ETV Bharat / city

ಅಡ್ರೆಸ್ ಕೇಳುವ ನೆಪದಲ್ಲಿ ವೃದ್ದೆಯ ಸರಗಳ್ಳತನಕ್ಕೆ 3 ಬಾರಿ ವಿಫಲ ಯತ್ನ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ - ಯಲಹಂಕ

ಅಡ್ರೆಸ್ ಕೇಳುವ ನೆಪದಲ್ಲಿ ವೃದ್ಧೆಯ ಸರಗಳ್ಳತನಕ್ಕೆ ಯತ್ನ ನಡೆದಿದೆ. ಯಲಹಂಕದ ಜಕ್ಕೂರು ರಸ್ತೆ ಸುರಭಿ ಲೇಔಟ್​​ನಲ್ಲಿ ಈ ಘಟನೆ ನಡೆದಿದ್ದು, ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

cctv footage
ಸಿಸಿಟಿವಿ ದೃಶ್ಯ
author img

By

Published : Sep 23, 2021, 5:29 PM IST

ಯಲಹಂಕ/ಬೆಂಗಳೂರು: ವಾಕಿಂಗ್ ಮಾಡುತ್ತಿದ್ದ ವೃದ್ಧೆಯರನ್ನ ಅಡ್ಡಗಟ್ಟಿದ ಬೈಕ್ ಸವಾರರು ಅಡ್ರೆಸ್ ಕೇಳುವ ನೆಪದಲ್ಲಿ ವೃದ್ಧೆಯ ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಮೂರು ಬಾರಿ ಯತ್ನಿಸಿದರೂ ಚಿನ್ನದ ಸರ ಸಿಗದಿದ್ದಾಗ ಸರಗಳ್ಳರು ಪರಾರಿಯಾಗಿದ್ದಾರೆ. ವಿಫಲ ಸರಗಳ್ಳತನ ಯತ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೃದ್ದೆಯ ಸರಗಳ್ಳತನಕ್ಕೆ 3 ಬಾರಿ ವಿಫಲ ಯತ್ನ..ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಯಲಹಂಕದ ಜಕ್ಕೂರು‌ ರಸ್ತೆ ಸುರಭಿ ಲೇಔಟ್​​ನ ವಿಜಯಾ ಬಾರ್ ಹಿಂಭಾಗದ ಅಪಾರ್ಟ್ಮೆಂಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸೆ. 21ರ ಸೋಮವಾರದಂದು ಇಬ್ಬರು ವೃದ್ಧೆಯರು ವಾಕಿಂಗ್ ಹೋಗುತ್ತಿದ್ದ ವೇಳೆ ಬೈಕ್​​ನಲ್ಲಿ ಇಬ್ಬರು ಹಿಂಬಾಲಿಸಿ ಕೊಂಡು ಬಂದಿದ್ದಾರೆ.

ಅಡ್ರೆಸ್ ಕೇಳುವ ನೆಪದಲ್ಲಿ ವೃದ್ದೆಯನ್ನ ಅಡ್ಡಗಟ್ಟಿ ಕೊರಳಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾರೆ. ಈ ವೇಳೆ ವೃದ್ದೆ ಕೆಳಗೆ ಬಿದ್ದಿದ್ದಾರೆ. ಎರಡು ಸಲ ಕತ್ತಿಗೆ ಕೈ ಹಾಕಿ ಸರ ಕದಿಯಲು ಯತ್ನಿಸಿದ್ದಾನೆ. ಸರಗಳ್ಳನ ಮೂರನೇ ಯತ್ನವೂ ವಿಫಲವಾಗಿದೆ. ಕೊನೆಗೆ ಯಾರಾದರೂ ಜನರಿಗೆ ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.

ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.