ETV Bharat / city

ಶಾಲಾರಂಭ ವಿಚಾರ: ಸರ್ಕಾರಕ್ಕೆ ಇನ್ನೊಂದು ವಾರ ಗಡುವು ನೀಡಿದ ಖಾಸಗಿ ಶಾಲಾ ಸಂಘಟನೆಗಳು

author img

By

Published : Aug 1, 2021, 4:30 PM IST

Updated : Aug 1, 2021, 4:37 PM IST

ಶಾಲೆಗಳ ಆರಂಭಕ್ಕೆ ನಿರ್ಧಾರ ಮಾಡಲಾಗಿತ್ತು.‌ ಆದರೆ, ಸಿಎಂ ಶಾಲಾ ಆರಂಭದ ಬಗ್ಗೆ ಚರ್ಚೆ ಮಾಡಲು ಕರೆ ನೀಡಿದ್ದಾರೆ. ಸಿಎಂ ಭೇಟಿ ಮಾಡಿ ಬಳಿಕ ಶಾಲೆಗಳ ಆರಂಭದ ಬಗ್ಗೆ ಚರ್ಚಿಸುತ್ತೇವೆ. ಶಾಲೆಗಳ ಆರಂಭದ ಬಗ್ಗೆ ದುಡುಕಿನ ನಿರ್ಧಾರ ಬೇಡ ಎನ್ನುತ್ತಿದ್ದಾರೆ. ಹೊಸ ಸಿಎಂಗೆ ಗೌರವ ಕೊಟ್ಟು ಮತ್ತೊಂದು ವಾರ ಗಡುವು ನೀಡಲು ನಿರ್ಧರಿಸಲಾಗಿದೆ ಎಂದು ರೂಪ್ಸಾ ಜಿಲ್ಲಾ ಸಂಘಟನೆಯ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಹೇಳಿದರು.

Bangalore
ಖಾಸಗಿ ಶಾಲಾ ಸಂಘಟನೆಗಳಿಂದ ಸುದ್ದಿಗೋಷ್ಠಿ

ಬೆಂಗಳೂರು: ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ಸಿಡಿದೆದ್ದಿವೆ. ಶಾಲೆ ಆರಂಭಕ್ಕೆ ಗಡುವು ನೀಡಿದ್ದ ಸಂಘಟನೆಗಳು, ಸರ್ಕಾರ ಅನುಮತಿ ನೀಡಲಿ ಅಥವಾ ನೀಡದಿರಲಿ ಇನ್ನೊಂದು ವಾರದಲ್ಲಿ ತರಗತಿ ಆರಂಭಿಸುವುದಾಗಿ ತಿಳಿಸಿವೆ.

ಶಾಲಾರಂಭ ವಿಚಾರ: ಸರ್ಕಾರಕ್ಕೆ ಇನ್ನೊಂದು ವಾರ ಗಡುವು ...

ಈ ಕುರಿತು ರೂಪ್ಸಾ ರಾಜ್ಯ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಬಣ ಹಾಗೂ ಜಿಲ್ಲಾ ಸಂಘಟನೆಯ ಹಾಲನೂರು ಲೇಪಾಕ್ಷಿ ಬಣ ಇಂದು ಪ್ರತ್ಯೇಕ ಮಾಧ್ಯಮಗೋಷ್ಟಿ ನಡೆಸಿದರು.

ಈ ವೇಳೆ ಮಾತಾನಾಡಿದ ರೂಪ್ಸಾ ಜಿಲ್ಲಾ ಸಂಘಟನೆಯ ಅಧ್ಯಕ್ಷ ಹಾಲನೂರು ಲೇಪಾಕ್ಷಿ, ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆಗೆ ಜು.31ರವರೆಗೆ ಡೆಡ್​ಲೈನ್ ನೀಡಲಾಗಿತ್ತು. ಆದರೆ ಸರ್ಕಾರದಿಂದ ಶಾಲೆ ಆರಂಭಕ್ಕೆ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ನಾಳೆಯಿಂದ(ಆ. 2) ಶಾಲೆ ಆರಂಭಕ್ಕೆ ನಿರ್ಧಾರ ಮಾಡಲಾಗಿತ್ತು.‌ ಆದರೆ, ಸಿಎಂ ಶಾಲಾ ಆರಂಭದ ಬಗ್ಗೆ ಚರ್ಚೆ ಮಾಡಲು ಕರೆ ನೀಡಿದ್ದಾರೆ. ಸಿಎಂ ಭೇಟಿ ಮಾಡಿ ಬಳಿಕ ಶಾಲೆ ಆರಂಭದ ಬಗ್ಗೆ ಚರ್ಚೆ ಮಾಡುತ್ತೇವೆ. ಶಾಲೆಗಳ ಆರಂಭದ ಬಗ್ಗೆ ದುಡುಕಿನ ನಿರ್ಧಾರ ಬೇಡ ಎನ್ನುತ್ತಿದ್ದಾರೆ. ಹೊಸ ಸಿಎಂಗೆ ಗೌರವ ಕೊಟ್ಟು ಮತ್ತಷ್ಟು ಕಾಲಾವಕಾಶ ಕೊಡಲು ನಿರ್ಧಾರ ಮಾಡಲಾಗಿದೆ ಎಂದರು.

ಸದ್ಯ, ಪರ್ಯಾಯ ಮಾರ್ಗದಿಂದಾದರೂ ಶಾಲೆ ಆರಂಭ ಮಾಡಬೇಕಿದೆ. ಶಿಕ್ಷಕರಿಗೆ ಲಸಿಕೆ ನೀಡಿದ್ದೇವೆ. ವಿದ್ಯಾಗಮ ಹಾಗೂ ಪಾಳಿ ಪದ್ಧತಿಯಲ್ಲಿ ಶಾಲೆ ಆರಂಭಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಜವಾಬ್ದಾರಿ ಹೊರಲು ಯಾರಿಂದಲೂ ಸಾಧ್ಯವಿಲ್ಲ:

ರಾಜ್ಯದಲ್ಲಿ ಕೊರೊನಾ ಇಳಿಕೆಯಾಗುತ್ತಿದ್ದಂತೆ ಶಾಲೆ ಆರಂಭಿಸುವಂತೆ ಹಿಂದಿನ‌ ಸಚಿವರಿಗೆ ಸಾಕಷ್ಟು ಮನವಿ ಮಾಡಲಾಗಿತ್ತು. ಜೂನ್ ತಿಂಗಳಿನಲ್ಲಿಯೇ ಶಾಲೆ ಆರಂಭ ಮಾಡಿದ್ದರೆ ಕನಿಷ್ಠ 50 ಬೋಧಕ ದಿನಗಳು ಸಿಗುತ್ತವೆ. ನಂತರ ಸೋಂಕು ಹೆಚ್ಚಾದರೆ ಆನ್ ಲೈನ್ ಪಾಠ ಮುಂದುವರೆಸುವಂತೆ ಹೇಳಲಾಗಿತ್ತು. ಆದರೆ ಸಚಿವರು ಕ್ಯಾರೇ ಎನ್ನಲಿಲ್ಲ ಎಂದು ರೂಪ್ಸಾದ ರಾಜ್ಯ ಸಂಘಟನೆ ಅಧ್ಯಕ್ಷ ಲೋಕೇಶ್ ಕಿಡಿಕಾರಿದರು.

ಸದ್ಯ ಹೊಸ ಸಿಎಂ ಮನವಿ ಮೇರೆಗೆ ಶಾಲೆ ಆರಂಭ ಮಾಡುವುದನ್ನ ಮುಂದಕ್ಕೆ ಹಾಕುತ್ತಿದ್ದು, ನಂತರ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ ಶಾಲೆಗಳು ಶುರುವಾದರೆ ಆಡಳಿತ ಮಂಡಳಿ ಜವಾಬ್ದಾರಿ ತೆಗೆದುಕೊಳ್ಳುತ್ತಾ ಎಂದು ಪ್ರಶ್ನಿಸಿದಾಗ, ಕೊರೊನಾ ವಿಚಾರದಲ್ಲಿ ಯಾರು ಕೂಡ ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯವಿಲ್ಲ.

ಆರ್ಥಿಕ‌ ವಿಷಯ ಎಂದು ಬಂದಾಗ ಹೋಟೆಲ್, ಸಿನಿಮಾ, ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭವಾಗಿದ್ದು, ಇದರಲ್ಲಿ ಯಾರೂ ಜವಾಬ್ದಾರಿ ತೆಗೆದುಕೊಂಡಿಲ್ಲ‌. ಆದರೆ ಶಾಲೆ ಆರಂಭವಾದರೆ ಆಡಳಿತ ಮಂಡಳಿಯೇ ಜವಾಬ್ದಾರಿ ತೆಗೆದುಕೊಳ್ಳಲಿ ಎಂಬುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸದ್ಯ ಎರಡು ಸಂಘಟನೆಗಳು ವಾರಗಳ ಕಾಲ ನೂತನ ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿವೆ‌. ಒಂದು ವೇಳೆ ಕೊರೊನಾ ಹೆಚ್ಚಾದರೆ ಮುಂದೆ ಶಾಲೆಗಳು ಆರಂಭವಾಗುತ್ತಾ? ಆರಂಭವಾದರೂ ಪೋಷಕರು ತಮ್ಮ ಮಕ್ಕಳನ್ನ ಕಳಿಸಲು ಒಪ್ಪುತ್ತಾರ?.‌ ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.‌

ಇದನ್ನೂ ಓದಿ: ಶಾಲೆಗಳ ಪುನಾರಂಭದ ಬಗ್ಗೆ ದುಡುಕುವುದು ಬೇಡ : ಡಾ.ಸಿ ಎನ್ ಮಂಜುನಾಥ್ ಸಲಹೆ

Last Updated : Aug 1, 2021, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.