ಬೆಂಗಳೂರು: ಶೋಕಿ ಜೀವನಕ್ಕಾಗಿ ಮನೆಗಳ್ಳತನ ಜೊತೆ ಬೈಕ್ ಕಳ್ಳತನ ಮಾಡುತ್ತಿದ್ದ ಐವರನ್ನು ಜಗಜೀವನ್ ರಾಮ್ ನಗರ ಪೊಲೀಸರು ಬಂಧಿಸಿದ್ದಾರೆ.
ಅರ್ಬಾಸ್, ಸೈಯದ್, ಮಹಮದ್ ಝೈನ್, ಮುಬಾರಕ್, ವರುಣ್ ಹಾಗೂ ಶಬಾಸ್ ಎಂಬುವರನ್ನು ಬಂಧಿಸಿ 19 ಪ್ರಕರಣಗಳಿಗೆ ಸಂಬಂಧಿಸಿದ 18 ಬೈಕ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಜೆ.ಜೆ.ನಗರ ವ್ಯಾಪ್ತಿಯಲ್ಲಿ ನ.25 ರಂದು ಮನೆಯೊಂದಕ್ಕೆ ಇಬ್ಬರು ಕಿರಾತಕರು ನುಗ್ಗಿ ಚಿನ್ನಾಭರಣ ದೋಚಿದ್ದರು. ಸಿಸಿಟಿವಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳ ಚಹರೆ ಕೂಡ ಸಿಕ್ಕಿತ್ತು. ಆರೋಪಿಗಳ ಬೆನ್ನುಬಿದ್ದ ಜೆಜೆನಗರ ಪೊಲೀಸರಿಗೆ ಮೊದಲು ಅರ್ಬಾಸ್ ಮತ್ತು ಸೈಯದ್ ಸಿಕ್ಕಿದ್ದಾರೆ. ಇವರು ಕೊಟ್ಟ ಲೀಡ್ ಹಿಡಿದುಕೊಂಡು ಪರಿಶೀಲಿಸಿದಾಗ ಇವರ ಗ್ಯಾಂಗ್ನಲ್ಲಿದ್ದ ಇನ್ನಿತರರನ್ನು ಬಂಧಿಸಲಾಗಿದೆ.
ಮನೆಗಳ್ಳತನ ಮಾತ್ರವಲ್ಲದೇ ಶೋಕಿಯಾಗಿ ತಿರುಗಾಡುವುದಕ್ಕೆ ಬೈಕ್ಗಳನ್ನು ಕದಿಯುತ್ತಿದ್ದ ಗ್ಯಾಂಗ್ ಇದು. ಕದ್ದ ಬೈಕ್ಗಳನ್ನು ರೋಡ್ ರೋಡ್ ಸುತ್ತಲು, ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡಲು ಬಳಸುತ್ತಿದ್ದರು. ತಾವು ವ್ಹೀಲಿಂಗ್ ಮಾಡಿದ ದೃಶ್ಯವನ್ನುಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದರು.
ಇದೀಗ ಕಳ್ಳತನ ಕೇಸ್ನಲ್ಲಿ ಸಿಕ್ಕಿಬಿದ್ದ ಖದೀಮರು ಬೈಕ್ ಕದ್ದು ಮಾರಾಟ ಮಾಡುವ ಜೊತೆಗೆ ವ್ಹೀಲಿಂಗ್ ಮಾಡುತ್ತ ಶೋಕಿ ಜೀವನ ನಡೆಸುತ್ತಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಜೆ.ಜೆ.ನಗರ ಪೊಲೀಸರು ಕಳ್ಳತನ ಕೇಸ್ನಲ್ಲಿ 6 ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
(ಇದನ್ನೂ ಓದಿ: ಪಾರ್ಕ್ನಲ್ಲಿ ಲವರ್ಸ್ ಆತ್ಮಹತ್ಯೆ.. ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ..)