ETV Bharat / city

ಪೊಲೀಸ್ ಭದ್ರತೆಯೊಂದಿಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ RT-PCR ಟೆಸ್ಟ್

ಬೆಂಗಳೂರು ತೊರೆದು ಹೋದವರೂ ಮತ್ತೆ ವಾಪಸ್​ ಆಗ್ತಿದ್ದಾರೆ. ಹೀಗಾಗಿ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರ್ಯಾಂಡಮ್​ ಆರ್​ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗ್ತಿದೆ.

Bangalore
ಪೊಲೀಸ್ ಭದ್ರತೆಯೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಆರ್​ಟಿಪಿಸಿಆರ್ ಟೆಸ್ಟ್
author img

By

Published : Jun 16, 2021, 10:55 AM IST

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳು ಅನ್​​​​​​​​​ಲಾಕ್​ ಆಗಿವೆ. ಅವುಗಳಲ್ಲಿ ರಾಜಧಾನಿ ಬೆಂಗಳೂರು ಕೂಡ ಒಂದು. ಯಾವಾಗ ಸಿಲಿಕಾನ್​ ಸಿಟಿ ಅನ್​ಲಾಕ್ ಆಗಿರೋದು ಜನರಿಗೆ ತಿಳೀತೋ ಆಗಿನಿಂದಲೇ ಮರು ವಲಸೆ ಆರಂಭವಾಗಿದೆ.

ಗೂಡುಬಿಟ್ಟು ಹೋಗಿದ್ದ ಹಕ್ಕಿಗಳೆಲ್ಲಾ ಮರಳಿ ಬರುತ್ತಿರುವ ಹಾಗೆ, ಬೆಂಗಳೂರು ತೊರೆದು ಹೋದವರೂ ಮತ್ತೆ ವಾಪಸ್​ ಆಗ್ತಿದ್ದಾರೆ. ಇದರಿಂದ ಕೋವಿಡ್​ ಸೋಂಕು ಹೆಚ್ಚಾಗುವ ಭೀತಿಯಿದ್ದು, ರೈಲ್ವೆ ನಿಲ್ದಾಣದಲ್ಲಿ ಎಲ್ಲರಿಗೂ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಲಾಗ್ತಿದೆ.

ಪೊಲೀಸ್ ಭದ್ರತೆಯೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಆರ್​ಟಿ-ಪಿಸಿಆರ್ ಟೆಸ್ಟ್

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರ್ಯಾಂಡಮ್​ ಆರ್​ಟಿ-ಪಿಸಿಆರ್ ಪರೀಕ್ಷೆ ಆರಂಭವಾಗಿದೆ. ರೈಲುಗಳಲ್ಲಿ ಬರುವ ಪ್ರಯಾಣಿಕರಿಗೆ ಬಿಬಿಎಂಪಿ ವತಿಯಿಂದ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಅನೇಕರು ಟೆಸ್ಟ್ ಬೇಡವೆಂದು ಹೋಗ್ತಿದ್ದರೂ ರ್ಯಾಂಡಮ್​ ಟೆಸ್ಟ್ ಮಾಡುವ ಮೂಲಕ ಕೊರೊನಾ ಸೋಂಕು ಪತ್ತೆಗೆ ಪಾಲಿಕೆ ಮುಂದಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆಯಿದ್ದು, ಪರೀಕ್ಷೆಗೆ ಅನುವು ಮಾಡಿಕೊಡಲಾಗ್ತಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾಗೆ 25ರ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.