ETV Bharat / city

ಖ್ಯಾತ ವಿದ್ವಾಂಸ ಕೆ.ಎಸ್ ನಾರಾಯಣಾಚಾರ್ಯ ನಿಧನ: ಸಿಎಂ ಸೇರಿ ಗಣ್ಯರಿಂದ‌ ಸಂತಾಪ - ಕೆ ಎಸ್ ನಾರಾಯಣಾಚಾರ್ಯ ನಿಧನಕ್ಕೆ ಬಿಜೆಪಿ ನಾಯಕರಿಂದ ಸಂತಾಪ

ಖ್ಯಾತ ವಿದ್ವಾಂಸ ಕೆ.ಎಸ್ ನಾರಾಯಣಾಚಾರ್ಯ ನಿಧನ ಹೊಂದಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Scholar  K S Narayanacharya died
ಖ್ಯಾತ ವಿದ್ವಾಂಸ ಕೆ.ಎಸ್ ನಾರಾಯಣಾಚಾರ್ಯ ನಿಧನ
author img

By

Published : Nov 26, 2021, 12:12 PM IST

ಬೆಂಗಳೂರು: ಖ್ಯಾತ ಲೇಖಕ, ಪ್ರಚಾರಕ ಮತ್ತು ಪ್ರವಚನಕಾರ ಪ್ರೊ. ಕೆ.ಎಸ್ ನಾರಾಯಣಾಚಾರ್ಯ ಮೈಸೂರಿನ‌ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

1933ರಲ್ಲಿ ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದರು. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ(1954), ಬಿ.ಎ(1957), ಎಂ.ಎ(ಇಂಗ್ಲಿಷ್-1958) ಪದವಿಗಳನ್ನು ಪಡೆದಿದ್ದಾರೆ. "ಡಬ್ಲು. ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೇಟ್​ರ ಕಾವ್ಯಗಳ ಮೇಲೆ ಭಾರತೀಯ ತತ್ವಶಾಸ್ತ್ರ ಪ್ರಭಾವ" ವಿಷಯದ ಮೇಲೆ ಪಿ.ಹೆಚ್.ಡಿ (1959-61) ಪಡೆದುಕೊಂಡಿದ್ದರು. ಅಲ್ಲದೇ,

  • 1961ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು.
  • 1967ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರವಾಚಕರಾಗಿ ಸೇವೆ ಸಲ್ಲಿಸಿದರು.
  • 1973ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.
  • 1991ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನ ಪ್ರಾಚಾರ್ಯರಾಗಿದ್ದರು.
  • 1993ರಲ್ಲಿ ನಿವೃತ್ತಿ ಪಡೆದರು.

ಪ್ರಶಸ್ತಿ:

ವಿದ್ವನ್ಮಣಿ, ವೇದಭೂಷಣ, ವಾಲ್ಮೀಕಿ ಹೃದಯಜ್ಞ, ರಾಮಾಯಣಾಚಾರ್ಯ, ಮಹಾಭಾರತಾಚಾರ್ಯ ಸೇರಿದಂತೆ ಮೊದಲಾದ ಬಿರುದುಗಳು ವಿವಿಧ ಮಠಾಧೀಶರಿಂದ ಬಂದಿದೆ. ಗಮಕರತ್ನಾಕರ(ಗಮಕ ಸಮ್ಮೇಳನಾಧ್ಯಕ್ಷರಾಗಿ, ಸರ್ಕಾರದಿಂದ), ವೇದ ಸಂಸ್ಕೃತಿ ಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ(1973) ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2008)ಯನ್ನು ಪಡೆದುಕೊಂಡಿದ್ದರು.

ಸಂತಾಪ:

ವಿದ್ವಾಂಸರಾಗಿದ್ದ ಪ್ರೊ. ಕೆ.ಎಸ್. ನಾರಾಯಣಾಚಾರ್ಯರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಿಎಂ ಟ್ವೀಟ್:

ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಟ್ರಭಕ್ತಿ ಹೊಂದಿದ್ದು, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು.

ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕೃತಿಗಳ ಮೂಲಕ ಅವರ ನೆನಪು ಸದಾಕಾಲ ಉಳಿಯಲಿ ಮತ್ತು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

  • ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು. ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.
    1/2 pic.twitter.com/yOzb37Y1je

    — Basavaraj S Bommai (@BSBommai) November 26, 2021 " class="align-text-top noRightClick twitterSection" data=" ">

ಜೋಷಿ ಸಂತಾಪ:

ವಿದ್ವಾಂಸರು ಹಾಗೂ ಅನೇಕ ಪೌರಾಣಿಕ ಕಾದಂಬರಿಗಳ ರಚನಾಕಾರರಾಗಿದ್ದ ಪ್ರೊ.ಕೆ.ಎಸ್. ನಾರಾಯಣಾಚಾರ್ಯರ ನಿಧನ ನೋವಿನ ಸಂಗತಿಯಾಗಿದೆ. ಪ್ರವಚನ ಮತ್ತು ಕಾದಂಬರಿಕಾರರಾಗಿ ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಾರ್ಥಿಸಿ ಸಂತಾಪ ಸೂಚಿಸಿದ್ದಾರೆ.

ಬಿಎಸ್​​ವೈ ಸಂತಾಪ:

ಪ್ರಸಿದ್ಧ ಲೇಖಕರು, ರಾಷ್ಟ್ರೀಯತೆಯ ಪ್ರಚಾರಕರು, ಶಾಸ್ತ್ರ ಪ್ರವಚನಕಾರರಾಗಿದ್ದ ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್.ನಾರಾಯಣಾಚಾರ್ಯ ಅವರು ವಿಧಿವಶರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದ್ದು, ಅಧ್ಯಾತ್ಮಿಕ ಲೋಕ ಹಿರಿಯ ಗುರುಗಳನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಡಾ. ಅಶ್ವತ್ಥನಾರಾಯಣ ಸಂತಾಪ:

ಬಹುಶ್ರುತ ವಿದ್ವಾಂಸ, ಹೆಸರಾಂತ ಲೇಖಕ ಡಾ.ಕೆ.ಎಸ್. ನಾರಾಯಣಾಚಾರ್ಯ ಅವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಮಹಾಕಾವ್ಯಗಳು, ವೇದೋಪನಿಷತ್ತು, ರಾಷ್ಟ್ರೀಯತೆಗಳ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದ ನಾರಾಯಾಣಾಚಾರ್ಯರು ನಿಜವಾದ ಅರ್ಥದಲ್ಲಿ ಸನಾತನ ಸಂಸ್ಕೃತಿಯ ವಾರಸುದಾರರಾಗಿದ್ದರು. ಅವರ ನಿಧನದಿಂದ ಪಾಂಡಿತ್ಯ ಪರಂಪರೆಯ ಶಕೆಯೊಂದು ಪರಿಸಮಾಪ್ತಿಗೊಂಡಿದೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

  • ಪ್ರಸಿದ್ದ ಲೇಖಕರು, ರಾಷ್ಟ್ರೀಯತೆಯ ಪ್ರಚಾರಕರು, ಶಾಸ್ತ್ರ ಪ್ರವಚನಕಾರರಾಗಿದ್ದ ಹಿರಿಯ ವಿದ್ವಾಂಸ ಪ್ರೊ ಕೆ.ಎಸ್.ನಾರಾಯಣಾಚಾರ್ಯ ವಿಧಿವಶರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದ್ದು, ಆಧ್ಯಾತ್ಮಿಕ ಲೋಕ ಹಿರಿಯ ಗುರುಗಳನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಪ್ರಾರ್ಥಿಸುತ್ತೇನೆ.

    — B.S. Yediyurappa (@BSYBJP) November 26, 2021 " class="align-text-top noRightClick twitterSection" data=" ">

70ಕ್ಕೂ ಹೆಚ್ಚು ಕೃತಿಗಳ ಲೇಖಕರಾಗಿದ್ದ ಆಚಾರ್ಯರು, ಸಂವಾದ ಪರಂಪರೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಅಜ್ಞಾತವಾಗಿದ್ದ ವಿಚಾರಗಳನ್ನು ಪುರಾವೆಗಳೊಂದಿಗೆ ಬೆಳಕಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರನ್ನು ಕಳೆದುಕೊಂಡಿರುವ ನಾಡು ಬಡವಾಗಿದ್ದು, ಸಾರಸ್ವತ ಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ದುಃಖಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಹುಲಿಗಿಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆ, ರೈತರಿಗೆ ತಪ್ಪದ ಆತಂಕ

ಕನ್ನಡ, ಸಂಸ್ಕೃತ, ತಮಿಳು ಮತ್ತು ಇಂಗ್ಲೀಷ್ ಭಾಷೆಗಳ ಮೇಲೆ ಅಪಾರ ಪ್ರಭುತ್ವ ಸಾಧಿಸಿದ್ದ ನಾರಾಯಣಾಚಾರ್ಯರು, ಯಾವುದೇ ವಿಷಯದ ಕುರಿತು ತಲಸ್ಪರ್ಶಿ ಅಧ್ಯಯನಕ್ಕೆ ಹೆಸರಾಗಿದ್ದರು. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಿ, ಅವರ ಕುಟುಂಬದ ಸದಸ್ಯರು ಮತ್ತು ಶಿಷ್ಯವೃಂದಕ್ಕೆ ದುಃಖವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಕೊಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.

ಕಟೀಲ್ ಸಂತಾಪ:

ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಹಿಂದುತ್ವ ಮತ್ತು ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರಾಗಿದ್ದರು. ಅವರ ನಿಧನವು ಅತ್ಯಂತ ಬೇಸರದ ವಿಚಾರ. ಇದರಿಂದ ಕೇವಲ ವಿದ್ವತ್ ಲೋಕಕ್ಕಷ್ಟೇ ಅಲ್ಲ, ಸಾಮಾನ್ಯ ಜನತೆಗೂ ಅಪಾರ ನೋವು ಹಾಗೂ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರ ಭಕ್ತಿ ಮತ್ತು ಸಂಸ್ಕೃತಿಗಳ ಆರಾಧಕರಾಗಿದ್ದು ಅವುಗಳ ಬಗ್ಗೆ ಅಧಿಕಾರಪೂರ್ವಕವಾಗಿ ಮಾರ್ಗದರ್ಶನ ನೀಡುತ್ತಿದ್ದ ಆಚಾರ್ಯರ ನಿಧನಕ್ಕೆ ತೀವ್ರ ಸಂತಾಪಗಳು ಎಂದು ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಅವರ ಕುಟುಂಬ, ಬಂಧುವರ್ಗ, ಅಭಿಮಾನಿಗಳಿಗೆ ದೇವರು ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.

ದತ್ತಾತ್ರೇಯ ಹೊಸಬಾಳೆ ಸಂತಾಪ:

ಸುಪ್ರಸಿದ್ಧ ಲೇಖಕರೂ ಮೇರು ವಿದ್ವಾಂಸರೂ ಹಿಂದುತ್ವ - ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರೂ ಆಗಿದ್ದ ಪ್ರೊ. ಕೆ.ಎಸ್. ನಾರಾಯಣಾಚಾರ್ಯರ ನಿಧನ ನಾಡಿಗೆ ಅತೀವ ದುಃಖ ತಂದಿದೆ. ಅವರ ಮರಣದಿಂದಾಗಿ ವಿದ್ವತ್ ಲೋಕಕ್ಕಷ್ಟೇ ಅಲ್ಲ, ಸಾಮಾನ್ಯ ಜನತೆಗೂ ಅಪಾರ ನೋವು ಹಾಗೂ ನಷ್ಟ ಉಂಟಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ.

ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದು ಅವುಗಳ ಬಗ್ಗೆ ಆಗ್ರಹದಿಂದ ಅಧಿಕಾರಪೂರ್ವಕವಾಗಿ ಹೇಳುತ್ತಿದ್ದ ಆಚಾರ್ಯರ ನಿಧನಕ್ಕೆ ತೀವ್ರ ಸಂತಾಪಗಳು. ಪರಮಾತ್ಮ ಎಲ್ಲರಿಗೂ ನೋವನ್ನು ಭರಿಸುವ ಶಕ್ತಿಯನ್ನೂ ದಿವಂಗತರಿಗೆ ಸದ್ಗತಿಯನ್ನೂ ನೀಡಲೆಂದು ಪ್ರಾರ್ಥಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.