ETV Bharat / city

ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ಪಟ್ಟಿ ಬಿಡುಗಡೆ: ನಿರ್ಮಲಾ ಸೀತಾರಾಮನ್​, ನಟ ಜಗ್ಗೇಶ್​ಗೆ ಟಿಕೆಟ್ - ಕರ್ನಾಟಕ ರಾಜ್ಯಸಭೆ ಅಭ್ಯರ್ಥಿಗಳು

ರಾಜ್ಯಸಭೆ ಚುನಾವಣಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ವಿರೋಧದ ಮಧ್ಯೆಯೂ ಈ ಬಾರಿ ಮತ್ತೆ ನಿರ್ಮಲಾ ಸೀತಾರಾಮನ್​ಗೆ ಟಿಕೆಟ್ ನೀಡಲಾಗಿದೆ. ಅಚ್ಚರಿಯ ಆಯ್ಕೆ ನಟ ಜಗ್ಗೇಶ್​ ಅವರಿಗೂ ಬಿಜೆಪಿ ಮಣೆ ಹಾಕಿದೆ.

ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ಪಟ್ಟಿ ಬಿಡುಗಡೆ

author img

By

Published : May 29, 2022, 8:00 PM IST

ಬೆಂಗಳೂರು: ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10 ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್​ಗೆ ಟಿಕೆಟ್ ಘೋಷಿಸಿದ್ದು, ಮೂರನೇ ಸ್ಥಾನಕ್ಕೆ ಹೆಸರು ಪ್ರಕಟಿಸಿಲ್ಲ‌.

ವೆಂಕಯ್ಯ ಸಾಕಯ್ಯ ಅಭಿಯಾನದ ನಂತರ ನಿರ್ಮಲಾ ಸೀತಾರಾಮನ್ ವಿರುದ್ಧ ಅಭಿಯಾನ ಆರಂಭಗೊಂಡರೂ ತಲೆಕೆಡಿಸಿಕೊಳ್ಳದ ಬಿಜೆಪಿ ಹೈಕಮಾಂಡ್ ಎರಡನೇ ಬಾರಿ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯಸಭೆ ಟಿಕೆಟ್ ಪ್ರಕಟಿಸಿದೆ. ಕರ್ನಾಟಕಕ್ಕೆ ಕೊಡುಗೆ ಏನು ಎಂದು ನಿರ್ಮಲಾ ವಿರುದ್ಧ ಅಭಿಯಾನ ಆರಂಭಗೊಳ್ಳುತ್ತಿದ್ದಂತೆ ಈ ಬಾರಿ ಉತ್ತರ ಪ್ರದೇಶದಿಂದ ಅವರನ್ನು ಕಣಕ್ಕಿಳಿಸಲಾಗುತ್ತದೆ. ರಾಜ್ಯದಿಂದ ಅಚ್ಚರಿ ಆಯ್ಕೆ ನಡೆಯಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಅದೆಲ್ಲಾ ಹುಸಿಯಾಗಿದ್ದು, ಕೋರ್ ಕಮಿಟಿ ಶಿಫಾರಸ್ಸು ಮಾಡಿದಂತೆ ಹೈಕಮಾಂಡ್ ನಿರ್ಮಲಾ ಸೀತಾರಾಮನ್​ಗೆ ಮಣೆ ಹಾಕಿದೆ.

ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ಪಟ್ಟಿ ಬಿಡುಗಡೆ
ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ಪಟ್ಟಿ ಬಿಡುಗಡೆ

ಎರಡನೇ ಸ್ಥಾನಕ್ಕೆ ಒಂದು ರೀತಿಯಲ್ಲಿ ಅಚ್ಚರಿ ಆಯ್ಕೆ ಎನ್ನುವಂತೆ ನಟ ಜಗ್ಗೇಶ್ ಹೆಸರು ಪ್ರಕಟಿಸಲಾಗಿದೆ. ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿ ಆದ ವೇಳೆ ಬಿಜೆಪಿಗೆ ಬಂದಿದ್ದ ಜಗ್ಗೇಶ್ ನಂತರ ರಾಜಕೀಯ ಮುನ್ನೆಲೆಗೆ ಬರಲು ಸಾಕಷ್ಟು ಶ್ರಮಿಸಿದ್ದರು. ಪರಿಷತ್ ಸದಸ್ಯರಾಗಿ ನಂತರ ಯಶವಂತಪುರ ಕ್ಷೇತ್ರದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕು ಕಣಕ್ಕಿಳಿದು ಪರಾಜಿತಗೊಂಡಿದ್ದರು. ಇದೀಗ ರಾಜ್ಯಸಭೆಗೆ ಟಿಕೆಟ್ ನೀಡುವ ಮೂಲಕ ಜಗ್ಗೇಶ್ ಮತ್ತೆ ರಾಜಕೀಯ ಮುನ್ನೆಲೆಗೆ ಬರಲು ಬಿಜೆಪಿ ಹೈಕಮಾಂಡ್ ಅವಕಾಶ ಕಲ್ಪಿಸಿದೆ.

ಹೆಚ್ಚವರಿ ಮತಗಳನ್ನು ಹೊಂದಿರುವ ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಎರಡು ಸ್ಥಾನಕ್ಕೆ ಮಾತ್ರ ಬಿಜೆಪಿ ಹೆಸರು ಪ್ರಕಟಿಸಿದ್ದು, ಮೂರನೇ ಸ್ಥಾನಕ್ಕೆ ಸ್ಪರ್ಧೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆದರೆ ಪಕ್ಷೇತರ ಅಭ್ಯರ್ಥಿ ನಿಲ್ಲಿಸಿ ಬೆಂಬಲ ನೀಡುವ ಚಿಂತನೆ ನಡೆಸಿದೆ. ಕಳೆದ ಬಾರಿ ಹಾಲಿ ಸದಸ್ಯ ಕೆ.ಸಿ ರಾಮಮೂರ್ತಿ ಇದೇ ರೀತಿ ಕಣಕ್ಕಿಳಿದು ಗೆದ್ದಿದ್ದು, ಈ ಬಾರಿಯೂ ಅವರಿಗೆ ಸಹಕಾರ ನೀಡಲಿದೆ ಎನ್ನಲಾಗುತ್ತಿದೆ.

(ಓದಿ: ರಾಜ್ಯ ವಿಧಾನಸಭೆಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಯ್ಕೆಗೆ ಬಿಜೆಪಿಗರ ಅಪಸ್ವರ!?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.