ETV Bharat / city

ಆನಂದ್​​ ಸಿಂಗ್​​ಗೆ ಖಾತೆಯ ಬಗ್ಗೆ ಅಸಮಾಧಾನವಿಲ್ಲ : ಆರ್. ಅಶೋಕ್​​ - ಆನಂದ್​​ ಸಿಂಗ್​​ಗೆ ಖಾತೆ ಗೊಂದಲ ಕುರಿತು ಆರ್ ಅಶೋಕ್​ ಹೇಳಿಕೆ

ಖಾತೆಯ ವಿಚಾರವಾಗಿ ಸಚಿವ ಆನಂದ್​ ಸಿಂಗ್​​ ಅವರಿಗೆ ಯಾವುದೇ ಅಸಮಾಧಾನವಿಲ್ಲ. ಅವರು ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಜೊತೆಗೆ ಅಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ ಎಂದು ಖಾತೆ ಕ್ಯಾತೆಯ ಕುರಿತು ಕಂದಾಯ ಸಚಿವ ಆರ್​. ಅಶೋಕ್​ ತಿಳಿಸಿದರು.

r ashok statement on anand singh minister post issue
ಆರ್ ಅಶೋಕ್​​
author img

By

Published : Aug 24, 2021, 5:14 PM IST

ಬೆಂಗಳೂರು: ಸಚಿವ ಆನಂದ್ ಸಿಂಗ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಈಗ ಎಲ್ಲವೂ ಬಗೆಹರಿದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು.

ಆನಂದ್​​ ಸಿಂಗ್​​ಗೆ ಖಾತೆಯ ವಿಚಾರವಾಗಿ ಆರ್​. ಅಶೋಕ್​​ ಹೇಳಿಕೆ

ವಿಕಾಸಸೌಧದಲ್ಲಿ ಆನಂದ್ ಸಿಂಗ್ ಜೊತೆ ಚರ್ಚೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು, ಸಿಎಂ ಹಾಗೂ ಶಾಸಕ ರಾಜು ಗೌಡ ಕುಳಿತು ಚರ್ಚಿಸಿದ್ದೇವೆ. ಆನಂದ್ ಸಿಂಗ್ ಒಪ್ಪಿಗೆ ಕೊಟ್ಟಿದ್ದಾರೆ. ಈಗ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೊತೆಗೆ ಸಭೆಯನ್ನೂ ನಡೆಸಲಿದ್ದಾರೆ ಎಂದರು.

ಆನಂದ್ ಸಿಂಗ್ ಯಾವುದೇ ಷರತ್ತು ಹಾಕಿಲ್ಲ. ನಾಳೆ ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲಿ ಆನಂದ್ ಸಿಂಗ್ ಖಾತೆ ಬಗ್ಗೆಯೂ ಚರ್ಚಿಸಲಿದ್ದಾರೆ. ಸದ್ಯಕ್ಕೆ ಈಗ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ತಿಳಿಸಿದರು.

ನಾನು ಯಾವುದೇ ಬೀದಿ ನಾಟಕವನ್ನಾಡುತ್ತಿಲ್ಲ : ಆನಂದ್ ಸಿಂಗ್​​

ಸಚಿವ ಆನಂದ್ ಸಿಂಗ್ ಮಾತನಾಡಿ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ನನ್ನ ಬೇಡಿಕೆ ಏನಿದೆಯೋ ಅದನ್ನು ಹೇಳಿದ್ದೇನೆ. ನನ್ನ ಮನವಿಯನ್ನು ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದೇನೆ. ಅವೆಲ್ಲವನ್ನೂ ನಿಮಗೆ ಹೇಳಬೇಕಾಗಿಲ್ಲ. ನಾನು ಯಾವ ಬೀದಿ ನಾಟಕವನ್ನೂ ಆಡುತ್ತಿಲ್ಲ ಎಂದು ಗರಂ ಆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.