ಬೆಂಗಳೂರು: ಪ್ರವಾಹದಿಂದ ಮನೆ ಹಾನಿಗೆ ಒಳಗಾದ ನಾಗರಿಕರಿಗೆ ಪರಿಹಾರ ಒದಗಿಸುವ ಕಾಲಮಿತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಡಿಸೆಂಬರ್ 7ಕ್ಕೆ ಅಂತಿಮ ಗಡುವು ವಿಸ್ತರಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
RGRHCL ತಂತ್ರಾಶದಲ್ಲಿ ಮನೆ ಹಾನಿಗೆ ಒಳಗಾದ ಪ್ರಕರಣಗಳ ವಿವರ ಹಾಗೂ ಬೆಳೆ ಹಾನಿಯ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ನಿಯಮಾನುಸಾರ ದಾಖಲಿಸಲು ಸೂಚಿಸಲಾಗಿದೆ. ಇದೇ ವರ್ಷ ಅಕ್ಟೋಬರ್ 13ರಂದು ಹೊರಡಿಸಿದ ಸುತ್ತೋಲೆಯಲ್ಲಿ ಪ್ರವಾಹದಿಂದ ಮನೆ ಹಾನಿಯಾದ ಪ್ರಕರಣಗಳ ಎ, ಬಿ ಮತ್ತು ಸಿ ವರ್ಗವಾರು ವಿವರಗಳನ್ನು RGRHCL ತಂತ್ರಾಶದಲ್ಲಿ ಅಕ್ಟೋಬರ್ 30ರ ಒಳಗೆ ದಾಖಲಿಸುವಂತೆ ತಿಳಿಸಲಾಗಿತ್ತು.
![ಮಾಹಿತಿ ದಾಖಲಿಸಲು ಡಿಸೆಂಬರ್ 7ರವರೆಗೆ ಗಡುವು,Govt extended date to submit Rain Loss,Karnataka Rain loss compensation, ಮಳೆ ಹಾನಿ ವಿವರ ಸಲ್ಲಿಸಲು ದಿನಾಂಕ ವಿಸ್ತಾರ](https://etvbharatimages.akamaized.net/etvbharat/prod-images/kn-bng-05-government-order-script-7208077_01122021221344_0112f_1638377024_254.jpg)
ರಾಜ್ಯದಲ್ಲಿ ನವಂಬರ್ ತಿಂಗಳಲ್ಲಿ ಸಹ ಅಕಾಲಿಕ ಮಳೆ ಸುರಿದ ಕಾರಣ ಮನೆ ಹಾನಿಯಾದ ಪ್ರಕರಣ ವಿವರಗಳನ್ನು ತಂತ್ರಾಂಶಕ್ಕೆ ಅಳವಡಿಸಲು ವಿಸ್ತರಿಸಿ 18ರಂದು ಹೊಸ ಆದೇಶ ಹೊರಡಿಸಲಾಗಿತ್ತು. ಈ ಆದೇಶದಲ್ಲಿ ನವೆಂಬರ್ 30ರ ವರೆಗೆ ಕಾಲಮಿತಿ ನೀಡಿ ಮನೆ ಹಾನಿ ಹಾಗೂ ಬೆಳೆ ಹಾನಿ ಆಗಿರುವ ಬಗ್ಗೆ ಮಾಹಿತಿ ದಾಖಲಿಸಲು ತಿಳಿಸಲಾಗಿತ್ತು. ಇದೀಗ ಈ ವರ್ಷದ ಅಂತಿಮ ದಿನಾಂಕವನ್ನು ಪ್ರಕಟಿಸಲಾಗಿದ್ದು, ಅಷ್ಟರೊಳಗೆ ಪ್ರತಿಯೊಬ್ಬರು ತಪ್ಪದೇ ಮಾಹಿತಿಯನ್ನು ದಾಖಲಿಸುವಂತೆ ತಿಳಿಸಲಾಗಿದೆ.
(ದಾವಣಗೆರೆಯಲ್ಲಿ ನಿಲ್ಲದ ಮಳೆ: ನೆಲಕಚ್ಚಿದ 700 ಎಕರೆ ಬೆಳೆ, ಕಂಗಾಲಾದ ಅನ್ನದಾತ)