ETV Bharat / city

ಪಿಕಪ್, ಡ್ರಾಪ್ ಮಾಡುವ ನೆಪದಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್​​ - Bangalore crime news

ಪಿಕ್ ಅಪ್ ಆ್ಯಂಡ್​​ ಡ್ರಾಪ್ ನೆಪದಲ್ಲಿ ದರೋಡೆ ಮಾಡುತ್ತಿದ್ದ ಬಾಲಾಪರಾಧಿ ಸೇರಿ ನಾಲ್ವರು ಆರೋಪಿಗಳ‌ನ್ನ ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

Gang arrest, who was robbing
author img

By

Published : Nov 11, 2019, 9:20 PM IST

ಬೆಂಗಳೂರು: ಪಿಕ್ ಅಪ್ ಆ್ಯಂಡ್​​ ಡ್ರಾಪ್ ನೆಪದಲ್ಲಿ ದರೋಡೆ ಮಾಡುತ್ತಿದ್ದ ಬಾಲಾಪರಾಧಿ ಸೇರಿ ನಾಲ್ವರು ಆರೋಪಿಗಳ‌ನ್ನ ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರು ಚಾಲಕರಾದ ಸಂದೀಪ್, ಅನುಕುಮಾರ್,ಮನುಕುಮಾರ್, ಒಬ್ಬ ಬಾಲಾಪರಾಧಿ ಬಂಧಿತರು. ನವೆಂಬರ್​ 4ರಂದು ನಾಗರಬಾವಿಯ ಗಂಗಾಧರಯ್ಯ ಅವರನ್ನು ಗೊರಗುಂಟೆಪಾಳ್ಯದಲ್ಲಿ ಹತ್ತಿಸಿಕೊಂಡು ನಗರಾದ್ಯಂತ ಸುತ್ತಾಡಿಸಿ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್, ಉಂಗುರ, ಎಟಿಎಂ ಕಾರ್ಡ್​, ನಗದು ₹ 500 ಕಸಿದುಕೊಂಡು ಪರಾರಿಯಾಗಿದ್ದರು.

ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್​​

ಗ್ಯಾಂಗ್​ ತಮ್ಮ ಟಿಟಿ ವಾಹನದಲ್ಲಿ ನಾಗರಬಾವಿ, ಹೊಸಕೆರೆಹಳ್ಳಿ, ಆರ್.ಆರ್.ನಗರ ಸುತ್ತಾಡಿಸಿ ಹಲ್ಲೆ ಮಾಡಿ ಆರ್.ಆರ್.ನಗರದ ದ್ವಾರದ ಗಾಡಿಯಿಂದ ತಳ್ಳಿದರು. ಗಂಭೀರ ಗಾಯದಿಂದ ಗಂಗಾಧರಯ್ಯ ಸ್ಥಳೀಯರ ನೆರವಿನೊಂದಿಗೆ ಮನೆ ಸೇರಿದ್ದರು. ದರೋಡೆ ಬಗ್ಗೆ ಆರ್​ಆರ್​​ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

ಕಾರ್ಯ ಪ್ರವೃತ್ತರಾದ ರಾಜರಾಜೇಶ್ವರಿ ನಗರ ಇನ್​​ಸ್ಪೆಕ್ಟರ್ ನವೀನ್ ಮತ್ತು ತಂಡ ಹಣ ಡ್ರಾ ಮಾಡಿದ್ದ ಎಟಿಎಂ ಸಿಸಿ.ಟಿ.ವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧಾರದ ಮೇಲೆ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ. ದರೋಡೆ ಮಾಡಿದ್ದ ವಸ್ತುಗಳನ್ನು ಮಾಲೀಕ‌ ಗಂಗಾಧರಯ್ಯ ಅವರಿಗೆ ತಲುಪಿಸಿದ್ದಾರೆ

Intro:Body:ಪಿಕಪ್ ಅಂಡ್ ಡ್ರಾಪ್ ಮಾಡುವ ನೆಪದಲ್ಲಿ ರಾಬರಿ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಪಿಕ್ ಅಪ್ ಆಂಡ್ ಡ್ರಾಪ್ ಮಾಡುವ ನೆಪದಲ್ಲಿ ರಾಬರಿ ಮಾಡುತ್ತಿದ್ದ ಒಬ್ಬ ಬಾಲಾಪರಾಧಿ ಸೇರಿ ನಾಲ್ಕು ಜನ ಆರೋಪಿಗಳ‌ನ್ನ ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.. ಕಾರು ಚಾಲಕರಾದ‌ ಸಂದೀಪ್, ಅನುಕುಮಾರ್,ಮನುಕುಮಾರ್ ಮತ್ತೊಬ್ಬ ಬಾಲಾಪರಾಧಿ ಬಂಧಿತ ಆರೋಪಿಗಳು. ನ.4ರಂದು ನಾಗರಬಾವಿಯ ಗಂಗಾಧರಯ್ಯನನ್ನು ಗೊರಗುಂಟೆಪಾಳ್ಯದಲ್ಲಿ ಹತ್ತಿಸಿಕೊಂಡು ತಮ್ಮ ಟಿಟಿ ವಾಹನದಲ್ಲಿ ನಾಗರಬಾವಿ, ಹೊಸಕೆರೆಹಳ್ಳಿ, ಆರ್.ಆರ್.ನಗರ ಸುತ್ತಾಡಿಸಿ, ಮೊಬೈಲ್, ಉಂಗುರ, ಎಟಿಎಂ 500 ದುಡ್ಡು ಕಸಿದು, ಚೆನ್ನಾಗಿ ಹಲ್ಲೆ ನಡೆಸಿ ಆರ್.ಆರ್.ನಗರದ ಆರ್ಚ್ ಬಳಿ ಕಾರಿನಿಂದ ತಳ್ಳಿ ಎಸ್ಕೇಪ್ ಆಗಿದ್ದರು.. ಗಂಭೀರ ಗಾಯಗಳೊಂದಿಗೆ ಜನರ ನೆರವು ಪಡೆದು ಮನೆ ಸೇರಿದ್ದರು. ಮನೆಯವರ ಒತ್ತಾಯದ ಮೇರೆಗೆ ದರೋಡೆ ಬಗ್ಗೆ ಆರ್ ಆರ್ ನಗರ ಪೊಲೀಸ್ ಠಾಣೆಲಿ ಪ್ರಕರಣ ದಾಖಲಿಸಿದರು.. ಕಾರ್ಯಪ್ರವೃತ್ತರಾದ ರಾಜರಾಜೇಶ್ವರಿ ನಗರ ಇನ್ ಸ್ಪೆಕ್ಟರ್ ನವೀನ್ ಮತ್ತವರ ತಂಡ ಹಣ ಡ್ರಾ ಮಾಡಿದ್ದ ಎಟಿಎಂ ಸಿಸಿಟಿವಿ ಪುಟೇಜ್ ಆಧಾರದ ಮೇಲೆ ನಾಲ್ಕು ಜನ‌ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಸದ್ಯ ನಾಲ್ವರು ಆರೋಪಿಗಳನ್ನ ಬಂಧಿಸಿರುವ ರಾಜರಾಜೇಶ್ವರಿ ನಗರ ಪೊಲೀಸರು ದರೋಡೆ ಮಾಡಿದ್ದ ವಸ್ತುಗಳನ್ನು ಮಾಲೀಕ‌ ಗಂಗಾಧರಯ್ಯನವರಿಗೆ ತಲುಪಿಸಿ ಆರೋಪಿಗಳ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ..
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.