ETV Bharat / city

ಡಿ.ರೂಪಾ ವಿರುದ್ಧ 1 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ ರಾಘವೇಂದ್ರ ಶೆಟ್ಟಿ - ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿರೂಪಾ ಮೌದ್ಗಿಲ್

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಎಂಡಿ ಮಧ್ಯ ಆರೋಪ - ಪ್ರತ್ಯಾರೋಪ ಮುಂದುವರಿದಿದೆ.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
author img

By

Published : Jun 4, 2022, 8:43 AM IST

ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಮತ್ತು ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ನಡುವಿನ ಆರೋಪ - ಪ್ರತ್ಯಾರೋಪ ಮುಂದುವರೆದಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಒದಗಿಸಬೇಕು, ಇಲ್ಲವಾದಲ್ಲಿ 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಡಿ.ರೂಪಾ ಮೌದ್ಗಿಲ್​​ಗೆ ರಾಘವೇಂದ್ರ ಶೆಟ್ಟಿ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ರಾಘವೇಂದ್ರ ಶೆಟ್ಟಿ ಪತ್ರ
ರಾಘವೇಂದ್ರ ಶೆಟ್ಟಿ ಪತ್ರ

ರಾಘವೇಂದ್ರ ಶೆಟ್ಟಿ ನಿಗಮದ ಅಧ್ಯಕ್ಷರಾಗಿ 3 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಶ್ರೀಗಂಧದ ವಸ್ತುಗಳನ್ನ ಕೊಂಡೊಯ್ದಿದ್ದಾರೆ ಹಾಗೂ 24 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ನಿಗಮದ ಫೈನಾನ್ಸ್ ವಿಭಾಗದ ಕಿಶೋರ್ ಕುಮಾರ್ ಅವರನ್ನ ಮತ್ತೆ ನಿಗಮಕ್ಕೆ ಕರೆತರಲು 4-5 ಕೋಟಿಗಳ ಮಾತುಕತೆ ನಡೆಸಿದ್ದಾರೆ ಎಂದು ರೂಪಾ ಆರೋಪಿಸಿದ್ದಾರೆ. ಆದರೆ ಇದೆಲ್ಲ ಸುಳ್ಳು ಆರೋಪ. ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ದಾಖಲೆ ಕೊಡಬೇಕು ಎಂದು ಪತ್ರ ಬರೆದಿದ್ದಾರೆ.

ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಎರಡು ದಿನಗಳೊಳಗೆ ಸೂಕ್ತ ದಾಖಲೆ ನೀಡದಿದ್ದಲ್ಲಿ ಮೊಕದ್ದಮೆ ಹೂಡುವುದಾಗಿ ರಾಘವೇಂದ್ರ ಶೆಟ್ಟಿ ಎಚ್ಚರಿಸಿದ್ದಾರೆ.

(ಇದನ್ನೂ ಓದಿ: ಸಿಎಂ ಅಂಗಳ ತಲುಪಿದ ಬೇಳೂರು ರಾಘವೇಂದ್ರ ಶೆಟ್ಟಿ-ಡಿ.ರೂಪಾ ಜಟಾಪಟಿ..)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.