ETV Bharat / city

ಡ್ರಗ್ಸ್​ ಮಾಫಿಯಾಗೂ ನನಗೂ ಸಂಬಂಧವಿಲ್ಲ... ರಾಹುಲ್ ಅಮಾಯಕ ಹುಡುಗ: ನಟಿ ಸಂಜನಾ ಗರ್ಲಾನಿ - ನಟಿ ಸಂಜನಾ ಗರ್ಲಾನಿ

ಸಿಸಿಬಿ ಕಸ್ಟಡಿಯಲ್ಲಿ ಇರುವ ಆಪ್ತ ರಾಹುಲ್ ಬಗ್ಗೆ ನಟಿ ಸಂಜನಾ ಬಾಯ್ಬಿಟ್ಟಿದ್ದಾರೆ. ರಾಹುಲ್ ತುಂಬಾ ಅಮಾಯಕ, ಮೂರು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ಆತ ತುಂಬಾ ಒಳ್ಳೆಯ ಹುಡುಗ, ರಿಯಲ್ ಎಸ್ಟೇಟ್ ‌ಮಾಡ್ತಾನೆ. ಅಲ್ಲದೆ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನೊಟೀಸ್ ಬಂದ್ರೆ ನಾನು ತನಿಖೆಗೆ ಸಹಕರಿಸುತ್ತೇನೆ ಎಂದರು.

rahul inocent actress Sanjana Garlani talk
ರಾಹುಲ್ ಅಮಾಯಕ, ಅವನು ತುಂಬಾ ಒಳ್ಳೆ ಹುಡುಗ: ನಟಿ ಸಂಜನಾ ಗರ್ಲಾನಿ
author img

By

Published : Sep 4, 2020, 12:55 PM IST

ಬೆಂಗಳೂರು: ಸ್ಯಾಂಡಲ್​​ವುಡ್​ನಲ್ಲಿ ಎದ್ದಿರುವ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜಾನ ಗರ್ಲಾನಿ ಹೆಸರು ತಳುಕು ಹಾಕಿಕೊಳ್ತಿದ್ದಂತೆ ಎಚ್ಚೆತ್ತ ನಟಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಅಲ್ಲದೆ ಸಂಜನಾ ಮಾಧ್ಯಮದವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.

ಕೊನೆಗೂ ಸಿಸಿಬಿ ಕಸ್ಟಡಿಯಲ್ಲಿ ಇರುವ ಆಪ್ತ ರಾಹುಲ್ ಬಗ್ಗೆ ನಟಿ ಸಂಜನಾ ಬಾಯ್ಬಿಟ್ಟಿದ್ದಾರೆ. ರಾಹುಲ್ ತುಂಬಾ ಅಮಾಯಕ, ಮೂರು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ‌ಮಾಡ್ತಾನೆ. ಅಲ್ಲದೆ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನೊಟೀಸ್ ಬಂದ್ರೆ ನಾನು ತನಿಖೆಗೆ ಸಹಕರಿಸುತ್ತೇನೆ ಎಂದರು.

ಕಳೆದ ಡಿಸೆಂಬರ್ ಆದ ಮೇಲೆ ನಾನು ಪಾರ್ಟಿಗಳಿಗೆ ಹೋಗೋದು ಬಿಟ್ಟಿದ್ದೀನಿ. ಇನ್ನು ಡಗ್ಸ್ ಮಾಫಿಯಾಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸಂಜನಾ ಹೇಳಿದ್ದಾರೆ.

ಸದ್ಯ ಸಿಸಿಬಿ ಕಸ್ಟಡಿಯಲ್ಲಿ ಸಂಜನಾ ಆಪ್ತ ರಾಹುಲ್ ಇದ್ದು, ಸಂಜನಾಗೂ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು‌ ಬಂದಿದೆ. ಇನ್ನು ಇಂದು ನಟಿ ರಾಗಿಣಿಯನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ನಟಿ ಸಂಜನಾ ಗರ್ಲಾನಿ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.