ETV Bharat / city

ನ್ಯೂಜೆರ್ಸಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಮಗಳು ಧೃತಿಯಿಂದ ಪೂಜೆ! - ನ್ಯೂಜರ್ಸಿಯಲ್ಲಿ ಜೇಮ್ಸ್ ಸಿನಿಮಾ

ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಕನ್ನಡಿಗರು ಪವರ್ ಸ್ಟಾರ್ ಅವರ ಜೇಮ್ಸ್ ಸಿನಿಮಾದ ಸಂಭ್ರಮವನ್ನ ಬಹಳ ವಿಶೇಷವಾಗಿ ಸೆಲೆಬ್ರೆಟ್ ಮಾಡಿದ್ದು, ಅಪ್ಪು ಪುತ್ರಿ ಧೃತಿ ಪುನೀತ್ ರಾಜ್​ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ..

puneet-rajkumar-daughter-druti-worships-puneeth-photo-on-america
ನ್ಯೂಜೆರ್ಸಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಮಗಳು ಧೃತಿಯಿಂದ ಪೂಜೆ!
author img

By

Published : Mar 22, 2022, 2:39 PM IST

Updated : Mar 22, 2022, 4:16 PM IST

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್. ಕರ್ನಾಟಕ ಅಲ್ಲದೇ, ವಿದೇಶಗಳಲ್ಲೂ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಜೇಮ್ಸ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚ ಶೋಗಳ ಪ್ರದರ್ಶನ ಕಾಣುವ ಜೊತೆಗೆ, ನಾಲ್ಕೇ ದಿನದಲ್ಲಿ ನೂರು ಕೋಟಿ ಕ್ಲಬ್ ಸೇರುವ ಮೂಲಕ ರೆಕಾರ್ಡ್ ಮಾಡಿದೆ‌. ಸಹಜವಾಗಿ ಭಾನುವಾರ ಆದ್ಮೇಲೆ ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಅಮೆರಿಕದಲ್ಲಿ 100ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಜೇಮ್ಸ್ ಚಿತ್ರ ಸಂಭ್ರಮವನ್ನು ಅಮೆರಿಕಾದಲ್ಲಿ ಕನ್ನಡಿಗರು ಬಹಳ ಸಡಗರದಿಂದ‌ ರಿಸೀವ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಕೆನಡಾ ಹಾಗೂ ನ್ಯೂಯಾರ್ಕ್​ನಲ್ಲಿರೋ ಕನ್ನಡಿಗರು ಜೇಮ್ಸ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ.

ಇದರ ಜೊತೆಗೆ ಪುನೀತ್ ರಾಜ್‍ಕುಮಾರ್ ದೊಡ್ಡ ಮಗಳು ಧೃತಿ ಇರುವ ನ್ಯೂಜೆರ್ಸಿಯಲ್ಲೂ ಪುನೀತ್ ರಾಜ್‍ಕುಮಾರ್ ಹವಾ ಜೋರಾಗಿದೆ‌. ನ್ಯೂಜೆರ್ಸಿಯಲ್ಲಿರೋ ಕನ್ನಡಿಗರು ಜೇಮ್ಸ್ ಸಿನಿಮಾದ ಸಂಭ್ರಮವನ್ನ ಬಹಳ ವಿಶೇಷವಾಗಿ ಸೆಲೆಬ್ರೆಟ್ ಮಾಡಿದ್ದಾರೆ‌.

ಪುನೀತ್ ಭಾವಚಿತ್ರಕ್ಕೆ ಮಗಳು ಧೃತಿಯಿಂದ ಪೂಜೆ

ಬ್ಯಾನರ್ ಹಾಗೂ ಫೋಟೋ ಮುಂದೆ ಪುನೀತ್ ಪುತ್ರಿ ಧೃತಿ ದೀಪ ಹಚ್ಚುವ ಮೂಲಕ ಅಪ್ಪನ‌ ಸ್ಮರಣೆ ಮಾಡಿದ್ದಾರೆ. ಇದರ ಜೊತೆಗೆ ನ್ಯೂಜೆರ್ಸಿಯಲ್ಲಿರೋ ಕನ್ನಡಿಗರು ಅಪ್ಪುವಿಗೆ ಜೈಕಾರ ಹಾಕುವ ಮೂಲಕ, ರಾಜಕುಮಾರ ಹಾಡಿಗೆ ಮಕ್ಕಳಿಂದ ನೃತ್ಯ ಮಾಡಿದರು.

ಇದನ್ನೂ ಓದಿ: ಮೈಸೂರು ವಿವಿಯಿಂದ ಅಪ್ಪುಗೆ ಗೌರವ ಡಾಕ್ಟರೇಟ್​ ಪ್ರದಾನ.. ವಿಡಿಯೋ

ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಹಾಗೂ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ‌.

ಇದು ಪವರ್ ಸ್ಟಾರ್ ಮೇಲೆ ಇರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಸದ್ಯ ಕರ್ನಾಟಕ ಅಲ್ಲದೇ ವಿಶ್ವದೆಲ್ಲೆಡೆ ಜೇಮ್ಸ್ ಜಾತ್ರೆ ನಡೆಯುತ್ತಿರೋದು ಪವರ್ ಸ್ಟಾರ್ ಆಶೀರ್ವಾದ ಅಂತಾ ಅವರ ಅಭಿಮಾನಿಗಳೇ ಹೇಳುತ್ತಿದ್ದಾರೆ.

Last Updated : Mar 22, 2022, 4:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.