ETV Bharat / city

ಸಿಎಂ ಜೊತೆ ರಾಕಿಂಗ್ ಸ್ಟಾರ್ ಪ್ರವಾಸ: ಹೆಲಿಕ್ಯಾಪ್ಟರ್​ನಲ್ಲಿ ಒಟ್ಟಿಗೆ ಮೈಸೂರಿಗೆ ತೆರಳಿದ ಬೊಮ್ಮಾಯಿ‌ ಯಶ್..! - ಮೈಸೂರು ಮಹಾರಾಜ ಕಾಲೇಜು

ಮೈಸೂರು ಮಹಾರಾಜ ಕಾಲೇಜು ಕಾರ್ಯಕ್ರಮದಲ್ಲಿ ಸಿಎಂ ಜೊತೆ ನಟ ಯಶ್ ಕೂಡ ಭಾಗಿಯಾಗಲಿದ್ದು, ಸಿಎಂ ಜೊತೆ ಒಟ್ಟಿಗೆ ಒಂದೇ ಹೆಲಿಕಾಪ್ಟರ್​ನಲ್ಲಿ ಮೈಸೂರಿಗೆ ತೆರಳಿದ್ದಾರೆ.

Rocking Star tour with CM
ಸಿಎಂ ಜೊತೆ ರಾಕಿಂಗ್ ಸ್ಟಾರ್ ಪ್ರವಾಸ
author img

By

Published : Aug 11, 2022, 12:07 PM IST

Updated : Aug 11, 2022, 12:31 PM IST

ಬೆಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮೈಸೂರಿಗೆ ತೆರಳಿದ್ದು, ಸಿಎಂ ಜೊತೆ ರಾಕಿಂಗ್ ಸ್ಟಾರ್ ಯಶ್ ಕೂಡ ಹೆಲಿಕ್ಯಾಪ್ಟರ್​ನಲ್ಲಿ ಪ್ರಯಾಣಿಸಿದ್ದಾರೆ. ಮೈಸೂರಿನಲ್ಲಿ ಮಹಾರಾಜ ಕಾಲೇಜು ಕಾರ್ಯಕ್ರಮದಲ್ಲಿ ಸಿಎಂ ಜೊತೆ ನಟ ಯಶ್ ಕೂಡ ಭಾಗಿಯಾಗಲಿದ್ದು, ಸಿಎಂ ಜೊತೆ ಒಟ್ಟಿಗೆ ಮೈಸೂರಿಗೆ ತೆರಳಿದರು. ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶ್, ಸಿಎಂ ಬೊಮ್ಮಾಯಿ‌ ಜೊತೆ ಒಂದೇ ಹೆಲಿಕ್ಯಾಪ್ಟರ್​ನಲ್ಲೇ ಪ್ರಯಾಣಿಸಿದರು.

ಕೊವೀಡ್​ನಿಂದ ಗುಣಮುಖರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಸಚಿವ ಅಶ್ವತ್ಥ ನಾರಾಯಣ್ ಭೇಟಿ ಮಾಡಿದರು. ಆರ್.ಟಿ. ನಗರದ ನಿವಾಸದಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ನಂತರ ಸಿಎಂ ಜೊತೆಯಲ್ಲೇ ಮೈಸೂರು ಮಂಡ್ಯ ಪ್ರವಾಸಕ್ಕೆ ತೆರಳಲು ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತೆರಳಿದರು.

ಸಿಎಂ ಜೊತೆ ರಾಕಿಂಗ್ ಸ್ಟಾರ್ ಪ್ರವಾಸ

ಸಿಎಂ ಪ್ರವಾಸದ ವಿವರ: ಕೋವಿಡ್​ನಿಂದ ಗುಣಮುಖರಾಗುತ್ತಿದ್ದಂತೆ ತಮ್ಮ ಎಂದಿನ ಕೆಲಸ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇಂದು ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಮತ್ತು ಪೂರ್ಣಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಲು ಮೈಸೂರು, ಮಂಡ್ಯ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಹೆಲಿಕಾಪ್ಟರ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಮೈಸೂರಿಗೆ ತೆರಳಲಿದ್ದು, ಅಲ್ಲಿ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿರುವ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ನಿಮಿತ್ತ ಯುವಜನ ಮಹೋತ್ಸವ ಹಾಗೂ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ. ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ ರಸ್ತೆ ಮೂಲಕ ಮೈಸೂರಿನಿಂದ ಮಂಡ್ಯ ಜಿಲ್ಲೆಗೆ ತೆರಳಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡ್ಯ ವಿಶ್ವವಿದ್ಯಾಲಯ ಮತ್ತು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿರುವ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ- ಸಂಜೀವಿನಿ ಸಂಸ್ಥೆಯ ಜೀವನೋಪಾಯ ವರ್ಷಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತದನಂತರ ಮದ್ದೂರು ತಾಲೂಕಿನ ಭಾರತಿ ನಗರದಲ್ಲಿರುವ ಭಾರತಿ ಎಜುಕೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಭಾರತಿ ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ರಸ್ತೆ ಮೂಲಕ ಮುಖ್ಯಮಂತ್ರಿಗಳು ಬೆಂಗಳೂರು ನಗರಕ್ಕೆ ವಾಪಸಾಗಲಿದ್ದಾರೆ.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಆಗಮನ: ಮಂಡ್ಯ ವಿವಿಯ ಆವರಣಗೋಡೆ ಕೆಡವಿದ ಜಿಲ್ಲಾಡಳಿತ

Last Updated : Aug 11, 2022, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.