ETV Bharat / city

ಚುನಾವಣೆ ನಂತರ ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ಮರುನಾಮಕರಣ: ಬಿಎಸ್​ವೈ - ಬೆಂಗಳೂರು ಕನಕ ವೃತ್ತ ವಿವಾದ

ಉಪ ಚುನಾವಣೆ ಮುಗಿಯುತ್ತಿದ್ದಂತೆ ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲಾಗುತ್ತದೆ. ಹಾಗಾಗಿ ಕನಕ ವೃತ್ತದ ಬಗ್ಗೆ ಇದ್ದ ವಿವಾದಕ್ಕೆ ತೆರೆ ಎಳೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬಿಎಸ್​ವೈ
author img

By

Published : Nov 20, 2019, 9:11 PM IST

ಬೆಂಗಳೂರು: ಉಪ ಚುನಾವಣೆ ಮುಗಿಯುತ್ತಿದ್ದಂತೆ ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲಾಗುತ್ತದೆ. ಹಾಗಾಗಿ ಕನಕ ವೃತ್ತದ ಬಗ್ಗೆ ಇದ್ದ ವಿವಾದಕ್ಕೆ ತೆರೆ ಎಳೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

BS Yediyurappa
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರಿಕಾ ಪ್ರಕಟನೆ

ಹುಳಿಯಾರು - ಹೊಸದುರ್ಗ ರಸ್ತೆ ಮೇಲೆ ಇರುವ ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಎದ್ದಿರುವ ಗೊಂದಲ ಅನವಶ್ಯಕವಾಗಿದೆ. ವೃತ್ತಕ್ಕೆ ಕನಕದಾಸರ ಹೆಸರಿಡಲು ಯಾವ ಅಭ್ಯಂತರ ಮತ್ತು ವಿರೋಧ ಇಲ್ಲ. ಸಚಿವ ಮಾಧುಸ್ವಾಮಿ ಕೂಡ ಯಾವುದೇ ವಿರೋಧ ಮಾಡಿಲ್ಲ. ನಾನು ಇಂದು ಬೆಳಗ್ಗೆ ಮಧುಸ್ವಾಮಿಯವರ ಮಾತಿನ ಬಗ್ಗೆ ಇದ್ದ ಗೊಂದಲಕ್ಕೆ ಕ್ಷಮೆ ಕೇಳಿದ್ದೇನೆ. ಈಗ ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿಗಳು ಕೂಡ ಮಾಧುಸ್ವಾಮಿಯವರು ಏಕವಚನದಲ್ಲಿ ಸಂಭೋದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ವಿವಾದವನ್ನು ಮುಂದುವರೆಸದಂತೆ ಪತ್ರಿಕಾ ಹೇಳಿಕೆ ಮೂಲಕ ಸಿಎಂ ಮನವಿ ಮಾಡಿದ್ದಾರೆ.

ಯಾರು ಉದ್ವೇಗಕ್ಕೆ ಒಳಗಾಗದಿರಿ, ಶಾಂತಿ ಕಾಪಾಡಬೇಕು, ಯಾವುದೇ ಪ್ರತಿಭಟನೆ ಮತ್ತು ಬಂದ್ ಆಚರಿಸಬಾರದು. ಮುಂದಿನ ದಿನಗಳಲ್ಲಿ ಚುನಾವಣೆ ಮುಗಿದ ನಂತರ ಸರ್ಕಾರದ ವತಿಯಿಂದ ವೃತ್ತ ನಿರ್ಮಾಣ ಮಾಡಿ, ಕನಕದಾಸರ ವೃತ್ತ ಎಂದು ನಾಮಕರಣ ಮಾಡುತ್ತೇನೆ ಎಂದು ಹುಳಿಯಾರು ಮತ್ತು ಬೇರೆ ಕಡೆ ಇರುವ ಕುರುಬ ಸಮುದಾಯದ ಜನರಿಗೆ ಮತ್ತು ಕನಕದಾಸರ ಭಕ್ತರಿಗೆ ಸಿಎಂ ಮನವಿ ಮಾಡಿದ್ದಾರೆ.

Intro:

ಬೆಂಗಳೂರು: ಉಪ ಚುನಾವಣೆ ಮುಗಿಯುತ್ತಿದ್ದಂತೆ ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲಾಗುತ್ತದೆ ಹಾಗಾಗಿ ಕನಕ ವೃತ್ತದ ಬಗ್ಗೆ ಇದ್ದ ವಿವಾದಕ್ಕೆ ತೆರೆ ಎಳೆದು ಶಾಂತಿ ಕಾಪಾಡಬೇಕು,ಯಾವುದೇ ಪ್ರತಿಭಟನೆ ಮತ್ತು ಬಂದ್ ಆಚರಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಹುಳಿಯಾರಿನಲ್ಲಿ, ಹುಳಿಯಾರು-ಹೊಸದುರ್ಗ ರಸ್ತೆ ಮೇಲೆ ಇರುವ ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಎದ್ದಿರುವ ಗೊಂದಲ ಅವಶ್ಯಕವಾಗಿದೆ. ವೃತ್ತಕ್ಕೆ ಕನಕದಾಸರ ಹೆಸರಿಡಲು ಯಾವ ಅಭ್ಯಂತರವೂ ಇಲ್ಲ ಮತ್ತು ವಿರೋಧವೂ
ಇಲ್ಲ. ಸಚಿವ ಮಾಧುಸ್ವಾಮಿ ಕೂಡ ಯಾವುದೇ ವಿರೋಧ ಮಾಡಿಲ್ಲ.ನಾನು ಇಂದು ಬೆಳಿಗ್ಗೆ ಮಧುಸ್ವಾಮಿಯವರ ಮಾತಿನ ಬಗ್ಗೆ ಇದ್ದ ಗೊಂದಲಕ್ಕೆ ಕ್ಷಮೆ ಕೇಳಿದ್ದೇನೆ. ಈಗ ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿಗಳು ಕೂಡಾ ಮಾಧುಸ್ವಾಮಿಯವರು ಏಕವಚನದಲ್ಲಿ ಸಂಭೋದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಹಾಗಾಗಿ ವಿವಾದವನ್ನು ಮುಂದುವರೆಸದಂತೆ ಪತ್ರಿಕಾ ಹೇಳಿಕೆ ಮೂಲಕ ಸಿಎಂ ಮನವಿ ಮಾಡಿದ್ದಾರೆ.

ಯಾರು ಉದ್ವೇಗಕ್ಕೆ ಒಳಗಾಗದಿರಿ. ಮುಂದಿನ ದಿನಗಳಲ್ಲಿ ಚುನಾವಣೆ ಮುಗಿದ ನಂತರ ಸರ್ಕಾರದ
ವತಿಯಿಂದ ವೃತ್ತ ನಿರ್ಮಾಣ ಮಾಡಿ ಕನಕದಾಸರ ವೃತ್ತ ಎಂದು ನಾಮಕರಣ ಮಾಡುತ್ತೇನೆ ಎಂದು ಹುಳಿಯಾರು ಮತ್ತು ಬೇರೆ ಕಡೆ ಇರುವ ಕುರುಬ ಸಮುದಾಯದ ಜನರಿಗೆ ಮತ್ತು ಕನಕದಾಸರ ಭಕ್ತರಿಗೆ ಸಿಎಂ ಮನವಿ ಮಾಡಿದ್ದಾರೆ.

ಹಿಂದೆ ನಾನು ಮುಖ್ಯಮಂತ್ರಿಯಾದಾಗ ಕನಕದಾಸರ ಜಯಂತಿ ಜಾರಿಯಲ್ಲಿ ತಂದೆ, ಕಾಗಿನೆಲೆ ಕನಕ ಗುರು ಪೀಠ ಅಭಿವೃದ್ಧಿಗೆ ನಮ್ಮ ಬಿಜೆಪಿ ಸರ್ಕಾರ ಶ್ರಮಿಸಿದೆ, ನನ್ನ ಜೀವನದಲ್ಲಿ ಗುರುಗಳಿಗೆ, ಸಂತರುಗಳಿಗೆ, ದಾಸರಿಗೆ ಮತ್ತು ಶರಣರಿಗೆ ಅತ್ಯಂತ ಗೌರವದಿಂದ ಕಂಡಿದ್ದೇನೆ ಹಾಗೂ ನಡೆದುಕೊಂಡಿದ್ದೇನೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಶಾಂತಿ ಕಾಪಾಡಲು ಸಿಎಂ ಬಿಎಸ್ವೈ ಮನವಿ ಮಾಡಿದ್ದಾರೆ.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.