ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಸದ್ಯ ಉಪ್ಪಾರ ಪೇಟೆ ಪೊಲೀಸ್ ಠಾಣೆಯ ಪಿಎಸ್ಐಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ.
ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಅವರ ಕ್ಲರ್ಕ್ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಕ್ಲರ್ಕ್ ಜೊತೆ ಸಂಪರ್ಕ ಹೊಂದಿದ್ದವರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ಪಿಎಸ್ಐಗೆ ಸೋಂಕು ಇರುವುದು ದೃಢವಾಗಿದ್ದು, ಸೋಂಕಿತ ಪಿಎಸ್ಐ ಅವರನ್ನ ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿಎಸ್ಐ ಸಂಪರ್ಕದಲ್ಲಿರುವವರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಉಪ್ಪಾರಪೇಟೆ ಠಾಣೆಯನ್ನು ಸೀಲ್ಡೌನ್ ಮಾಡಿ ಸಾರ್ವಜನಿಕರ ಸಂಪರ್ಕ ನಿಷೇಧಿಸಲಾಗಿದೆ.