ETV Bharat / city

ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ವಿಚಾರ ಚರ್ಚೆ: ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ

ಸಿಎಂ ಚರ್ಚೆಗೆ ಅಂತ್ಯ ಹಾಡಲೇ ಬೇಕಿದೆ. ದಲಿತ, ಲಿಂಗಾಯುತ, ಒಕ್ಕಲಿಗ, ಒಬಿಸಿ ಎಂಬುದೆಲ್ಲಾ ಚುನಾವಣೆಯ ನಂತರ ಚರ್ಚೆಗೆ ಬರಬೇಕು, ಈಗ ಅಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Sathish jarakiholi
ಸತೀಶ್ ಜಾರಕಿಹೊಳಿ
author img

By

Published : Jun 28, 2021, 12:09 PM IST

Updated : Jun 28, 2021, 12:14 PM IST

ಬೆಂಗಳೂರು: ಕಾಂಗ್ರೆಸ್​ನಲ್ಲಿ ಸದ್ಯ ಹೆಚ್ಚು ಚರ್ಚೆ ಆಗ್ತಿರುವ ವಿಷ್ಯ ಅಂದ್ರೆ ಅದು ಮುಂದಿನ ಸಿಎಂ ಯಾರು ಅನ್ನೋದು. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ರಾಜ್ಯದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂದಿನ ಸಿಎಂ ಚರ್ಚೆ ವಿಚಾರಕ್ಕೆ ತೆರೆ ಬೀಳುತ್ತೆ. ನಮ್ಮ ಹೈಕಮಾಂಡ್ ಇದೆ. ಅದು ಎಲ್ಲವನ್ನು ನೋಡಿಕೊಳ್ಳಲಿದೆ ಎಂದಿದ್ದಾರೆ.

ಮುಂದಿನ ಸಿಎಂ ಚರ್ಚೆಗೆ ಅಂತ್ಯ ಹಾಡಲೇ ಬೇಕಿದೆ. ಈ ಚರ್ಚೆ ಅವಶ್ಯಕತೆ ಇಲ್ಲ, ಚುನಾವಣೆ ಯಾವಾಗ ಅಂತನೂ ಗೊತ್ತಿಲ್ಲ. ದಲಿತ, ಲಿಂಗಾಯುತ, ಒಕ್ಕಲಿಗ, ಒಬಿಸಿ ಎಂಬುದೆಲ್ಲಾ ಚುನಾವಣೆಯ ನಂತರ ಚರ್ಚೆಗೆ ಬರಬೇಕು, ಈಗ ಅಲ್ಲ. ಟೈಮ್ ಬೇಕಾಗುತ್ತೆ. ಖಂಡಿತ ಎಲ್ಲದಕ್ಕೂ ಪೂರ್ಣವಿರಾಮ ಹಾಕಲೇಬೇಕು ಎಂದು ಹೇಳಿದ್ದಾರೆ.

ಈ ಬೆಳವಣಿಗೆಯಿಂದ ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗಲ್ಲ. ಅಂತಹ ಯಾವುದೇ ಬೆಳವಣಿಗೆಗಳು ಪಕ್ಷದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಸತೀಶ್​ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಫಡ್ನವಿಸ್ ಭೇಟಿಗಾಗಿ ಇಂದು ಮತ್ತೆ ಮುಂಬೈಗೆ: ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ‌ ನಡೆ

Last Updated : Jun 28, 2021, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.