ಬೆಂಗಳೂರು : ಕರುನಾಡಿನ ಜನರ ಮುದ್ದಿನ ಅಪ್ಪು, ದೊಡ್ಡಮನೆಯ ಮಗ, ಯುವರತ್ನ, ನಟ ಪುನೀತ್ ರಾಜ್‌ಕುಮಾರ್ ಇಂದು ಅಪಾರ ಅಭಿಮಾನಿಗಳನ್ನ ಅಗಲಿದ್ದಾರೆ. ಅಣ್ಣ, ನಟ ಶಿವರಾಜ್ಕುಮಾರ್ ಅವರ ಭಜರಂಗಿ 2ಗೆ ಸಾಥ್ ನೀಡಿ ದೇವರ ಮುಡಿ ಸೇರಿದ 'ಬೆಟ್ಟದ ಹೂ' ಇನ್ನು ನೆನಪು ಮಾತ್ರ.
ಭಜರಂಗಿ 2 ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿದ್ದ ಯುವರತ್ನ, ನಟ ಪುನೀತ್ ರಾಜ್‌ಕುಮಾರ್ ಅವರು ತಾವು ಶಿವರಾಜ್ ಕುಮಾರ್ ಫ್ಯಾನ್ ಅಂತಾ ಹೇಳಿಕೊಂಡಿದ್ದರು.
ಅಲ್ಲದೆ ಶಿವಣ್ಣ ಸಿನಿಮಾಗಳಲ್ಲಿ ತಮ್ಮ ಮೆಚ್ಚಿನ ಸಿನಿಮಾ ಹಾಗೂ ಗೆಟಪ್ ಕುರಿತು ಹಂಚಿಕೊಂಡಿದ್ದರು. ಹಾಗೂ ಅಣ್ಣನ ಸಿನಿಮಾ ಹಾಡಿಗೆ ನಟ ಯಶ್ ಜೊತೆ ಸೇರಿ ಕುಣಿದು ಕುಪ್ಪಳಿಸಿದ್ದರು. ಇದು ಅಪ್ಪು ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮವಾಗಿದೆ.
ಇವ್ರ ಥರ ಡ್ಯಾನ್ಸ್, ಪೈಟ್ ಮಾಡ್ಬೇಕು, ಕಲಿಬೇಕು ಅಂತ ಭಾಳ ಆಸೆ ಇತ್ತು: ಅಪ್ಪು ಕುರಿತು ಯಶ್ ಮಾತು
ಬಿಗ್ ಸ್ಟಾರ್ ಆದ್ರೂ ದೊಡ್ಡಮನೆಯ ಫ್ಯಾನ್ ನಾನು ಎಂದು ಹೇಳಿಕೊಳ್ಳುವ ನಟ ಯಶ್, ಯುವ ಸಾಮ್ರಾಟ್ ಅಪ್ಪುವಿನ ಬಗ್ಗೆ ಅಭಿಮಾನಿಯಾಗಿ ಹೇಳಿದ್ದ ಮಾತುಗಳು ಇಂದು ನೆನೆಪಿಗೆ ಬರುತ್ತಿವೆ.