ETV Bharat / city

ಬೆಂಗಳೂರು-ಎಲ್ಲೆಡೆ ಶ್ರೀರಾಮ ನವಮಿ ಸಡಗರ: ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ - ರಾಮ ರಥಯಾತ್ರೆ

ನಾಡಿನೆಲ್ಲೆಡೆ ಇಂದು ರಾಮ ನವಮಿ ಸಡಗರ ಮನೆ ಮಾಡಿದೆ. ಶ್ರೀ ರಾಮನ ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣವಿದ್ದು, ಬಗೆ ಬಗೆಯ ಹೂಗಳಿಂದ ದಶರಥ ಪುತ್ರನಿಗೆ ಅಲಂಕಾರ ಮಾಡಲಾಗಿದೆ.

Rama Navami  celebration in Bengaluru
ರಾಮ ನವಮಿ
author img

By

Published : Apr 10, 2022, 10:09 AM IST

ಬೆಂಗಳೂರು: ರಾಜ್ಯದಲ್ಲಿ ಇಂದು ಶ್ರೀರಾಮ ನವಮಿ ಸಡಗರ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಲಾಗುತ್ತಿದೆ. ಬಗೆ ಬಗೆಯ ಹೂಗಳಿಂದ ದಶರಥ ಪುತ್ರನಿಗೆ ಅಲಂಕಾರ ಮಾಡಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಲಾಗುತ್ತಿದೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷ ಸಾರ್ವಜನಿಕ ಆಚರಣೆ ಇರಲಿಲ್ಲ. ಈ ಬಾರಿ ಆಚರಣೆ ಕಳೆಗಟ್ಟಿದೆ.

ರಾಮ ನವಮಿ: ದೇಗುಲಗಳಲ್ಲಿ ವಿಶೇಷ ಪೂಜೆ

ಮುಂಜಾನೆಯಿಂದಲೇ ದೇಗುಲಗಳತ್ತ ಭಕ್ತರು ಬರುತ್ತಿದ್ದು, ಶ್ರೀರಾಮ, ಹನುಮ ಮಂದಿರಗಳ ಬಳಿ ಭಕ್ತರ ದಂಡು ಹೆಚ್ಚಾಗಿದೆ. ಶ್ರೀ ರಾಮನ ದೇವಸ್ಥಾನಗಳಲ್ಲಿ ಸಡಗರದ ವಾತಾವರಣ ಮನೆಮಾಡಿದೆ. ಅಲ್ಲದೇ ಪಾನಕ, ಕೋಸಂಬರಿ, ಮಜ್ಜಿಗೆ ತಯಾರಿಸಿ ಹಂಚಲಾಗುತ್ತಿದೆ.

ಹಿಂದೂಪರ ಸಂಘಟನೆಗಳಿಂದ ಭರ್ಜರಿ ಆಚರಣೆ: ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳಿಂದ ಅದ್ದೂರಿಯಾಗಿ ಉತ್ಸವ ಮಾಡಲಾಗುತ್ತಿದೆ. ಗಲ್ಲಿ ಗಲ್ಲಿಗಳಲ್ಲೂ ಅಯೋಧ್ಯಾಧಿಪತಿಯ ಸ್ಮರಣೆ ಮಾಡಲಾಗುತ್ತಿದೆ.

ಮಾಂಸ ಮಾರಾಟವಿಲ್ಲ: ರಾಜಧಾನಿಯಲ್ಲಿ ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಹಲವೆಡೆ ಮೆರವಣಿಗೆ ಹೊರಡುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ರಾಮ ರಥಯಾತ್ರೆ: ಸಚಿವ ಆರ್​​. ಅಶೋಕ್ ನೇತೃತ್ವದಲ್ಲಿ ರಾಮ ನವಮಿಯ ಪ್ರಯುಕ್ತ ನಗರದಲ್ಲಿ ರಾಮ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​ವೈ ಸೇರಿ ಹಲವು ಸಚಿವರು, ಶಾಸಕರು ಹಾಗೂ ಮುಖಂಡರು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಶೋಭಾಯಾತ್ರೆಯಲ್ಲಿ ಡಿಜೆಗೆ ನಿರ್ಬಂಧ, ಪ್ರಚೋದನಕಾರಿ ಭಾಷಣ ಮಾಡಿದ್ರೆ ಕ್ರಮ: ಎಸ್​​ಪಿ ವಂಶಿಕೃಷ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.