ETV Bharat / city

ಸ್ಥಿರಾಸ್ತಿ ವ್ಯಾಜ್ಯ ಪ್ರಕರಣ: ಸಬ್‌ಇನ್ಸ್​ಪೆಕ್ಟರ್​ಗೆ ಹೈಕೋರ್ಟ್ ತೀವ್ರ ತರಾಟೆ - ವಕೀಲ ಬಿ.ಸುಧಾಕರ್ ಕೇಸ್​ ನ್ಯೂಸ್​

ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರಿಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕೆಂದು ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯನಗರದ ಸಬ್ ಇನ್ಸ್​ಪೆಕ್ಟರ್​ ಅವರನ್ನು ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿತು.

ಹೈಕೋರ್ಟ್
ಹೈಕೋರ್ಟ್
author img

By

Published : Dec 11, 2019, 11:48 PM IST

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರಿಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕೆಂದು ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯನಗರದ ಸಬ್ ಇನ್ಸ್​ಪೆಕ್ಟರ್​ಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿತು.

ಸಬ್ ಇನ್ಸ್​ಪೆಕ್ಟರ್ ನೋಟಿಸ್ ನೀಡಿದ ವಿಚಾರ ಪ್ರಶ್ನಿಸಿ ವಕೀಲ ಬಿ.ಸುಧಾಕರ್ ಅರ್ಜಿ ಸಲ್ಲಿಕೆ ಮಾಡಿದ್ದರು.‌ ಈ ವಿಚಾರ ಇಂದು‌ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

ವಿಚಾರಣೆ ವೇಳೆ ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಹಾಗೂ ಇನ್ಸ್‌ಪೆಕ್ಟರ್ ಭರತ್‌ ಇಬ್ಬರು ಹಾಜರಿದ್ದರು. ಈ ವೇಳೆ ಇವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಇಂತಹ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಸೂಚಿಸಿ ವಿಚಾರಣೆಯನ್ನ ನಾಳೆಗೆ ಮುಂದೂಡಿಕೆ ಮಾಡಲಾಯಿತು.

Intro:ಸ್ಥಿರಾಸ್ತಿ ವ್ಯಾಜ್ಯ ಪ್ರಕರಣ
ಸಬ್ ಇನ್ಸ್ಪೆಕ್ಟರ್ ಗೆ ಹೈಕೋರ್ಟ್ ತೀವ್ರ ತರಾಟೆ

ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರಿಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕೆಂದು ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯನಗರದ ಸಬ್ ಇನ್ಸ್ಪೆಕ್ಟರ್ ಗೆ ಹೈಕೋರ್ಟ್ ಇಂದು ತೀವ್ರ ತರಾಟೆ ತೆಗೆದು ಕೊಂಡಿದೆ.

ನೋಟಿಸ್ ನೀಡಿದ ವಿಚಾರ ಪ್ರಶ್ನಿಸಿ ವಕೀಲ ಬಿ.ಸುಧಾಕರ್ ಅರ್ಜಿ ಸಲ್ಲಿಕೆ ಮಾಡಿದ್ದರು‌ ಈ ವಿಚಾರ ಇಂದು‌ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠದ ಮುಂದೆ ನಡೆಯಿತು.

ವಿಚಾರಣೆ ವೇಳೆ ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಹಾಗೂ ಇನ್ಸ್‌ಪೆಕ್ಟರ್ ಭರತ್‌ ಇಬ್ಬರು ಹಾಜರಿದ್ದರು. ಈ ವೇಳೆ ತರಾಟೆ ತೆಗೆದುಕೊಂಡ ನ್ಯಾಯಾಲಯ ಸಬ್ ಇನ್ಸ್‌ಪೆಕ್ಟರ್ ಕೆಲಸಕ್ಕೆ ಸೇರಿ ಕೇವಲ 5 ವರ್ಷಗಳಾಗಿದೆ ಅಷ್ಟರಲ್ಲೇ‌ ಇಷ್ಟೊಂದು ಬಿಲ್ಡಪ್ ಅವಶ್ಯಕತೆ ಏನಿದೆ?‌ಒಂದು ಹಣದ ಆಮಿಷ, ಇಲ್ಲ ಹೆಸರು ಮಾಡಬೇಕು ಅನ್ನೋ ಅತಿಯಾದ ಆಸೆ ನಿಮ್ಮಂಥವರಿಂದಲೇ ಪೊಲೀಸ್ ಇಲಾಖೆಯ ಹೆಸರು ಹಾಳಾಗುತ್ತಿರೋದು‌ ಕೇವಲ ಸಬ್ ಇನ್ಸ್‌ಪೆಕ್ಟರ್ ಆಗಿರುವಾಗಲೇ ವಕೀಲರಿಗೆ ನೊಟೀಸ್ ನೀಡ್ತೀರಾ? ಖಾಕಿ ಸಮವಸ್ತ್ರ ಧರಿಸಿರುವ ನಿಮಗೆ ಯಾರಿಗೂ ಕಿರುಕುಳ ನೀಡುವ ಅಧಿಕಾರವಿಲ್ಲ
ನೀವು ಹಾಕಿರೋ ಪೊಲೀಸ್ ಕ್ಯಾಪ್‌ನ ಮೇಲಿರುವ ಲಾಂಛನದ ಅರ್ಥ ಏನು ಗೊತ್ತ ಕಾಡಿನಲ್ಲಿ ಇರುವ ಹುಲಿ ಅಲ್ಲ ನೀವು, ಅರ್ಥವಾಯಿತಾ? ಇನ್ಮುಂದೆ ಈ ರೀತಿ ಘಟನೆ ಮರುಕಳಿಸೋದಿಲ್ಲ‌ ಅಂತ ಅಫಿಡವಿಟ್‌ ಸಲ್ಲಿಸಿ ಎಂದು ತಿಳಿಸಿ ವಿಚಾರಣೆ ಯನ್ನ ನಾಳೆಗೆ ಮುಂದೂಡಿಕೆ ಮಾಡಿದ್ದಾರೆ

ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕು ಎಂದು ವಕೀಲ ಬಿ.ಸುಧಾಕರ್ ಅವರಿಗೆ ವಿಜಯನಗರ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಂತೋ ನೋಟಿಸ್ ನೀಡಿದ್ದರುBody:KN_bNG_11_HIGCOURT_7204498Conclusion:KN_bNG_11_HIGCOURT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.