ಬೆಂಗಳೂರು: ಸಿದ್ದರಾಮಯ್ಯ ಅವರು ಇನ್ನು ನೂರು ಟ್ರೈನ್ ತಂದು ಟಿಪ್ಪು ಸುಲ್ತಾನ್, ಬಿನ್ ಲಾಡೆನ್, ಘಜನಿ ಮೊಹಮ್ಮದ್ ಹೆಸರಿಟ್ಟು ಓಡಿಸಲಿ ಎಂದು ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ರೈಲಿಗೆ ಟಿಪ್ಪು ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸರ್ಕಾರ ಒಳ್ಳೆಯ ಉದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ. ಮೈಸೂರು ಮಂಡ್ಯ ಭಾಗಕ್ಕೆ ನೀರು ಕೊಟ್ಟವರು ಒಡೆಯರ್. ತಮ್ಮ ಒಡವೆ ಮಾರಿ ಕೆಆರ್‌ಎಸ್ ಕಟ್ಟಿ ಕರ್ಣರಾದವರು. ಮೊದಲು ವಿದ್ಯುತ್ ತಯಾರಿಕೆ ಮಾಡಿದ್ದು, ಸೋಪ್, ಸಕ್ಕರೆ ತಯಾರಿಕೆ ಎಲ್ಲವನ್ನೂ ಕರ್ನಾಟಕಕ್ಕೆ ಕೊಟ್ಟವರು. ಅವರ ಹೆಸರಲ್ಲೇ ಜಂಬೂ ಸವಾರಿ ಆರಂಭವಾಗಿದ್ದು. ಟಿಪ್ಪು ಕನ್ನಡಿಗ ಅಂತ ಒಪ್ಪಿಯೇ ಇಲ್ಲ ಎಂದು ಕಿಡಿಕಾರಿದರು.
ಟಿಪ್ಪು ಆಡಳಿತ ಭಾಷೆ ಪರ್ಶಿಯನ್. ಕಗ್ಗೊಲೆ ಮಾಡಿ, ಮತಾಂತರಗೊಳಿಸಿದ್ದಾರೆ. ಚಲುವನಾರಾಯಣಸ್ವಾಮಿ ದೇವಸ್ಥಾನದ ಬಳಿ ಕೊಗ್ಗೊಲೆ ಮಾಡಿದ್ದಾನೆ. ಹಾಗಾಗಿ ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ. ಈ ಹೆಸರನ್ನು ಟ್ರೈನಿಗೆ ಇಟ್ರೆ ಜನರು ಮೆಚ್ತಾರೆ. ಅವರು ಅಧಿಕಾರಕ್ಕೆ ಬಂದಾಗ ಇಟ್ಟುಕೊಳ್ಳಲಿ. ನಮ್ಮ ಬೆಂಬಲ ಒಡೆಯರ್ ಅವರಿಗೆ ಎಂದರು.
ಮೀಸಲಾತಿ ವಿಚಾರದಲ್ಲಿ ಸಿಎಂ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಲಾಗಿದೆ. ಮೀಸಲಾತಿ ಹೆಚ್ಚಿಸಲು ನಿನ್ನೆ ಡಿಸೈಡ್ ಆಗಿದೆ. ಈಗಾಗಲೇ ಮಧ್ಯಪ್ರದೇಶ, ತಮಿಳುನಾಡು, ಕೇರಳದಲ್ಲಿ ಜಾಸ್ತಿ ಇದೆ. ಇದನ್ನು ಕಾನೂನಾತ್ಮಕವಾಗಿ ತಂದು ಜಾರಿಗೊಳಿಸ್ತೇವೆ.
ಈಗ ಬೇರೆ ರಾಜ್ಯಗಳಲ್ಲಿ ಮಾಡಿರೋದನ್ನ ಸ್ವಾಗತ ಮಾಡಿದ್ದಾರೆ. ನಮ್ಮಲ್ಲೂ ಬೇಡಿಕೆ ಹೆಚ್ಚಿರೋದ್ರಿಂದ ಜಾರಿಗೆ ತರ್ತೀವಿ. ಶೆಡ್ಯೂಲ್ 9 ಸಿದ್ದರಾಮಯ್ಯಗೆ ಈಗ ನೆನಪಾಯ್ತಾ? ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗ ಅದನ್ನು ಡಿಸೈನ್ ಮಾಡಿದ್ದು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರು ಕಾಂಗ್ರೆಸ್. ಅಂಬೇಡ್ಕರ್ ಸತ್ತಾಗ ಅವರಿಗೆ ಹೂಳಲು ಜಾಗವನ್ನೂ ಸಹ ಕೊಡಲಿಲ್ಲ. ಅವರಿಗೆ ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂವಿಧಾನ ಬದ್ಧವಾಗಿ ನ್ಯಾಯ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
-
ಒಡೆಯರ್ ಎಕ್ಸ್ ಪ್ರೆಸ್! pic.twitter.com/kKElefCzjD
— Pratap Simha (@mepratap) October 8, 2022 " class="align-text-top noRightClick twitterSection" data="
">ಒಡೆಯರ್ ಎಕ್ಸ್ ಪ್ರೆಸ್! pic.twitter.com/kKElefCzjD
— Pratap Simha (@mepratap) October 8, 2022ಒಡೆಯರ್ ಎಕ್ಸ್ ಪ್ರೆಸ್! pic.twitter.com/kKElefCzjD
— Pratap Simha (@mepratap) October 8, 2022
ಇಂದಿನಿಂದಲೇ ಸೇವೆ ಆರಂಭ: ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ಪ್ರೆಸ್ ಎಂದು ಬದಲಾಯಿಸಿ ರೈಲ್ವೆ ಇಲಾಖೆ ನಿನ್ನೆಯಷ್ಟೇ ಆದೇಶ ನೀಡಿದ್ದು, ಇಂದಿನಿಂದಲೇ ತನ್ನ ಸೇವೆಯನ್ನು ಆರಂಭಿಸಿದೆ. ಈ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ: ತಕ್ಷಣ ಆದೇಶ ಹೊರಡಿಸಲು ನಿರ್ಧಾರ