ETV Bharat / city

ರಾಜಕಾರಣಿಗಳಿಗೆ ಟಕ್ಕರ್ ಕೊಡಲು ಮುಂದಾದ ರೌಡಿ ಶೀಟರ್ಸ್: ಬಿಬಿಎಂಪಿಯಲ್ಲಿ ಪಾರುಪತ್ಯ ಮೆರೆಯಲು ತೆರೆಮರೆಯಲ್ಲಿ ತಯಾರಿ - ಈಟಿವಿ ಭಾರತ ಕನ್ನಡ

ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ರೌಡಿ ಶೀಟರ್‌ಗಳು ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣೆಗೆ ನಿಲ್ಲಲು ಗುಪ್ತ ಸಿದ್ದತೆಯಲ್ಲಿ ತೊಡಗಿರುವ ರೌಡಿಗಳ ಪಟ್ಟಿ ಸಂಗ್ರಹಿಸಿ ವರದಿ ನೀಡಲು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ ಗುಪ್ತಾ ತಾಕೀತು ಮಾಡಿದ್ದಾರೆ.

CCB
ಕೇಂದ್ರ ಅಪರಾಧ ವಿಭಾಗ
author img

By

Published : Aug 12, 2022, 8:52 AM IST

ಬೆಂಗಳೂರು: ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್​ಗಳ ಮೀಸಲಾತಿ ಪಟ್ಟಿ ಪ್ರಕಟಿಸಿದ್ದ ಬೆನ್ನಲೇ ಅಪರಾಧ ಲೋಕದಲ್ಲಿ ಗುರುತಿಸಿಕೊಂಡಿರುವ ಕ್ರಿಮಿನಲ್​​ಗಳು ಚುನಾವಣೆಗೆ ನಿಲ್ಲಲು ಸದ್ದಿಲ್ಲದೇ ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣೆಗೆ ನಿಲ್ಲಲು ಗುಪ್ತ ಸಿದ್ದತೆಯಲ್ಲಿ ತೊಡಗಿರುವ ರೌಡಿಗಳ ಪಟ್ಟಿ ಸಂಗ್ರಹಿಸಿ ವರದಿ ನೀಡಲು ಸಿಸಿಬಿ(ಕೇಂದ್ರ ಅಪರಾಧ ವಿಭಾಗ) ಜಂಟಿ ಪೊಲೀಸ್ ಆಯುಕ್ತ ರಮಣ ಗುಪ್ತಾ ತಾಕೀತು ಮಾಡಿದ್ದಾರೆ.

ಇದೇ ವರ್ಷ ಬಿಬಿಎಂಪಿ ಚುನಾವಣೆ‌ ನಡೆಯುವ ಸಾಧ್ಯತೆಯಿದೆ. ಇದಕ್ಕೆ‌ ಪೂರಕವಾಗಿ ಬಿಬಿಎಂಪಿ 198 ವಾರ್ಡ್​ಗಳಿಂದ 243 ವಾರ್ಡ್​ಗಳಿಗೆ ಏರಿಸಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ವಿವಿಧ ರಾಜಕೀಯ ಪಕ್ಷಗಳ‌ ನಾಯಕರ ಮುಂದೆ ನಿಂತು ಗೆಲ್ಲುವ ಇರಾದೆಯಲ್ಲಿ ರೌಡಿಗಳಿದ್ದಾರೆ. ಇನ್ನೂ ಕೆಲ ರೌಡಿಗಳು ತಮ್ಮ ಕುಟುಂಬದ ಸದ್ಯಸರೊಬ್ಬರನ್ನ ಎಲೆಕ್ಷನ್ ಅಖಾಡಕ್ಕೆ ನಿಲ್ಲುವಂತೆ‌ ಪರೋಕ್ಷವಾಗಿ ಸೂಚಿಸುತ್ತಿದ್ದಾರೆ. ಅಲ್ಲದೇ ತಮ್ಮ ಆಪ್ತರಿಗೂ ಚುನಾವಣಾ ಕಣದಲ್ಲಿ ನಿಂತರೆ ಬೆಂಬಲಿಸುವುದಾಗಿ ಹೇಳುತ್ತಿರುವುದು ಕಂಡು ಬಂದಿದೆ.‌

ಚುನಾವಣೆ ವೇಳೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಹಾಗೂ ಶಾಂತಿಯುತ ವಾತಾವರಣ ನಿರ್ಮಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಚುನಾವಣೆಗೆ ಧುಮುಕುವ ರೌಡಿಗಳ ಬಗ್ಗೆ‌ ನಿಗಾವಹಿಸಿ ಪಟ್ಟಿ ಸಂಗ್ರಹಿಸುವಂತೆ ಸಿಬ್ಬಂದಿಗೆ ರಮಣ ಗುಪ್ತಾ ಸೂಚಿಸಿದ್ದಾರೆ.

ಇನ್ನೊಂದು ವಾರದಲ್ಲಿ‌ ವರದಿ: ಬಿಬಿಎಂಪಿ ಚುನಾವಣೆಗೆ ನಿಲ್ಲಲು ಸಿದ್ದತೆ ನಡೆಸುತ್ತಿರುವ ರೌಡಿಗಳ ಬಗ್ಗೆ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ. ಸಂಬಂಧಪಟ್ಟ ಪೊಲೀಸರು ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲಿಗೆ ಯಾವ ಯಾವ ವಾರ್ಡ್​ಗಳಿಂದ ನಿಲ್ಲಲು ಸಿದ್ದತೆ ನಡೆಸುತ್ತಿದ್ದಾರೆ?, ಯಾವ ಪಕ್ಷದಿಂದ ಸ್ಪರ್ಧೆ ಅಥವಾ ಪಕ್ಷೇತರರಾಗಿ ನಿಲ್ಲುತ್ತಿದ್ದಾರಾ?, ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಯಾವ ಪಕ್ಷದಿಂದ ಟಿಕೆಟ್ ಕೇಳಿದ್ದಾರೆ?, ಯಾವ ಪಕ್ಷದಲ್ಲಿ ಎಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆ ಇರುವ ಅಭ್ಯರ್ಥಿಗಳಿದ್ದಾರೆ?, ಹಣಕಾಸು ಹಿನ್ನೆಲೆ ಏನು? ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ತಮ್ಮ ಕುಟುಂಬದ ಸದ್ಯಸರೊಬರನ್ನ ನಿಲ್ಲಿಸಲು ಹಾಗೂ ತನ್ನ ಸ್ನೇಹಿತ ಬಳಗದ ಅಭ್ಯರ್ಥಿಗಳಿಗೆ ಟಿಕೆಟ್ ದೊರಕಿಸುವಂತೆ ಮಾಡಿ ಚುನಾವಣೆ ಧುಮುಕಲು ಸನ್ನದ್ದರಾಗುತ್ತಿರುವವರ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮಾಹಿತಿ ಕಲೆ ಹಾಕಿ ಇನ್ನೊಂದು ವಾರದಲ್ಲಿ ಹಿರಿಯ ಅಧಿಕಾರಿಗಳಿಗೆ ರಿಪೋರ್ಟ್ ನೀಡಲಿದ್ದಾರೆ‌.

50ಕ್ಕಿಂತ ಹೆಚ್ಚು ರೌಡಿಗಳಿಗೆ ಖಡಕ್ ವಾರ್ನ್: ಮುಂಬರುವ ಚುನಾವಣೆ ಸುಗಮವಾಗಿ ನಡೆಸಲು ಹಾಗೂ ಹಿಂಸಾತ್ಮಕ ಘಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರ ವಹಿಸಿರುವ ಸಿಸಿಬಿ ಪೊಲೀಸರು ರೌಡಿಶೀಟರ್​​ಗಳು ಹಾಗೂ ಕುಖ್ಯಾತ ಆರೋಪಿಗಳನ್ನು ಕಚೇರಿಗೆ ಕರೆಯಿಸಿಕೊಂಡು ವಾರ್ನ್ ಮಾಡಿದ್ದಾರೆ. ಸಿಆರ್​​ಪಿಸಿ ಸೆಕ್ಷನ್ 110ರ ಪ್ರಕಾರ ಬಾಂಡ್ ಬರೆಯಿಸಿಕೊಂಡಿದ್ದಾರೆ.

ವಿಲನ್ಸ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್, ಕಾಡು ಬೀಸನಹಳ್ಳಿ ಸೋಮ, ರೋಹಿತ್ ಸೇರಿದಂತೆ 50ಕ್ಕೂ ಹೆಚ್ಚು ರೌಡಿಗಳಿಂದ ಬಾಂಡ್ ಬರೆಯಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಸಹಿ ಹಾಕಿಸಿಕೊಂಡಿದ್ದಾರೆ‌. ಒಂದು ವೇಳೆ ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾದರೆ ಅವರನ್ನು ನೇರವಾಗಿ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳದೇ ಹಾಗೂ ನ್ಯಾಯಾಧೀಶರ ಮುಂದೆ ಹಾಜರುಪಡಿಸದೇ ಜೈಲಿಗಟ್ಟಬಹುದಾಗಿದೆ.

ಜೈಲಿನಲ್ಲಿದ್ದಾರೆ 700ಕ್ಕಿಂತ ಹೆಚ್ಚು ಸಿಟಿ ರೌಡಿಗಳು: ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ 700ಕ್ಕಿಂತ ಹೆಚ್ಚು ರೌಡಿಗಳಿದ್ದಾರೆ. ಇವರು ಪದೇ ಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳಾಗಿದ್ದಾರೆ. ಜಾಮೀನಿನ ಮೇರೆಗೆ ವಾರಕ್ಕೆ ಐದಾರು ರೌಡಿಗಳು ಬಿಡುಗಡೆಯಾಗಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ಪೂರ್ವ ಸಿದ್ಧತೆ: ಬೆಂಗಳೂರು ದಕ್ಷಿಣ ಜಿಲ್ಲೆಯ ವಿವಿಧ ಭಾಗದಲ್ಲಿ ಡಿಕೆಶಿ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.