ETV Bharat / city

ನೇಪಾಳಿ ಮಹಿಳೆ ಮೇಲೆ ಅತ್ಯಾಚಾರ ಯತ್ನ: ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಆರೋಪಿ ಎಸ್ಕೇಪ್ - ಬೆಂಗಳೂರು ಮಹಿಳೆಯ ಮೇಲೆ ಅತ್ಯಾಚಾರ

ಕುಡಿದ‌ ಮತ್ತಿನಲ್ಲಿ ನೇಪಾಳಿ ಕುಟುಂಬ ವಾಸವಿದ್ದ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ರೌಡಿಶೀಟರ್ ಓರ್ವನನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದರು. ಆದ್ರೆ, ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಆತ ಎಸ್ಕೇಪ್ ಆಗಿದ್ದು, ಪತ್ತೆಗಾಗಿ 2 ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ.

ರೌಡಿಶೀಟರ್
ರೌಡಿಶೀಟರ್
author img

By

Published : Apr 1, 2022, 8:14 AM IST

ಬೆಂಗಳೂರು: ನೇಪಾಳಿ ಮೂಲದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ರೌಡಿಶೀಟರ್​ ಓರ್ವನನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗುವಾಗ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಇದೀಗ ನಾಪತ್ತೆಯಾಗಿರುವ ರೌಡಿಶೀಟರ್​ ಹುಡುಕಾಟಕ್ಕೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ.

ಕಮರ್ಷಿಯಲ್ ಸ್ಟ್ರೀಟ್ ರೌಡಿಶೀಟರ್ ಆವೇಜ್ (22) ಕೃತ್ಯವೆಸಗಿ ತಪ್ಪಿಸಿಕೊಂಡಿದ್ದಾನೆ. ಸಂತ್ರಸ್ತ ಮಹಿಳೆಯ ಪತಿ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಆವೇಜ್, ನೇಪಾಳಿ ಕುಟುಂಬ ವಾಸವಿದ್ದ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿ, ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ: ಅಮಿತ್‌ ಶಾ ರಾಜ್ಯ ಪ್ರವಾಸ: ಇಂದು ಮಹತ್ವದ ಕೋರ್‌ ಕಮಿಟಿ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.