ETV Bharat / city

ಸ್ಟಾರ್ ನಟ, ನಟಿಯರ ಹೆಸರು ರಿವೀಲ್ ಮಾಡಿದ ರಾಗಿಣಿ ಆಪ್ತ: ಪಕ್ಕಾ ಸಾಕ್ಷ್ಯ ಸಿಕ್ರೆ ಅವರಿಗೂ ಸಿಸಿಬಿ ಗಾಳ! - ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ವಿಚಾರಣೆ

ತನ್ನ ಜೊತೆ ಸಂಪರ್ಕ ಹೊಂದಿದವರ ಹೆಸರುಗಳನ್ನು ಸದ್ಯ ಸಿಸಿಬಿ ಎದುರು ಶ್ರೀ ಬಾಯ್ಬಿಟ್ಟಿದ್ದಾನೆ. ಒಂದು ವೇಳೆ ಡ್ರಗ್ಸ್​ ಸೇವನೆ ಮಾಡಿರುವುದಕ್ಕೆ ಪಕ್ಕಾ ಸಾಕ್ಷ್ಯಗಳು ಸಿಕ್ಕರೆ ಮತ್ತೆ ವಿಚಾರಣೆಗೆ ಬುಲಾವ್ ನೀಡುವ ಸಾಧ್ಯತೆ ಇದೆ.

ragini friend
ರಾಗಿಣಿ ಆಪ್ತ
author img

By

Published : Sep 22, 2020, 7:55 AM IST

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸದ್ಯ ಸಿಸಿಬಿ ಖೆಡ್ಡಾಕ್ಕೆ ಬಿದ್ದಿರುವ ರಾಗಿಣಿ ಆಪ್ತ ಶ್ರೀನಿವಾಸ್ ಅಲಿಯಾಸ್ ಶ್ರೀಯನ್ನ ತನಿಖಾಧಿಕಾರಿಗಳು ಚಾಮಾರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ತಡರಾತ್ರಿಯವರೆಗೆ ವಿಚಾರಣೆಗೆ ಒಳಪಡಿಸಿದ್ದರು. ರಾಗಿಣಿ ಆಪ್ತನಾಗಿರುವ ಶ್ರೀ ಜೊತೆ ರಾಗಿಣಿ ಅಷ್ಟೇ ಅಲ್ಲದೆ ಐದು ಸ್ಟಾರ್ ನಟರು ಹಾಗೂ ಇಬ್ಬರು ನಟಿಯರು ಸಂಪರ್ಕ ಹೊಂದಿದ್ದು, ಮೋಜು ಮಸ್ತಿ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ.

ತನ್ನ ಜೊತೆ ಸಂಪರ್ಕ ಹೊಂದಿದವರ ಹೆಸರುಗಳನ್ನು ಸದ್ಯ ಸಿಸಿಬಿ ಎದುರು ಶ್ರೀ ಬಾಯ್ಬಿಟ್ಟಿದ್ದಾನೆ. ಒಂದು ವೇಳೆ ಡ್ರಗ್ಸ್​ ಸೇವನೆ ಮಾಡಿರುವುದಕ್ಕೆ ಪಕ್ಕಾ ಸಾಕ್ಷ್ಯಗಳು ಸಿಕ್ಕರೆ ಮತ್ತೆ ವಿಚಾರಣೆಗೆ ಬುಲಾವ್ ನೀಡುವ ಸಾಧ್ಯತೆ ಇದೆ. ಶ್ರೀ‌ ನಗರದಲ್ಲಿ ಫ್ಲಾಟ್ ಹೊಂದಿದ್ದು, ಇಲ್ಲಿ ವಿಕೇಂಡ್ ಪಾರ್ಟಿಗೆಂದು ಹಲವು ಪ್ರತಿಷ್ಠಿತ ನಟರು ಬಂದು ಹೋಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ragini friend
ರಾಗಿಣಿ ಆಪ್ತನ ಮನೆಯಲ್ಲಿ ಗಾಂಜಾ ಗಿಡ
ಸಿಸಿಟಿವಿ ಪರಿಶೀಲನೆ: ಈಗಾಗಲೇ ಶ್ರೀ ಮನೆಯಲ್ಲಿ ಗಾಂಜಾ ಗಿಡ ಕೂಡ ಪತ್ತೆಯಾದ ಕಾರಣ ಸದ್ಯ ಶ್ರೀ ವಾಸವಿದ್ದ ಅಪಾರ್ಟ್​ಮೆಂಟ್​​​ನಲ್ಲಿರುವ ಸಿಸಿಟಿವಿಯನ್ನ ಸಿಸಿಬಿ ಪರಿಶೀಲನೆ ನಡೆಸಲು ಮುಂದಾಗಿದೆ. ಶ್ರೀ ಮನೆಗೆ ಯಾವೆಲ್ಲಾ ಸ್ಟಾರ್ ನಟ, ನಟಿಯರು ಬಂದು ಹೋಗ್ತಿದ್ರು ಅನ್ನೋ ‌ಮಾಹಿತಿ ಕಲೆಹಾಕಿ, ಒಂದು ವೇಳೆ ಪಕ್ಕಾ ಸಾಕ್ಷ್ಯಗಳು ದೊರೆತರೆ ಸಿಸಿಬಿ ಖೆಡ್ಡಾಕ್ಕೆ ಮತ್ತಷ್ಟು ಸ್ಟಾರ್​ಗಳು ಬೀಡುವುದು ಗ್ಯಾರಂಟಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.