ETV Bharat / city

ಬೆಂಗಳೂರಿನಲ್ಲಿ ರೌಡಿಶೀಟರ್​ನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು!

ಬೆಂಗಳೂರಲ್ಲಿ ಹಾಡಹಗಲೇ ಕೊಲೆ ನಡೆದಿದೆ. ರೌಡಿಶೀಟರ್ ಅರವಿಂದ್ ಎಂಬಾತ​ನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ್ದಾರೆ.

Rowdy Sheeter murder in Bengaluru
ಸಿಲಿಕಾನ್​ ಸಿಟಿಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕಗ್ಗೊಲೆ
author img

By

Published : Sep 12, 2021, 6:43 PM IST

Updated : Sep 12, 2021, 9:51 PM IST

ಬೆಂಗಳೂರು: ಸ್ಥಳೀಯ ಫುಟ್ಬಾಲ್ ತಂಡವನ್ನು ನಿರ್ವಹಿಸುತ್ತಿದ್ದ ರೌಡಿ ಶೀಟರ್​​ನನ್ನು ನಗರದ ಕೆಎಸ್‌ಎಫ್‌ಎ ಫುಟ್ಬಾಲ್ ಮೈದಾನದಲ್ಲಿ ಅಟ್ಟಾಡಿಸಿ ಕೊಂದಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

27 ವರ್ಷದ ಅರವಿಂದ್ ಕೊಲೆಯಾದ ರೌಡಿ ಶೀಟರ್. ಸಂಜೆ 4 ಗಂಟೆಯ ಸುಮಾರಿಗೆ ಫುಟ್ಬಾಲ್ ಮೈದಾನದೊಳಗೆ 4 ರಿಂದ 5 ಜನರ ದುಷ್ಕರ್ಮಿಗಳ ಗುಂಪು ಬೆನ್ನಟ್ಟಿ ರೆಫರಿ ಕೋಣೆಯಲ್ಲಿ ಮರ್ಡರ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರೆಫರಿ ರೂಮ್​​ನಲ್ಲಿ ಮರ್ಡರ್:

ಉಪ ಪೊಲೀಸ್ ಆಯುಕ್ತ (ಕೇಂದ್ರ) ಅನುಚೇತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಫುಟ್ಬಾಲ್ ತಂಡವನ್ನು ನಿರ್ವಹಿಸುತ್ತಿದ್ದ ರೌಡಿ ಶೀಟರ್ ಅರವಿಂದ್ ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣದ ಎದುರಿನ ಬಿಬಿಎಂಪಿ ಮೈದಾನದಲ್ಲಿ ಪಂದ್ಯಾವಳಿಯಲ್ಲಿ ಆಡಲು ಬಂದಿದ್ದರು. ಸಂಜೆ 4 ಗಂಟೆ ಸುಮಾರಿಗೆ 4 ರಿಂದ 5 ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರಗಳನ್ನು ಹಿಡಿದು ಅರವಿಂದ್​​ನನ್ನು ಸುತ್ತು ವರೆದಿದ್ದಾರೆ. ನಂತರ ಆತ ಸ್ಥಳದಿಂದ ಪರಾರಿಯಾಗಿ ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣವನ್ನು ಪ್ರವೇಶಿಸಿ ರೆಫರಿಯ ಕೊಠಡಿಯೊಳಗೆ ಹೋಗಿ ಬೀಗ ಹಾಕಿಕೊಂಡಿದ್ದಾನೆ. ಆದರೂ ಬಿಡದ ಆರೋಪಿಗಳು, ಬಾಗಿಲು ಮುರಿದು ಮಾರಕ ಆಯುಧಗಳನ್ನು ಬಳಸಿ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಗುರುತಿಸಿ ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ. ಗ್ಯಾಂಗ್​​ಗಳ ಮಧ್ಯೆ ಇದ್ದ ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಅರವಿಂದ್ ರೌಡಿ ಶೀಟರ್ ಆಗಿದ್ದಾನೆ ಹಾಗೂ ಕೆಲ ದಿನಗಳ ಹಿಂದೆಯಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಮಾಹಿತಿ ನೀಡಿದರು.

ಅರವಿಂದ್​​ನನ್ನು ಮೈದಾನದಲ್ಲಿ ಅಟ್ಟಿಸಿಕೊಂಡು ಹೋಗುವುದನ್ನು ನೋಡಿ ಆಟಗಾರರು ಮತ್ತು ಪ್ರೇಕ್ಷಕರು ಆಘಾತಕ್ಕೆ ಒಳಗಿದ್ದಾರೆ. ಈ ಸಮಯದಲ್ಲಿರಾಜ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿಯೇ ವಿಭಾಗೀಯ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯದ ಆರಂಭಕ್ಕೂ ಕೆಲವೇ ನಿಮಿಷದ ಮೊದಲು ಕೊಲೆ ನಡೆದಿದೆ ಎಂದು ಅನುಚೇತ್ ತಿಳಿಸಿದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಲಾರಿ- ಜೀಪ್ ನಡುವೆ ಭೀಕರ ಅಪಘಾತ, 7 ಸಾವು, ಐವರು ಗಂಭೀರ

Last Updated : Sep 12, 2021, 9:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.