ಬೆಂಗಳೂರು: ದಿನದಿಂದ ದಿನಕ್ಕೆ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿ ಇಳಿಮುಖ ಕಂಡಿದ್ದು, ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಈಗಾಗಲೇ ರೈಲುಗಳ ಸಂಚಾರವನ್ನ ಕ್ರಮೇಣ ಇಳಿಸಿದ್ದು, ನಿನ್ನೆಯಷ್ಟೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ 4 ರೈಲುಗಳ ಸಂಚಾರವನ್ನ ರದ್ದುಗೊಳಿಸಿತ್ತು. ಇಂದಿನಿಂದ ಮತ್ತೆ 6 ರೈಲುಗಳನ್ನ ರದ್ದುಗೊಳಿಸಿ ಎಂದು ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.
ಓದಿ: ನಾಳೆಯಿಂದ ಪ್ರಯಾಣ ನಿಲ್ಲಿಸಲಿರುವ 16 ವಿಶೇಷ ರೈಲುಗಳು: ಯಾವ ಮಾರ್ಗದ ರೈಲುಗಳು,ಏಕೆ?
1. ಟ್ರೈನ್ ನಂ- 06315, ಮೇ 16 ರಿಂದ ಜೂನ್ 1 ರವರೆಗೆ ಮೈಸೂರಿನಿಂದ ಹೊರಡಬೇಕಿದ್ದ ಮೈಸೂರು-ಕೊಚುವೇಲಿ ಎಕ್ಸಪ್ರೆಸ್ ಸ್ಪೆಷಲ್ ಟ್ರೈನ್ ರದ್ದು
2. ಟ್ರೈನ್ ನಂ- 06315, ಕೊಚುವೆಲ್ಲಿಯಿಂದ ಹೊರಡಬೇಕಿದ್ದ ಕೋಚುವೇಲಿ-ಮೈಸೂರು ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಕ್ಯಾನ್ಸಲ್ -ಮೇ 15 ರಿಂದ ಮೇ 31 ರವರೆಗೆ ರದ್ದು
ಕೆಲವು ರೈಲುಗಳನ್ನ ಭಾಗಶಃ ರದ್ದುಗೊಳಿಸಿದ ರೈಲ್ವೇ ಇಲಾಖೆ:
1. ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ ಸ್ಪೆಷಲ್ ಟ್ರೈನ್ ಧಾರವಾಡ ದಿಂದ ಹುಬ್ಬಳ್ಳಿ ವರೆಗೆ ಭಾಗಶಃ ರದ್ದು
2. ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ ಸ್ಪೆಷಲ್ ಟ್ರೈನ್ ಧಾರವಾಡ ದಿಂದ ಹುಬ್ಬಳ್ಳಿ ವರೆಗೆ ಭಾಗಶಃ ರದ್ದು
3. ಸೊಲ್ಲಾಪುರ-ಧಾರವಾಡ ಎಕ್ಸ್‌ಪ್ರೆಸ್ ಸ್ಪೆಷಲ್ ಟ್ರೈನ್ ಹುಬ್ಬಳ್ಳಿಯಿಂದ ಧಾರವಾಡದ ವರೆಗೆ ಭಾಗಶಃ ರದ್ದು
4. ಧಾರವಾಡ-ಸೊಲ್ಲಾಪುರ ಎಕ್ಸ್‌ಪ್ರೆಸ್ ಸ್ಪೆಷಲ್ ಟ್ರೈನ್ ಧಾರವಾಡ ದಿಂದ ಹುಬ್ಬಳ್ಳಿ ವರೆಗೆ ಭಾಗಶಃ ರದ್ದು