ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಹೈಕೋರ್ಟ್ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.
ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ನೋಟಿಫಿಕೇಷನ್ ಹೊರಡಿಸಿದ್ದು, ಪರಿಷ್ಕೃತ ಮಾರ್ಗಸೂಚಿಗಳು ಮೇ.22ರರವೆಗೆ ಅನ್ವಯಿಸಲಿವೆ.
- ಕೇಸುಗಳನ್ನು ಇ-ಫೈಲಿಂಗ್ ಮೂಲಕವೇ ದಾಖಲಿಸಬೇಕು. ಸಿಐಎಸ್ ಸಾಫ್ಟ್ವೇರ್ ಅಥವಾ ಸ್ಕ್ಯಾನ್ ಕಾಪಿಗಳನ್ನು ಇ-ಮೇಲ್ ಮೂಲಕ ನಿರ್ದಿಷ್ಟ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
- ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಜಾಮೀನು ಅರ್ಜಿಗಳು, ತುರ್ತು ಪ್ರಕರಣಗಳನ್ನಷ್ಟೇ ಪರಿಗಣಿಸಿ. ಅವುಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬೇಕು.
- ಹೈಕೋರ್ಟ್ನ ಮುಂದಿನ ಆದೇಶದವರೆಗೆ ಭೌತಿಕ ಕಲಾಪಗಳನ್ನು ನಡೆಸುವಂತಿಲ್ಲ.
- ಸಿಆರ್ಪಿಸಿ ಸೆಕ್ಷನ್ 164ರ ಅಡಿ ದಾಖಲಿಸುವ ಹೇಳಿಕೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ದಾಖಲಿಸಿಕೊಳ್ಳಬೇಕು.
- ಸಾಕ್ಷ್ಯಗಳನ್ನು ದಾಖಲಿಸುವ ಮತ್ತು ಅಂತಿಮ ವಿಚಾರಣೆ ನಡೆಸಬೇಕಿರುವ ಪ್ರಕರಣಗಳನ್ನು ತಾತ್ಕಾಲಿಕವಾಗಿ ಮುಂದೂಡುವುದು.
- ಪ್ರಮಾಣೀಕೃತ ಪ್ರತಿಗಳು (certified copies)ಸ್ಥಳೀಯವಾಗಿ ಲಭ್ಯವಾಗುವಂತೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಸೆಷನ್ಸ್ ನ್ಯಾಯಾಧೀಶರು, ಮುಖ್ಯ ನ್ಯಾಯಾಧೀಶರು ಕ್ರಮ ಕೈಗೊಳ್ಳಬೇಕು.
- ಕೋರ್ಟ್ ಆವರಣಗಳಲ್ಲಿ ಇರುವ ಕ್ಯಾಂಟೀನ್ ಹಾಗೂ ಇತರ ಮಳಿಗೆಗಳನ್ನು ಮುಂದಿನ ಆದೇಶವರೆಗೆ ತೆರೆಯುವಂತಿಲ್ಲ.
- ಟೈಪಿಸ್ಟ್ಗಳು, ಜೆರಾಕ್ಸ್ ಆಪರೇಟರ್ಗಳು ಹಾಗೂ ನೋಟರಿಯವರಿಗೆ ಕೋರ್ಟ್ ಪ್ರವೇಶ ನಿರ್ಬಂಧ. ವಕೀಲರು ಪ್ರಕರಣ ದಾಖಲಿಸಲು ಬಳಸಬೇಕಿರುವ ಜಿಲ್ಲಾವಾರು ಇ-ಮೇಲ್ ವಿಳಾಸ