ETV Bharat / city

ರಾಹುಲ್‌ ಗಾಂಧಿ ಸುಳ್ಳುಗಾರ ಅನ್ನೋದು ಸಾಬೀತು: ಆರ್.ಅಶೋಕ್ - ನೀರವ್ ಮೋದಿಗೆ ಸಾಲ

ರಾಹುಲ್​ ಗಾಂಧಿ ಪರಿವರ್ತನಾ ಸಮಾವೇಶ ಕುರಿತು ಮಾಜಿ ಡಿಸಿಎಂ ಆರ್​. ಅಶೋಕ್​ ವ್ಯಂಗ್ಯವಾಡಿದ್ದಾರೆ. ರಾಹುಲ್ ಪದೇ ಪದೆ ಸುಳ್ಳು ಹೇಳಿ ಅವರೊಬ್ಬ ಸುಳ್ಳುಗಾರ ಅನ್ನೋದನ್ನು ಸಾಬೀತುಪಡಿಸಿದ್ದಾರೆ ಎಂದರು.

ಆರ್​. ಅಶೋಕ್​ ಸುದ್ದಿಗೋಷ್ಟಿ
author img

By

Published : Mar 31, 2019, 11:18 PM IST

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೇ ಸುಳ್ಳು ಹೇಳುತ್ತ ಸುಳ್ಳುಗಾರ ಅನ್ನೋದನ್ನು ಸಾಬೀತುಪಡಿಸಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಖಾಸಗಿ ಹೊಟೇಲ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅವರಿಗೆ ಹೇಳೋದಿಕ್ಕೆ ಯಾವುದೇ ಹೊಸ ವಿಚಾರ ಇಲ್ಲ. ಹೇಳಿದ್ದನ್ನೇ ಹೇಳಿದ್ದಾರೆ. ಸುಮಾರು 60 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು. ನೀರವ್ ಮೋದಿಗೆ ಸಾಲ ಕೊಟ್ಟವರು ಯಾರು? ಈಗ ನರೇಂದ್ರ ಮೋದಿಯವರು ಆ ಹಣವನ್ನು ವಸೂಲಿ ಮಾಡ್ತಾ ಇದ್ದಾರೆ. ದೇಶದ ಹಣ ಲೂಟಿ ಮಾಡೋಕೆ ಅವಕಾಶ ಕೊಟ್ಟಿದ್ದು ಕಾಂಗ್ರೆಸ್​ನವರು ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು. ಅಧಿಕಾರ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡ್ತಿವಿ ಅಂತ ಕುಮಾರಸ್ವಾಮಿ ಹೇಳಿದ್ರು.‌ ರೈತರ ಸಾಲದ ಹೆಸರಲ್ಲಿ ಜನರನ್ನು ಮೋಸ ಮಾಡ್ತಿರೋರು ನೀವು ತಾನೇ‌ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಆರ್​. ಅಶೋಕ್​ ಸುದ್ದಿಗೋಷ್ಟಿ ನಡೆಸಿದರು.

ಯಡಿಯೂರಪ್ಪ ಡೈರಿ ಬಗ್ಗೆ ಇವತ್ತು ಮಾತಾಡ್ತಾರೆ.‌ ನಿಮಗೆ ಸತ್ಯಾಸತ್ಯತೆ ಗೊತ್ತಾಗಬೇಕಾದ್ರೆ ಯಾಕೆ ನೀವು ಕೋರ್ಟ್ ಮೆಟ್ಟಿಲೇರಲಿಲ್ಲ? ಎಂದು ಪ್ರಶ್ನಿಸಿದರು. ಇವತ್ತು ಬೆಂಗಳೂರಿಗೆ ಬಂದ ರಾಹುಲ್ ಕರ್ನಾಟಕದ ಅಭಿವೃದ್ಧಿ ಬಗ್ಗೆ ಏನೂ ಮಾತಾಡಿಲ್ಲ. ಕಾಟಾಚಾರಕ್ಕೆ ಬಂದು ಭಾಷಣ ಮಾಡಿ ಹೋಗಿದ್ದಾರೆ. ನರೇಂದ್ರ ಮೋದಿ ವಿರುದ್ಧ ಮಾತಾಡೋ ಅಧಿಕಾರ ಅವರಿಗೆಗೆ ಇಲ್ಲ ಎಂದು ಹರಿಹಾಯ್ದರು.

ಅಮಿತ್ ಶಾ ರೋಡ್ ಶೋ:

ಎ.2ರಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಲ್ಲಿ ರೋಡ್ ಶೋ ನಡೆಸಲಿದ್ದಾರೆ. ಆ ಮೂಲಕ ಬೆಂಗಳೂರಿನ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಲಿದ್ದಾರೆ ಎಂದು ಈ ವೇಳೆ ಅಶೋಕ್​ ತಿಳಿಸಿದರು.

ಬೆಂಗಳೂರಿನಲ್ಲಿ ದೊಡ್ಡ ಹವಾ ಸೃಷ್ಟಿಸುವ ನಿಟ್ಟಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬನಶಂಕರಿ ದೇವಸ್ಥಾನದಿಂದ 1ಕಿ.ಮೀ ರೋಡ್ ಶೋ ಕೈಗೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ಪದ್ಮನಾಭನಗರದ ಬನಶಂಕರಿ ದೇವಸ್ಥಾನದಿಂದ ರೋಡ್ ಶೋ ನಡೆಸಲಿದ್ದು, ಸುಮಾರು ಹತ್ತು ಸಾವಿರ ಜನ ಸೇರಲಿದ್ದಾರೆ ಎಂದು ತಿಳಿಸಿದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.