ಬೆಂಗಳೂರು: ಸಂಸ್ಕೃತ ಶಾಸ್ತ್ರಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಬುಧವಾರ ರನ್ ಫಾರ್ ಸಂಸ್ಕೃತ್ ಓಟವನ್ನು ಆಯೋಜಿಸಿದೆ. ಈ ಓಟದಲ್ಲಿ ಭಾರತದಾದ್ಯಂತ ಸಂಸ್ಕೃತವನ್ನು ಅಭ್ಯಸಿಸುತ್ತಿರುವ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ (ರಾಷ್ಟ್ರೀಯ ಸಂಸ್ಕೃತ ಸಂಸ್ಥಾನವು) ಪ್ರತಿವರ್ಷ ನಡೆಸುವ ಅಖಿಲ ಭಾರತೀಯ ಶಾಸ್ತ್ರೀಯ ಸ್ಪರ್ಧೆಗಳನ್ನು 2021-22ನೇ ಸಾಲಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಆಯೋಜಿಸುತ್ತಿದ್ದು, 59ನೇ ಅಖಿಲ ಭಾರತೀಯ ಶಾಸ್ತ್ರೀಯ ಸ್ಪರ್ಧೆಗಳು ಈಗಾಗಲೇ ನಡೆಯುತ್ತಿವೆ. ನಾಳೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಅಲ್ಲದೇ, ಸಂಸ್ಕೃತ ಶಾಸ್ತ್ರವನ್ನು ಉಳಿಸುವ ನಿಟ್ಟಿನಲ್ಲಿ ನಾಳೆ ಬೆಳಗ್ಗೆ 6 ಗಂಟೆಗೆ ರಾಮಕೃಷ್ಣ ಆಶ್ರಮದಿಂದ ಲಾಲ್ಬಾಗ್ವರೆಗೆ ಸಂಸ್ಕೃತಕ್ಕಾಗಿ ಓಟವನ್ನು ನಡೆಸಲಾಗುತ್ತದೆ. ಈಗಾಗಲೇ 26 ಶಾಸ್ತ್ರೀಯ ಸ್ಪರ್ಧೆಗಾಗಿ ಸುಮಾರು 24 ರಾಜ್ಯಗಳ 344 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿಯ ಪದಕಗಳು ಹಾಗೂ ವಿಜೇತ ತಂಡಕ್ಕೆ ವಿಜಯವೈಜಯಂತಿ ಪಾರಿತೋಷಕವನ್ನು ನೀಡಿ ಗೌರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಓದಿ: ಲಾಕ್ಡೌನ್ನಲ್ಲಿ ದಾಖಲಾದ ಪೊಲೀಸ್ ಕೇಸ್ಗಳ ವಾಪಸ್ಗೆ 'ಮಹಾ' ನಿರ್ಧಾರ