ETV Bharat / city

ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಜಿಲ್ಲೆಗಳಿಗೂ ಆಕ್ಸಿಜನ್ ಬಸ್ ಒದಗಿಸಲು ಸಿದ್ಧ: ಡಿಸಿಎಂ ಸವದಿ - Private Partnership

ಸಂಘ-ಸಂಸ್ಥೆಗಳು, ಆಸ್ಪತ್ರೆಗಳು ಸ್ಪಾನ್ಸರ್ ನೀಡಿದರೆ ಎಲ್ಲಾ ಜಿಲ್ಲೆಗಳಲ್ಲಿಯೂ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಂದ ಆಕ್ಸಿಜನ್ ಬಸ್ ಸೌಲಭ್ಯ ಒದಗಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

 Ready to provide Oxygen Bus to all Districts in Private Partnership: DCM Savadi

author img

By

Published : May 16, 2021, 4:23 PM IST

ಬೆಂಗಳೂರು: ಜಿಲ್ಲಾ ಮಟ್ಟಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅಥವಾ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಘ-ಸಂಸ್ಥೆಗಳು, ಆಸ್ಪತ್ರೆಗಳು ಸ್ಪಾನ್ಸರ್ ನೀಡಿದರೆ ಎಲ್ಲಾ ಜಿಲ್ಲೆಗಳಲ್ಲಿಯೂ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಂದ ಆಕ್ಸಿಜನ್ ಬಸ್ ಸೌಲಭ್ಯ ಒದಗಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಒಂದು ಬಸ್ಸಿನಲ್ಲಿ ಆರರಿಂದ ಹತ್ತು ಮಂದಿಗೆ ಆಕ್ಸಿಜನ್ ಪೂರೈಕೆ ಮಾಡಲು ಸಾಧ್ಯ. ಪ್ರಸ್ತುತ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಜಾಸ್ತಿಯಾಗಿರುವುದರಿಂದ ಸಹಜವಾಗಿಯೇ ಆಕ್ಸಿಜನ್ ಪೂರೈಕೆ ಕಷ್ಟವಾಗುತ್ತಿದೆ. ಆದರೆ, ಆಕ್ಸಿಜನ್ ಪೂರೈಸುವ ಉಪಕರಣಗಳನ್ನು ಅಳವಡಿಸಿರುವ ಬಸ್ಸುಗಳನ್ನು ಆಸ್ಪತ್ರೆಗಳ ಬಳಿ ನಿಲ್ಲಿಸಿದರೆ ರೋಗಿಗಳಿಗೆ ತುರ್ತಾಗಿ ಬಂದು ಅಲ್ಲಿ ವಿಶ್ರಮಿಸಲು ಮತ್ತು ಆಕ್ಸಿಜನ್ ಪಡೆದು ತಮ್ಮ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇಂತಹ ಪ್ರಯೋಗಗಳು ಈಗಾಗಲೇ ಬೆಂಗಳೂರಿನಲ್ಲಿ ಯಶಸ್ಸು ಕಂಡಿವೆ.‌ ಒಂದು ವೇಳೆ ಸ್ವಯಂ ಸೇವಾ ಸಂಸ್ಥೆಗಳು ಆರೋಗ್ಯ ಸಿಬ್ಬಂದಿಯೊಂದಿಗೆ ಆಕ್ಸಿಜನ್ ಪೂರೈಸುವ ಉಪಕರಣಗಳನ್ನು ಒದಗಿಸಿಕೊಟ್ಟರೆ ಉಚಿತವಾಗಿ ಬಸ್ಸುಗಳನ್ನು ಮತ್ತು ಚಾಲಕರನ್ನು ನಮ್ಮ ಸಾರಿಗೆ ನಿಗಮಗಳಿಂದ ನೀಡಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆ ಬೇಡಿಕೆಗಳಿಗೆ ಅನುಗುಣವಾಗಿ ಆಕ್ಸಿ ಬಸ್ಸುಗಳನ್ನು ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ಸೂಚಿಸಿರುವುದಾಗಿ ಸವದಿ ವಿವರಿಸಿದರು.

ಈ ಬಗ್ಗೆ ಅಗತ್ಯವಿದ್ದವರು ಆಯಾ ಜಿಲ್ಲೆಗಳ ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸ್ಪಷ್ಟನೆ ಕೂಡ ನೀಡಿದ್ದಾರೆ. ಹೈದರಾಬಾದ್​ನ ಸೇವಾ ಸಂಸ್ಥೆಯೊಂದು ನಮ್ಮ ಸಾರಿಗೆ ನಿಗಮಗಳ ಸಹಯೋಗದಲ್ಲಿ ವ್ಯಾಪಕವಾಗಿ ಆಕ್ಸಿಜನ್ ಬಸ್ಸುಗಳ ಸೇವೆಯನ್ನು ಪ್ರಾರಂಭಿಸಲು ಮುಂದೆ ಬಂದಿದೆ‌. ಆರೋಗ್ಯ ಸಚಿವ ಡಾ. ಸುಧಾಕರ್ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ಈ ಜಂಟಿ ಪ್ರಯತ್ನ ಕೈಗೂಡಿದರೆ ರಾಜ್ಯಾದ್ಯಂತ ಮತ್ತಷ್ಟು ಹೆಚ್ಚಿನ ಮಂದಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಸವದಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.