ETV Bharat / city

ಆಪ್ತರ ಮುಂದೆ ಗಳಗಳನೇ ಅತ್ತ ಕೈ ಅಭ್ಯರ್ಥಿ: ರಿಜ್ವಾನ್ ಕಣ್ಣೀರಿಗೆ ಕಾರಣ?! - ಕಣ್ಣೀರು ಹಾಕಿದ ರಿಜ್ವಾನ್ ಅರ್ಷದ್

ಶಿವಾಜಿನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಂಗಳವಾರ ರಾತ್ರಿ ಗಳಗಳನೇ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

ಆಪ್ತರ ಮುಂದೆ ಅತ್ತ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್
ಆಪ್ತರ ಮುಂದೆ ಅತ್ತ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್
author img

By

Published : Dec 4, 2019, 12:51 PM IST

ಬೆಂಗಳೂರು: ಶಿವಾಜಿನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಿನ್ನೆ ರಾತ್ರಿ ಗಳಗಳನೇ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

ಆಪ್ತರ ಮುಂದೆ ಅತ್ತ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್

ಉಪಚುನಾವಣೆಯಲ್ಲಿ ಪಕ್ಷದ ನಾಯಕರು ಪ್ರಚಾರಕ್ಕೆ ಬರದೇ ಕೈಕೊಟ್ಟ ಕಾರಣದಿಂದ ಕಂಗೆಟ್ಟಿರುವ ರಿಜ್ವಾನ್ ಅರ್ಷದ್​ಗೆ ಈ ಇನ್ನೊಂದು ಆಘಾತ ಉಂಟಾಗಿದೆ. ಸಂಪಂಗಿ ರಾಮನಗರ ವಾರ್ಡ್ ಬಿಬಿಎಂಪಿ ಸದಸ್ಯ ಸಂಪತ್​ಕುಮಾರ್ ಕಾಂಗ್ರೆಸ್ ಬಿಟ್ಟು ಮಂಗಳವಾರ ಬಿಜೆಪಿ ಸೇರಿದ್ದಾರೆ. ನಿನ್ನೆ ಮೊನ್ನೆಯವರೆಗೂ ರಿಜ್ವಾನ್ ಜತೆಯಲ್ಲೇ ಇದ್ದು, ಚುನಾವಣೆ ಪ್ರಚಾರಕ್ಕೆ ಅಗತ್ಯಬೀಳುತ್ತದೆ ಎಂದು ಸಾಕಷ್ಟು ಹಣವನ್ನೂ ಪಡೆದು ಸಂಪತ್​ಕುಮಾರ್ ಕೈಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಸೇರಿದ ಬಿಬಿಎಂಪಿ ಸದಸ್ಯ ಸಂಪತ್​ಕುಮಾರ್
ಬಿಜೆಪಿ ಸೇರಿದ ಬಿಬಿಎಂಪಿ ಸದಸ್ಯ ಸಂಪತ್​ಕುಮಾರ್

ಆಪ್ತನಂತೆ ಜತೆಯಲ್ಲಿದ್ದು, ಕೈಕೊಟ್ಟಿದ್ದರಿಂದ ಆಘಾತಕ್ಕೊಳಗಾಗಿರುವ ರಿಜ್ವಾನ್ ತಮ್ಮ ಆಪ್ತರ ಸಮ್ಮುಖದಲ್ಲಿ ನಿನ್ನೆ ಸಂಜೆ ಗಳಗಳನೇ ಅತ್ತಿದ್ದಾರೆ ಎನ್ನಲಾಗ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಸೇರಿದ್ದೇನೆ ಎಂದು ಸಂಪತ್​​ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಉಪಚುನಾವಣೆ ಮತದಾನಕ್ಕೆ ಎರಡು ದಿನ ಮುನ್ನ ಈ ರೀತಿ ಆಪ್ತನಂತೆ ಗುರುತಿಸಿಕೊಂಡಿದ್ದ ಕಾರ್ಪೊರೇಟರ್ ಕೈಕೊಟ್ಟಿದ್ದು ರಿಜ್ವಾನ್​ಗೆ ಗರ ಬಡಿದಂತಾಗಿದೆ.

ಕಡೆಯ ಕ್ಷಣದಲ್ಲಿ ನಂಬಿದವರು ಕೈಕೊಟ್ಟಿರುವುದು ರಿಜ್ವಾನ್​ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹಾಗಾಗಿ ಇದು ಈಗ ಕಣ್ಣೀರಿನ ರೂಪದಲ್ಲಿ ಆಚೆ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Intro:newsBody:ಆಪ್ತರ ಮುಂದೆ ರಿಜ್ವಾನ್ ಅರ್ಷದ್ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ?!

ಬೆಂಗಳೂರು: ಶಿವಾಜಿನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಿನ್ನೆ ರಾತ್ರಿ ಗಳಗಳನೆ ಅತ್ತಿದ್ದಾರೆ.
ಉಪಚುನಾವಣೆಯಲ್ಲಿ ಪಕ್ಷದ ನಾಯಕರು ಪ್ರಚಾರಕ್ಕೆ ಬರದೇ ಕೈಕೊಟ್ಟ ಕಾರಣದಿಂದ ಕಂಗೆಟ್ಟಿರುವ ರಿಜ್ವಾನ್ ಅರ್ಷದ್ಗೆ ಇನ್ನೆ ಇನ್ನೊಂದು ಆಘಾತ ಎದುರಾಗಿದೆ. ಸಂಪಂಗಿರಾಮನಗರ ವಾರ್ಡ್ ಬಿಬಿಎಂಪಿ ಸದಸ್ಯ ಸಂಪತ್ಕುಮಾರ್ ಕಾಂಗ್ರೆಸ್ ಬಿಟ್ಟು ನಿನ್ನೆ ಬಿಜೆಪಿ ಸೇರಿದ್ದಾರೆ. ಇದು ದೊಡ್ಡ ಆಘಾತವಾಗಿರುವ ಜತೆಗೆ, ನಿನ್ನೆ ಮೊನ್ನೆಯವರೆಗೂ ರಿಜ್ವಾನ್ ಜತೆಯಲ್ಲೇ ಇದ್ದು, ಚುನಾವಣೆ ಪ್ರಚಾರಕ್ಕೆ ಅಗತ್ಯಬೀಳುತ್ತದೆ ಎಂದು ಸಾಕಷ್ಟು ಹಣವನ್ನೂ ಪಡೆದು ಕೈಕೊಟ್ಟಿದ್ದಾಗಿ ಆರೋಪ ಕೇಳಿಬಂದಿದೆ.
ಆಪ್ತನಂತೆ ಜತೆಯಲ್ಲಿದ್ದು, ಕೈಕೊಟ್ಟಿದ್ದರಿಂದ ಆಘಾತಕ್ಕೊಳಗಾದ ರಿಜ್ವಾನ್ ಆಪ್ತರ ಸಮ್ಮುಖದಲ್ಲಿ ನಿನ್ನೆ ಸಂಜೆ ಗಳಗಳ ಅತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಸೇರಿದ್ದೇನೆ ಎಂದು ಸಂಪತ್ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಉಪಚುನಾವಣೆ ಮತದಾನಕ್ಕೆ ಎರಡು ದಿನ ಮುನ್ನ ಈ ರೀತಿ ಆಪ್ತನಂತೆ ಗುರುತಿಸಿಕೊಂಡಿದ್ದ ಕಾರ್ಪೋರೇಟರ್ ಕೈಕೊಟ್ಟಿದ್ದು ರಿಜ್ವಾನ್ಗೆ ಆಘಾತ ತಂದಿದೆ.
ಕೋಟಿ ಕೋಟಿ ಆಫರ್
ಸಂಪತ್ಕುಮಾರ್ ಅವರನ್ನು ಬಿಜೆಪಿ ತಮ್ಮತ್ತ ಸೆಳೆಯಲು ಕೋಟಿ ಕೋಟಿ ಆಫರ್ ನೀಡಿದೆ. ಚುನಾವಣೆ ಮತದಾನದ ಹೊಸ್ತಿಲಲ್ಲಿ ಒಂದಿಷ್ಟು ಹಣವನ್ನು ರಿಜ್ವಾನ್ರಿಂದಲೂ ಪಡೆದು ಸಂಪತ್ಕುಮಾರ್ ಕೈಕೊಟ್ಟಿದ್ದಾರೆ.
ಈಗಾಗಲೇ ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಅನರ್ಹ ಶಾಸಕ ರೋಷನ್ ಬೇಗ್ ಪರ ಇದ್ದ ಇಬ್ಬರು ಬಿಬಿಎಂಪಿ ಸದಸ್ಯರು ವಾರದ ಹಿನ್ನೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಬೆಂಬಲಿಸಿ ಉಚ್ಛಾಟಿತರಾಗಿದ್ದಾರೆ. ನಿನ್ನೆ ಸಂಪತ್ಕುಮಾರ್ ಏಕಾಏಕಿ ಆಘಾತ ಕೊಟ್ಟಿದ್ದಾರೆ. ಕಡೆಯ ಕ್ಷಣದಲ್ಲಿ ನಂಬಿದವರು ಕೈಕೊಟ್ಟಿರುವುದು ರಿಜ್ವಾನ್ಗೆ ನುಂಗನಾಗದ ಬಿಸಿತುಪ್ಪವಾಗಿದೆ.
ಒಂದೆಡೆ ಕಾಂಗ್ರೆಸ್ ನಾಯಕರ ಕಾಟಾಚಾರದ ಪ್ರಚಾರ, ಆಪ್ತರು ಕೈಕೊಟ್ಟಿರುವುದು, ಐಎಂಎ ಹಗರಣದಲ್ಲಿ ಹೆಸರು ತಳುಕುಹಾಕಿಕೊಂಡಿರುವುದು, ಮನಸ್ಸಿಲ್ಲದಿದ್ದರೂ ಪಕ್ಷ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು ಎಲ್ಲವೂ ರಿಜ್ವಾನ್ಗೆ ಮುಳುವಾಗಿ ಕಾಡುತ್ತಲೇ ಬಂದಿದೆ. ಇದು ಈಗ ಕಣ್ಣೀರಿನ ರೂಪದಲ್ಲಿ ಆಚೆ ಬಂದಿದೆ ಎಂಬ ಮಾತು ಕೇಳಿಬರುತ್ತಿದೆ.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.