ETV Bharat / city

ಅಸಂಸದೀಯ ಪದ ಬಳಸಿದ ರಮೇಶ್ ಕುಮಾರ್ : ವಿಧಾನಸಭೆಯಲ್ಲಿ ಗದ್ದಲ, ಗಲಾಟೆ - Ramesh kumar

ಸಮಯ ವ್ಯರ್ಥವಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ರಮೇಶ್ ಕುಮಾರ್ ಅಸಂಸದೀಯ ಪದ ಬಳಸಿದರು. ಆ ಪದ ಬಳಕೆ ಮಾಡುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು. ನಂತರ ತಮ್ಮ ತಪ್ಪು ಒಪ್ಪಿಕೊಂಡ ರಮೇಶ್ ಕುಮಾರ್, ಸ್ಪೀಕರ್ ತೀರ್ಪಿಗೆ ತಲೆ ಬಾಗಿ ಕ್ಷಮೆ ಕೋರುತ್ತೇನೆ ಎಂದು ಸದನದಲ್ಲಿ ಕ್ಷಮೆ ಯಾಚಿಸಿದರು.

session
ವಿಧಾನಸಭೆ
author img

By

Published : Sep 23, 2020, 8:29 PM IST

ಬೆಂಗಳೂರು: ಕೊರೊನಾ ನಿಯಂತ್ರಣ, ವೈದ್ಯಕೀಯ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಬಳಸಿದ ಅಸಂಸದೀಯ ಪದಕ್ಕೆ ಆಡಳಿತ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಗದ್ದಲ, ವಾಗ್ವಾದ ನಡೆಯಿತು.

ಕೊರೊನಾ ಚಿಕಿತ್ಸೆಯಲ್ಲಿ ಸರ್ಕಾರ ಅವ್ಯವಹಾರ ನಡೆಸುತ್ತಿದೆ. ಭ್ರಷ್ಟಾಚಾರ ನಡೆಸುತ್ತಿದೆ. ಸ್ಪಷ್ಟ ಉತ್ತರ ನೀಡದೇ ಮರೆಮಾಚುತ್ತಿದೆ. ದೊಡ್ಡ ಮನುಷ್ಯರೆಲ್ಲ ಮಾಡುವುದು ಇಂತಹ ಕೆಲಸವನ್ನೇ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗುಡುಗಿದರು.

ಸಮಯ ವ್ಯರ್ಥವಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ರಮೇಶ್ ಕುಮಾರ್ ಅಸಂಸದೀಯ ಪದ ಬಳಸಿದರು. ಆ ಪದ ಬಳಕೆ ಮಾಡುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು.

ಸಚಿವ ಈಶ್ವರಪ್ಪ ಎದ್ದು ನಿಂತು ಸಮಾಜದಲ್ಲಿ ಗುಂಡಾಗಳು ಬಳಸುವ ಪದ ಅದು. ನಿಮಗೆ ಹೇಳಿದರೆ ನೀವು ಒಪ್ಪುತ್ತಿರಾ? ನಿಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಸದನದಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಎದ್ದುನಿಂತ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ನೀವು ಬಾಯಿಗೆ ಬಂದ ಪದ ಬಳಕೆ ಮಾಡಬೇಡಿ. ನೀವು ಹಿರಿಯರಾಗಿ ಈ ರೀತಿ ಮಾತಾಡುತ್ತೀರಲ್ಲ ಎಂದು ಏರು ಧ್ವನಿಯಲ್ಲಿ ಕಿಡಿಕಾರಿದರು. ಸಚಿವ ಸುಧಾಕರ್​ಗೆ ಬೆಂಬಲ ಸೂಚಿಸಿದ ಸಚಿವ ಜಗದೀಶ್ ಶೆಟ್ಟರ್, ಏನಾದರೂ ತಪ್ಪು ಇದ್ದರೆ ಪ್ರಶ್ನೆ ಕೇಳಿ. ಅದು ಬಿಟ್ಟು ಕೆಟ್ಟ ಪದ ಬಳಕೆ ಮಾಡೋದಾ? ಎಂದು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ರಮೇಶ್ ಕುಮಾರ್, ಯಾವುದು ಸಾಂವಿಧಾನಿಕ ಪದ, ಯಾವುದು ಅಸಾಂವಿಧಾನಿಕ ಪದ ಎಂಬ ಪಟ್ಟಿ ಸ್ಪೀಕರ್ ಬಳಿ ಇದೆ. ನನಗೆ ಕ್ಷಮೆ ಕೇಳುವುದಕ್ಕೆ ಯಾವ ಪ್ರತಿಷ್ಟೆಯೂ ಇಲ್ಲ ಎಂದರು. ಈ ಮಧ್ಯೆ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಮೇಶ್ ಕುಮಾರ್ ಅವರು ಬಳಕೆ ಮಾಡಿರುವ ಪದ ಸೌಜನ್ಯ ಪದ ಅಲ್ಲ. ಒಳ್ಳೆಯ ಶಬ್ದವೂ ಅಲ್ಲ ಎಂದು ಪಾರ್ಲಿಮೆಂಟರಿ ಪುಸ್ತಕ ತರಿಸಿ ಪರಿಶೀಲಿಸಿದರು. ಬಳಿಕ 'ಹಲ್ಕಾ 'ಎಂಬ ಪದ ಅಸಂಸದೀಯ ಪದ ಎಂದು ಹೇಳಿ ಕಡತದಿಂದ ಆ ಪದವನ್ನು ತೆಗೆಯಲಾಗಿದೆ ಎಂದು ಸ್ಪೀಕರ್ ಹೇಳಿದರು.

ನಂತರ ತಮ್ಮ ತಪ್ಪನ್ನು ಒಪ್ಪಿಕೊಂಡ ರಮೇಶ್ ಕುಮಾರ್ ಆಡಳಿತ ಪಕ್ಷದ ನಡೆಯನ್ನು ಸಹಿಸಿಕೊಳ್ಳಲಾಗದೇ ಆ ರೀತಿ ಮಾತನಾಡಿದೆ ಎಂದು ಹೇಳಿದರು. ಸ್ಪೀಕರ್ ತೀರ್ಪಿಗೆ ತಲೆ ಬಾಗಿ ಸ್ವೀಕರಿಸಿ ಕ್ಷಮೆ ಕೋರುತ್ತೇನೆ ಎಂದು ರಮೇಶ್ ಕುಮಾರ್ ಸದನದಲ್ಲಿ ಕ್ಷಮೆ ಯಾಚಿಸಿದರು. ಆದರೆ, ಎಷ್ಟು ಅಂತ ಸಹಿಸಿಕೊಳ್ಳೋದು ಹೇಳಿ? ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ 'ಹೌದೌದು, ನೀವು ಶ್ರೀರಾಮಚಂದ್ರರಾ' ಎಂದು ಅವರನ್ನು ಆಡಳಿತ ಪಕ್ಷದ ಸದಸ್ಯರು ಛೇಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.