ETV Bharat / city

ಖಾಸಗಿ ಚಾನಲ್‌ ಮಾಲೀಕನ‌‌‌ ಮೇಲೆ‌ ರವಿ ಪೂಜಾರಿ ಹಲ್ಲೆ: ದೋಷರೋಪ ಪಟ್ಟಿ ಸಲ್ಲಿಸಿದ ಸಿಸಿಬಿ

author img

By

Published : Jul 10, 2020, 12:33 PM IST

ಭೂಗತ ಪಾತಕಿ ‌ರವಿ ಪೂಜಾರಿ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮತ್ತೊಂದು‌ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಈ ಮೂಲಕ ಇಲ್ಲಿಯವರೆಗೆ ನಾಲ್ಕು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದಂತಾಗಿದೆ.

CCB filed indictment
ದೋಷರೋಪ ಪಟ್ಟಿ ಸಲ್ಲಿಕೆ ಮಾಡಿದ ಸಿಸಿಬಿ

ಬೆಂಗಳೂರು: ಭೂಗತ ಪಾತಕಿ ‌ರವಿ ಪೂಜಾರಿ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮತ್ತೊಂದು‌ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

2009ರಲ್ಲಿ ಇಂದಿರಾನಗರದ ಬಳಿ ಇರುವ ಖಾಸಗಿ ಚಾನಲ್ ಮಾಲೀಕ ಜಮಾಲ್ ಎಂಬುವರಿಗೆ ಕರೆ ಮಾಡಿ‌ ರವಿ ಪೂಜಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದನಂತೆ. ಹಣ ಕೊಡಲು ನಿರಾಕರಿಸಿದಾಗ ರವಿ ‌ಪೂಜಾರಿ ತನ್ನ ಸಹಚರರನ್ನು ಕಳುಹಿಸಿ ಹಲ್ಲೆ ನಡೆಸಿದ್ದ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಂತರ ಹೆಚ್ಚಿನ ತನಿಖೆಗೆ ಸಿಸಿಬಿಗೆ ವರ್ಗಾವಣೆಯಾಗಿತ್ತು.

ಪೊಲೀಸರು ರವಿ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಖಾಸಗಿ ಚಾನಲ್ ಮಾಲೀಕನ ಮೇಲೆ ನಡೆದ ಹಲ್ಲೆ ಹಾಗೂ ಬೆದರಿಕೆ ವಿಚಾರ ಕುರಿತು ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದುವರೆಗೆ ನಾಲ್ಕು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ರವಿ ಪೂಜಾರಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಕೊರೊನಾ ಸೋಂಕು ಕಡಿಮೆಯಾದ ನಂತರ ಪತ್ತೆ ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.