತಾನಿ ಮ್ಯೂಸಿಕ್, ಸಮಾಜಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ ಕಂಪ್ಯೂಟರ್ ಸೈನ್ಸ್
  • 2-9-2021- ಲಾಜಿಕ್, ಬ್ಯುಸಿನೆಸ್ ಸ್ಟಡೀಸ್, ರಸಾಯನಶಾಸ್ತ್ರ
  • 3-9-2021- ಹಿಂದಿ

ಈ ಬಾರಿಯ ದ್ವಿತೀಯ ಪಿಯು ಫಲಿತಾಂಶವನ್ನು ಒಪ್ಪಿಕೊಳ್ಳಲು ಇಲ್ಲವೇ ತಿರಸ್ಕರಿಸಲು ಈ ಬಾರಿಯ ಪರೀಕ್ಷೆಗೆ ನೊಂದಾಯಿಸಿದ್ದ ಫ್ರೆಷರ್ಸ್ ಮತ್ತು ರಿಪೀಟರ್ಸ್ ಅಭ್ಯ‌ರ್ಥಿಗಳಿಗೆ ಅವಕಾಶವಿದೆ. ವಾರ್ಷಿಕ ಪರೀಕ್ಷೆಗೆ ಹಾಜರಾಗಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಈ ಬಾರಿಯ ಪರೀಕ್ಷೆಗೆ ನೋಂದಾಯಿಸಿ ಪರೀಕ್ಷೆಗೆ ಹಾಜರಾಗಿ ಈ ಫಲಿತಾಂಶ ತಿರಸ್ಕರಿಸುವ ಹೊಸ ವಿದ್ಯಾರ್ಥಿಗಳಿಗೆ (ಫ್ರೆಷರ್ಸ್) ಮತ್ತು ಪುನರಾವರ್ತಿತ (ರಿಪೀಟರ್ಸ್) ಅಭ್ಯ‌ರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ.

ಹಾಗೆಯೇ, 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಖಾಸಗಿ (ಪ್ರೈವೇಟ್) ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಬೇಕಿದೆ. ಈ ಖಾಸಗಿ ಅಭ್ಯರ್ಥಿಗಳು ಈಗಾಗಲೇ ಪರೀಕ್ಷೆಗೆ ನೋಂದಾಯಿಸಿಕೊಂಡಿರುವುದರಿಂದ ಅವರು ಮತ್ತೆ ಪರೀಕ್ಷೆಗೆ ನೋಂದಾಯಿಸಬೇಕಾದ ಅಗತ್ಯವಿಲ್ಲ.

ಈ ಮೂರು ವರ್ಗದ ಅಭ್ಯರ್ಥಿಗಳಿಗೆ ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಆಗಸ್ಟ್‌ನಲ್ಲಿ ನಡೆಯುವ ಪರೀಕ್ಷೆ ಸಹ ವಾರ್ಷಿಕ ಪರೀಕ್ಷೆಯೇ ಆಗಿರುತ್ತದೆ. ಈ ಬಾರಿಯ ಫಲಿತಾಂಶ ತಿರಸ್ಕರಿಸಿ ಆಗಸ್ಟ್‌ನಲ್ಲಿ ಪರೀಕ್ಷೆಗೆ ಹಾಜರಾಗುವ ಫ್ರೆಷರ್ ಅಭ್ಯರ್ಥಿಗಳನ್ನು ಫ್ರೆಷರ್ ಎಂದೇ ಪರಿಗಣಿಸಲಾಗುವುದು.

ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಇಲ್ಲ :

ದ್ವಿತೀಯ ಪಿಯುಸಿಯ ನಿಗದಿಪಡಿಸಿರುವ ಶೇ.70ರಷ್ಟು ಪಠ್ಯಕ್ರಮಕ್ಕೆ ಹಿಂದಿನ ಪದ್ಧತಿಯಂತೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ಓದಿ: ದ್ವಿತೀಯ ಪಿಯು ರಿಸಲ್ಟ್​: ಪ್ರತಿಭೆಗೆ ಅನುಗುಣವಾಗಿ ಪ್ರಾಮಾಣಿಕ ಫಲಿತಾಂಶ ಎಂದ ಸಚಿವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.