ETV Bharat / city

ರಾಜಧಾನಿಯಲ್ಲಿ ಎರಡನೇ ಡೋಸ್ ಲಸಿಕೆ ಶೇ.15 ರಷ್ಟು ಮಾತ್ರ ಹಂಚಿಕೆ - ಕೋವಿಡ್ ಲಸಿಕೆ ಪೂರೈಕೆ

ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಇರುವಷ್ಟು ಪೂರೈಕೆಯಾಗುತ್ತಿಲ್ಲ. ಈಗಾಗಲೇ ಶೇ. 60 ರಷ್ಟು ಜನ ಮೊದಲನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ, 15% ಜನ ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಬಿಬಿಎಂಪಿ ವರದಿಯಿಂದ ತಿಳಿದು ಬಂದಿದೆ.

second-dose-vaccine-is-only-15-per-cent-in-bangalore
ಮುಖ್ಯ ಆಯುಕ್ತ ಗೌರವ್ ಗುಪ್ತಾ
author img

By

Published : Jul 26, 2021, 11:29 PM IST

ಬೆಂಗಳೂರು: ನಗರದಲ್ಲಿ ಇನ್ನೂ ಸಹ ಬೇಡಿಕೆ ಇರುವಷ್ಟು ಕೋವಿಡ್ ಲಸಿಕೆ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಸರ್ವೇ ನಡೆಸಿದ ಬಿಬಿಎಂಪಿ, ಕೇವಲ 60% ಜನರಿಗೆ ಮೊದಲನೇ ಡೋಸ್ ಹಾಗೂ ಕೇವಲ 15% ಜನರಿಗೆ ಎರಡನೇ ಡೋಸ್ ಹಂಚಿಕೆಯಾಗಿವ ಬಗ್ಗೆ ಮಾಹಿತಿ ಕಲೆಹಾಕಿದೆ.

ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುಕಡಿಮೆ ಆಗುತ್ತಿವೆ. ಏಳು ದಿನದ ಅಂಕಿ ಅಂಶ ನೋಡಿದಾಗ 400 ರಿಂದ 500 ರ ಆಸುಪಾಸಿನಲ್ಲಿ ಪ್ರಕರಣಗಳು ದೃಢಪಡುತ್ತಿವೆ. ಕೆಲವು ದಿನಗಳಿಂದ ಟೆಸ್ಟಿಂಗ್ ಕಡಿಮೆ ಆದರೆ ಪ್ರಕರಣಗಳು ಕೂಡಾ ಕಡಿಮೆ ಕಾಣುತ್ತವೆ. ಹೀಗಾಗಿ ಜನರೇ ಎಚ್ಚರಿಕೆಯಿಂದ ಇದ್ದು ವ್ಯಾಕ್ಸಿನ್ ಪಡೆಯಬೇಕು. ಈಗಾಗಲೇ ಶೇ. 60 ರಷ್ಟು ಜನ ಮೊದಲನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ, 15% ಜನ ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಎರಡನೇ ಡೋಸ್ ಲಸಿಕೆ ಶೇ.15 ರಷ್ಟು ಮಾತ್ರ ಹಂಚಿಕೆ

ವ್ಯಾಕ್ಸಿನ್ ಸರ್ವೇ ಕೂಡಾ ಮುಕ್ತಾಯಗೊಳಿಸಲಾಗಿದೆ. ಯಾವ ವಾರ್ಡ್​ಗಳಲ್ಲಿ ಯಾವ ಭಾಗಗಳ ಲಸಿಕೆ ಪ್ರಮಾಣ ಕಡಿಮೆ ಇದೆ ಎಂಬುದು ಇದರಿಂದ ಗೊತ್ತಾಗಿದೆ. ಅಂತಹ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್‌ ಪ್ರಮಾಣ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.

ಮಳೆ ಪರಿಣಾಮ ಎದುರಿಸಲು ಸಜ್ಜಾಗಿದ್ದೇವೆ

ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಕಡೆ ಅವಾಂತರ ಸೃಷ್ಟಿಯಾಗಿದ್ದು, ಹಲವೆಡೆ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಚರಂಡಿ, ರಾಜಕಾಲುವೆ ನೀರು ಮನೆಗಳೊಳಗೆ ನುಗ್ಗಿವೆ. ಈ ಬಗ್ಗೆ ಮುಖ್ಯ ಆಯುಕ್ತರನ್ನು ಕೇಳಿದ್ದಕ್ಕೆ, ಬೆಂಗಳೂರು ವಿಸ್ತಾರವಾಗಿದ್ದು, 800 ಚ.ಮೀ ರಾಜಕಾಲುವೆ ಇದೆ. ಕೆಲವು ಕಡೆ ಕಾರಣಾಂತರಗಳಿಂದ ತೊಂದರೆ ಆಗಿದೆ. ಇದನ್ನು ತಕ್ಷಣ ಸರಿಪಡಿಸಲಾಗುವುದು. ನಿನ್ನೆ ಸಮಸ್ಯೆ ಆದ ಕಡೆ ರಾತ್ರಿಯೇ ಹೋಗಿ ಸರಿಪಡಿಸಲಾಗಿದೆ. ಶಾಂತಿನಗರ ಮೊದಲಾದ ತಗ್ಗು ಪ್ರದೇಶಗಳಲ್ಲಿ ಪ್ರತೀ ವರ್ಷ ಸಮಸ್ಯೆ ಆಗ್ತಿದೆ. ಇದಕ್ಕೆ ಶಾಶ್ವತ ಪರಿಹಾರ ತರಲು ಪ್ರಯತ್ನಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.