ETV Bharat / city

ಹೊಸ ವರ್ಷಾಚರಣೆಗೆ ನಿಯಮಾವಳಿ ಬಗ್ಗೆ ಕಮಲ್ ಪಂತ್ ಏನಂದ್ರು? - ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಸಂಬಂಧ ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತೇವೆ. ಸದ್ಯ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆಂದು ಕಮಲ್ ಪಂತ್ ತಿಳಿಸಿದರು.

police commissioner kamal pant
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
author img

By

Published : Dec 10, 2021, 12:55 PM IST

ಬೆಂಗಳೂರು: ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಗಳ ಮೇಲೆ ಕಾರ್ಮೋಡ ಕವಿದಿದೆ. ಸೋಂಕು ಹರಡುವ ಆತಂಕವಿದ್ದು, ಮತ್ತೆ ಸಂಭ್ರಮಾಚರಣೆಗಳು ಮಂಕಾಗುವ ಸಾಧ್ಯತೆಗಳಿವೆ.

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತೇವೆ. ಎಲ್ಲ ರೀತಿಯ ಬಂದೋಬಸ್ತ್ ಕೈಗೊಳ್ಳಲಿದ್ದೇವೆ. ಒಮಿಕ್ರಾನ್ ಇರುವುದರಿಂದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಿದೆ. ಎಲ್ಲವನ್ನೂ ಗಮನದಲ್ಲಿಡಬೇಕು ಎಂದರು.

ಇಂದಿರಾನಗರ ಸರಣಿ ಅಪಘಾತ ಪ್ರಕರಣ:

ಬೆಂಜ್ ಕಾರು ಚಾಲಕ ಆಸ್ಪತ್ರೆಯಲ್ಲಿದ್ದಾರೆ. ಹೇಳಿಕೆ ಕೊಡುವ ಸ್ಥಿತಿಯಲ್ಲಿ ಅವರಿಲ್ಲ. ಅವರು ಡಿಸ್ಚಾರ್ಜ್ ಆದ ಬಳಿಕ ವಿಚಾರ ಗೊತ್ತಾಗಬೇಕಿದೆ. ರಕ್ತದ ಮಾದರಿಯನ್ನು ಎಫ್ಎಸ್ಎಲ್​ಗೆ ಕಳುಹಿಸಿದ್ದಾರೆ. ಏನು ವರದಿ ಬರುತ್ತದೋ ಅದರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.