ಬೆಂಗಳೂರು: ನಗರದಲ್ಲಿ ಸೈಬರ್ ಅಪರಾಧಗಳನ್ನ ತಡೆಗಟ್ಟಲು ಸರಿಯಾದ ಟೆಕ್ನಿಕಲ್ ಎಕ್ಸ್ಪರ್ಟ್ ಸಿಬ್ಬಂದಿ ಇರದ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ.
ಇತ್ತೀಚೆಗೆ ಡ್ರಗ್ಸ್, ಆನ್ಲೈನ್ ಫ್ರಾಡ್, ಡಾರ್ಕ್ ನೆಟ್ ಬಿಟ್ ಕಾಯಿನ್ ದಂಧೆ ಹೆಚ್ಚಾಗಿದ್ದು, ಇದನ್ನ ಸರಿಯಾದ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ಮಾಡಲಾಗಿದೆ. ಆದರೆ ಸದ್ಯ ಸೈಬರ್ ಠಾಣೆಯಲ್ಲಿ ಬಹಳಷ್ಟು ಪ್ರಕರಣಗಳು ದಾಕಲಾಗುತ್ತಿದ್ದು, ಅದರಲ್ಲಿ ಡಾರ್ಕ್ ನೆಟ್ ಫ್ರಾಡ್ಗಳೇ ಹೆಚ್ಚಾಗ್ತಿವೆ.
ಡಾರ್ಕ್ ನೆಟ್ ಅಂದರೆ ಏನು?. ಇದು ಹೇಗೆ ವರ್ಕ್ ಆಗುತ್ತೆ ಎಂಬುದನ್ನು ಪತ್ತೆ ಹಚ್ಚಲು ಸೈಬರ್ ಪೊಲೀಸರಿಗೆ ಸರಿಯಾದ ರೀತಿ ಮಾಹಿತಿ ಇಲ್ಲ. ಹೀಗಾಗಿ, ಇದನ್ನ ಪತ್ತೆ ಮಾಡಲು ಪರಿಣಿತ ಸಿಬ್ಬಂದಿ ಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.