ETV Bharat / city

'ರನ್ ಫಾರ್‌ ವೃಷಭಾವತಿ' ಮ್ಯಾರಥಾನ್​​ಗೆ ಸಾಥ್ ನೀಡಿದ ರಾಕಿಂಗ್ ಸ್ಟಾರ್..! - Vrushbaavti river

ವೃಷಭಾವತಿ ಒಡಲನ್ನು ಸ್ವಚ್ಛಗೊಳಿಸುವ ಸಲುವಾಗಿ ಯುವ ಬ್ರಿಗೇಡ್ ಸೆಪ್ಟೆಂಬರ್ 22 ರಂದು 'ರನ್ ಫಾರ್ ವೃಷಭಾವತಿ' ಮ್ಯಾರಥಾನ್ ಹಮ್ಮಿಕೊಂಡಿದೆ.

run-for-vrushabhavati-marathon
author img

By

Published : Sep 20, 2019, 4:01 AM IST

ಬೆಂಗಳೂರು: ವೃಷಭಾವತಿ ಒಡಲನ್ನು ಸ್ವಚ್ಛಗೊಳಿಸುವ ಸಲುವಾಗಿ ಯುವ ಬ್ರಿಗೇಡ್ ಸೆಪ್ಟೆಂಬರ್ 22 ರಂದು ಹಮ್ಮಿಕೊಂಡಿರುವ 'ರನ್ ಫಾರ್ ವೃಷಭಾವತಿ' ಮ್ಯಾರಥಾನ್​ಗೆ ನಟ ಯಶ್ ಕೈಜೋಡಿಸಿದ್ದಾರೆ. ವಿಡಿಯೋ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾರಥ್ಯಾನ್​​ನಲ್ಲಿ ಭಾಗವಹಿಸಿ ಅರಿವು ಮೂಡಿಸುವಂತೆ ರಾಕಿಂಗ್​​ ಸ್ಟಾರ್ ಕರೆಕೊಟ್ಟಿದ್ದಾರೆ.

ಬಿಬಿಎಂಪಿ ನಿರ್ಲಕ್ಷ್ಯ ಹಾಗೂ ಬೆಂಗಳೂರು ನಿವಾಸಿಗಳ ಬೇಜವಾಬ್ದಾರಿಯಿಂದ ವೃಷಭಾವತಿ ನದಿ ಗಬ್ಬೆದ್ದು ನಾರುತ್ತಿದೆ. ಇದರ ಸ್ವಚ್ಛಕ್ಕಾಗಿ ನಡೆಯುತ್ತಿರುವ ಮ್ಯಾರಥಾನ್​ಗೆ ಸ್ಟಾರ್ ನಟ ಕೈಜೋಡಿಸುವ ಮೂಲಕ ಮತ್ತಷ್ಟು ಮಹತ್ವ ಪಡೆದಿದೆ.

ರಾಕಿಂಗ್ ಸ್ಟಾರ್​ ಯಶ್

ವೃಷಭಾವತಿ ಒಂದು ಶ್ರೇಷ್ಠ ನದಿ. ಇದು ನಗರದ ಮಧ್ಯದಲ್ಲಿ ಹರಿಯುತ್ತದೆ. ಆದರೆ, ಸಂಪೂರ್ಣ ಕೊಳಚೆ ನೀರಿನಿಂದ ಕೂಡಿದೆ. ಆದ್ದರಿಂದ ಅದನ್ನು ಕಾಪಾಡಿ ನಗರದ ಅಂದ ಹೆಚ್ಚಿಸುವ ಸಲುವಾಗಿ ನದಿಯನ್ನು ಅಭಿವೃದ್ಧಿಪಡಿಸಲು ಯುವ ಬ್ರಿಗೇಡ್​ ಮುಂದಾಗಿದೆ.

ನದಿಯನ್ನು ಅವರು ಸ್ವಚ್ಛಗೊಳಿಸಿ, ಇವರು ಅಭಿವೃದ್ಧಿ ಮಾಡಲಿ ಎಂದುಕೊಂಡು ಸುಮ್ಮನಿದ್ದರೆ ಏನೂ ಆಗುವುದಿಲ್ಲ. ಯಾರು ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ಮಾಡುತ್ತಾರೋ ಅಂತವರನ್ನು ಕಂಡರೆ ನನಗೆ ಗೌರವ. ಅಂತಹ ಮನಸ್ಥಿತಿಯ ಬಗ್ಗೆ ನನಗೆ ತುಂಬಾ ನಂಬಿಕೆ, ಅದರಿಂದಲೇ ಅಭಿವೃದ್ಧಿ ಸಾಧ್ಯ ಎಂದು ಯಶ್​ ಹೇಳಿದ್ದಾರೆ.

Intro:"ರನ್ ಫಾರ್‌ ವೃಷಭಾವತಿ” ಮ್ಯಾರಥಾನ್ ಗೆ ಸಾಥ್ ನೀಡಿದ ರಾಕಿಂಗ್ ಸ್ಟಾರ್ ಯಶ್!!!

ಬೆಂಗಳೂರು ನದಿ ವೃಷಭಾವತಿ ಇಂದು ಕೆಂಗೇರಿ ಮೋರಿ
ಯಾಗಿ ಮಲಿನಗೊಂಡಿದೆ. ಬಿಬಿಎಂಪಿ ನಿರ್ಲಕ್ಷ್ಯ ಬೆಂಗಳೂರು ನಿವಾಸಿಗಳು ಬೇಜವಾಬ್ದಾರಿಯಿಂದಇಂದು
ವೃಷಭಾವತಿ ನದಿ ಕೆಂಗೇರಿ ಮೋರಿಯಾಗಿದೆ. ಇನ್ನು ಈಗ ವೃಷಭಾವತಿ ಒಡಲನ್ನು ಸ್ವಚ್ಛಗೊಳಿಸುವ ಸಲುವಾಗಿ ಬೆಂಗಳೂರಿನ ಯುವ ಬ್ರಿಗೇಡ್ ಎಂಬ ಸಂಸ್ಥೆ ಇದೇ ಸೆಪ್ಟೆಂಬರ್ 22 ರಂದು ರನ್ ಫಾರ್ ವೃಷಭಾವತಿ ಮ್ಯಾರಥಾನ್ ಹಮ್ಮಿಕೊಂಡಿದೆ, ಇನ್ನುಈ ಮ್ಯಾರಥಾನ್ಗೆ
ರಾಕಿಂಗ್ ಸ್ಟಾರ್ಯಶ್.ಕೈಜೋಡಿಸಿದ್ದಾರೆಜೀವನದಲ್ಲಿ
ಯಾವತ್ತೂ ನಾನುನಂಬುವುದು ಒಂದು ಅದೇನೆಂದರೆ ತಪ್ಪು ನಡೆದಿರುತ್ತೆ . ಆತಪ್ಪನ್ನು ಅವರು ಮಾಡಿದರು ಇವರು ಮಾಡಿದರು, ಎಂದು.ಒಬ್ಬರ ಮೇಲೆ ಒಬ್ಬರ ತಪ್ಪನ್ನು ಹಾರಿಸಿಕೊಂಡು, ಇನ್ನೊಬ್ಬರು ಕೆಲಸ ಮಾಡಲಿ ಎಂದು ಸುಮ್ಮನಿದ್ದರೆ ಜೀವನದಲ್ಲಿ ಏನೂ ಆಗುವುದಿಲ್ಲ. ಯಾರು ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ಮಾಡುತ್ತಾರೋ ಅಂತವರನ್ನು ಕಂಡರೆ ನನಗೆ ಗೌರವ,
ಅಲ್ಲದೆ ಅಂತಹ ಮನಸ್ಥಿತಿಯ ಬಗ್ಗೆ ನನಗೆ ತುಂಬಾ ನಂಬಿಕೆ,ಅಂತಹ ನಂಬಿಕೆಯಿಂದಲೇ ಅಭಿವೃದ್ಧಿ
ಯಾಗುವುದು,Body:ಆನಿಟ್ಟಿನಲ್ಲಿ ಈಗ ಬೆಂಗಳೂರು ಯುವ ಬ್ರಿಗೇಡ್ ಒಂದು ಬೊಳ್ಳೆ ಉದ್ದೇಶದಿಂದ ನಮ್ಮ ಬೆಂಗಳೂರಿನಲ್ಲಿರುವ ವೃಷಭಾವತಿ ನದಿಯನ್ನು ಸ್ವಚ್ಛಗೊಳಿಸುವ ಸಲುವಾಗಿ ರನ್ ಫಾರ್ ವೃಷಭಾವತಿ ಎಂಬ ಮ್ಯಾರಥಾನ್ ಹಮ್ಮಿಕೊಂಡಿದ್ದಾರೆ.ಅಲ್ಲದೆ ಬೆಂಗಳೂರಿನಲ್ಲಿ ಸಾಕಷ್ಟು ಜನರು ವೃಷಭಾವತಿ ನದಿಯನ್ನು ಕೆಂಗೇರಿ ಮೋರಿ ಎಂದು ತಿಳಿದು ಕೊಂಡಿದ್ದಾರೆ ಆದರೆ ಅದು ಮೋರಿಯಲ್ಲಿ ವೃಷಭಾವತಿ ಒಂದು ಶ್ರೇಷ್ಠ ನದಿ. ಎಲ್ಲಾ ದೇಶಗಳಲ್ಲಿ ಸಿಟಿ ಮಧ್ಯದಲ್ಲಿ ಹರಿಯುವ ನದಿಯನ್ನು ತುಂಬಾ ಚೆನ್ನಾಗಿ ಕಾಪಾಡಿಕೊಂಡು ಸಿಟಿಯ ಅಂದವನ್ನು ಹೆಚ್ಚಿಸುವ
ಸಲುವಾಗಿ ಅಂತಹ ನದಿಯನ್ನು ಅಭಿವೃದ್ಧಿ ಪಡಿಸಿರುತ್ತಾರೆ .ಈಗ ಅಂತಹ ಕೆಲಸಕ್ಕೆ ಯುವ ಬ್ರಿಗೇಡ್
ಕೈ ಹಾಕಿದ್ದಾರೆ. ಇಂತಹ ಉತ್ತಮ ಕೆಲಸಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಈಗಾಗಿ ಸೆಪ್ಟೆಂಬರ್ 22 ಭಾನುವಾರ ನಡೆಯುವ ರನ್ ಫಾರ್ ವೃಷಭಾವತಿ ಮ್ಯಾರಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕನ್ನಡಿಗರಲ್ಲಿ ರಾಕಿಂಗ್ ಸ್ಟಾರ್ ಯಶ್ ಮನವಿ ಮಾಡಿದ್ದಾರೆ .ಅಲ್ಲದೆ ವೃಷಭಾವತಿ ಪುನಶ್ವೇತನ ಗೊಳಿಸಲು ಕೈ ಹಾಕಿರುವಯುವ ಬ್ರಿಗೇಡ್ ಗೆ ಬೆನ್ನು ತಟ್ಟಿದ್ದು ನಿಮ್ಮ ಜೊತೆನಾವು ಇರುತ್ತೇವೆ ಎಂದು ಯಶ್ ಭರವಸೆ ನೀಡಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.