ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಪ್ರಾಣಿಗಳು, ನಿರ್ಗತಿಕರು, ಬಡವರು, ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದು, ಇಂತವರ ಸಹಾಯಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಮುಂದಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಸುಮಾರು 100ಕ್ಕೂ ಹೆಚ್ಚು ತಂಡಗಳು ಪ್ರಾಣಿಗಳು, ನಿರ್ಗತಿಕರು, ಬಡವರಿಗೆ ಆಹಾರದ ವ್ಯವಸ್ಥೆ ಕಲ್ಪಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿವೆ. ರಸ್ತೆಯಲ್ಲಿ ಹಸಿವಿನಿಂದ ಬಳಲುತ್ತಿರುವ ಪ್ರಾಣಿಗಳಿಗೆ ಹಣ್ಣುಗಳನ್ನು ಹಂಚುವ ಕಾರ್ಯ ಮಾಡಲಾಗುತ್ತಿದೆ.
ಜೊತೆಗೆ ಬಹಳಷ್ಟು ಮಂದಿಗೆ ಮಾಸ್ಕ್ ಕೊರತೆ ಇದ್ದು, ಮಾಸ್ಕ್ ವಿತರಣೆ ಕಾರ್ಯ ಕೂಡ ಮಾಡುತ್ತಿದ್ದಾರೆ. ಗುಜರಾತ್ನ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಷ್ಟ್ರೀಯ ಅಧ್ಯಕ್ಷ ಅನಿಲ್ ಅವರ ಸಹಕಾರದ ಮೇರೆಗೆ ಬೆಂಗಳೂರಿನ ಸೈದಾನ್ ನುಷ್ರಾತ್, ಚಾಮುಂಡೇಶ್ವರಿ, ಅಜುಂ ನೇತೃತ್ವದ ತಂಡ ನೆರವಿಗೆ ಮುಂದಾಗಿದೆ.