ಬೆಂಗಳೂರು: ಗಲಭೆ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಎಸ್ಡಿಪಿಐ ಪಕ್ಷದ ಮುಖಂಡನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ವಾರ್ಡ್ ನಂಬರ್ 60ರ ಕಾರ್ಪೊರೇಟರ್ ಚುನಾವಣೆಗೆ ಸ್ಪರ್ಧಿಸಿದ್ದ ಎಸ್ಡಿಪಿಐ ಮುಖಂಡ ಮುಜಾಮಿಲ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಮುಖ ಆರೋಪಿ ಮುಜಾಮಿಲ್ ಪಾಷಾ ಆಗಿದ್ದು, ಸದ್ಯ ಮುಜಾಮಿಲ್ ಪಾಷಾನನ್ನು ಅರೆಸ್ಟ್ ಮಾಡಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈತ ಗುಂಪು ಕಟ್ಟಿ ಗಲಾಟೆ ಮಾಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಮತ್ತೊಂದೆಡೆ, ಪುಂಡರ ದಾಂಧಲೆಗೆ ಬಿಬಿಎಂಪಿ ವಾರ್ಡ್ ಆಫೀಸ್ ಪುಡಿಪುಡಿಯಾಗಿದೆ. ಡಿಜೆ ಹಳ್ಳಿ ವಾರ್ಡ್ ಬಳಿ ಬಿಬಿಎಂಪಿ ಕಚೇರಿ ಇದ್ದು, ಕಚೇರಿಯಲ್ಲಿದ್ದ ದಾಖಲೆಗಳನ್ನು ರಸ್ತೆಯಲ್ಲಿ ಹಾಕಿ ಪುಂಡರ ಗುಂಪು ಸುಟ್ಟು ಹಾಕಿದೆ. ಹೀಗಾಗಿ ಪೌರಕಾರ್ಮಿಕರಿಗೆ ಸೇರಿದ ಹಲವು ದಾಖಲೆಗಳು ನಾಶವಾಗಿದೆ ಎನ್ನಲಾಗಿದೆ.